ಮಾವಿನ ಹಣ್ಣಿನಿಂದ ಕೊರೊನಾ ಬರಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು , ಮೇ 28- ಮಾವಿನ ಹಣ್ಣಿನಿಂದ ಕೊರೊನಾ ಬರೋದಿಲ್ಲ. ಮಾವಿನ ಹಣ್ಣು ತಿನ್ನೋದ್ರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ. ನಿನ್ನೆ ಮಂಡ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆಡಿದ ಮಾತನ್ನ ತಪ್ಪಾಗಿ ಅರ್ಥೈಸಲಾಗಿದೆ. ಕೆ.ಆರ್.ಪೇಟೆ ತಾಲೂಕಿನ ಮರುವನಹಳ್ಳಿಯನ್ನ ಸೀಲ್‍ಡೌನ್ ಮಾಡಲಾಗಿತ್ತು.

ಆ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಸುಮಾರು 14 ಜನ ಸೇರಿ ಅಲ್ಲಿ ಮಿಟಿಂಗ್ ಮಾಡಿದ್ದರು. ಈ ವೇಳೆ ಮಾವಿನ ಹಣ್ಣನ್ನು ಕಟ್ ಮಾಡಿ ಹಂಚಿಕೊಂಡು ತಿಂದಿದ್ದರು. ಇದರಿಂದಾಗಿ ಅವರೆಲ್ಲರಿಗು ಪರಸ್ಪರ ಸೋಂಕು ಹರಡಿರಬಹುದು ಎಂದು ಕ್ವಾರಂಟೈನ್ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದಾಅಷ್ಟೆ.

ಮಾವಿನ ಹಣ್ಣಿನಿಂದ ಕೊರೋನಾ ಬರಲ್ಲ. ನಿನ್ನೆ ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಚಿವ ನಾರಾಯಣಗೌಡ ಸ್ಪಷ್ಟನೆ ನೀಡಿದ್ದಾರೆ.

Facebook Comments