ವಿಶ್ವಪರಿಸರ ದಿನ : ಭಾರತೀಯರಿಗೆ ಪ್ರಧಾನಿ ಕರೆ, ಜೀವ ವೈವಿಧ್ಯತೆ ರಕ್ಷಣೆಗೆ ಶಪಥ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.5- ಇಂದು ವಿಶ್ವ ಪರಿಸರ ದಿನ. ಈ ಸಂದರ್ಭದಲ್ಲಿ ಭಾರತೀಯರಿಗೆ ಕರೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ನಮ್ಮ ಜೀವ ವೈವಿಧ್ಯತೆ ಸಂರಕ್ಷಣೆಗೆ ಎಲ್ಲರೂ ಶಪಥ ಮಾಡೋಣ ಎಂದು ಪುನರುಚ್ಚರಿಸಿದ್ದಾರೆ.

ಭವಿಷ್ಯದ ಜನಾಂಗಗಳಿಗಾಗಿ ನಮ್ಮ ಭೂಮಿಯಲ್ಲಿ ಉತ್ತಮ ಸ್ಥಳವನ್ನಾಗಿ ಮಾಡಲು ನಾವೆಲ್ಲರೂ ಸಂಘಟಿತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಸಲಹೆ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮೋದಿ, ಇಂದು ವಿಶ್ವ ಪರಿಸರ ದಿನಾಚರಣೆ. ನಮ್ಮ ಸಮೃದ್ಧ ಜೀವ ವೈವಿಧ್ಯತೆಯನ್ನು ರಕ್ಷಿಸಲು ನಾವೆಲ್ಲರೂ ಪಣ ತೊಡೋಣ. ನಮ್ಮ ಭೂಮಂಡಲವನ್ನು ನಮ್ಮೊಂದಿಗೆ ಹಂಚಿಕೊಂಡಿರುವ ಪ್ರಾಣಿ ಮತ್ತು ಸಸ್ಯ ಸಂಕುಲಗಳ ಸಂರಕ್ಷಣೆಗಾಗಿಯೂ ಸಹ ನಾವು ನಮ್ಮ ಸಾಮೂಹಿಕ ಯತ್ನಗಳನ್ನು ಮುಂದುವರಿಸೋಣ ಎಂದು ಕರೆ ಕೊಟ್ಟಿದ್ದಾರೆ.

ನಮ್ಮ ಭವಿಷ್ಯದ ಪೀಳಿಗೆಗಳ ಹಿತದೃಷ್ಟಿಯಿಂದಲೂ ನಾವು ನಮ್ಮ ಭೂಮಿಯನ್ನು ರಕ್ಷಿಸಿ ಅವರಿಗೆ ಇದು ಉತ್ತಮ ನೆಲೆಯಾಗುವಂತೆ ಮಾಡಬೇಕಿದೆ. ಇದಕ್ಕಾಗಿ ಎಲ್ಲರೂ ಶಪಥ ಮಾಡಬೇಕೆಂದು ಮೋದಿ ಸಲಹೆ ಮಾಡಿದ್ದಾರೆ.

Facebook Comments