ಮೋದಿ-ಟ್ರಂಪ್ ಮಹತ್ವದ ಫೋನ್ ಸಂಭಾಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Modi-and-Trump
ವಾಷಿಂಗ್ಟನ್/ನವದೆಹಲಿ, ಜ.8- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನಿನ್ನೆ ದೂರವಾಣಿ ಮೂಲಕ ಮಹತ್ವದ ಮಾತುಕತೆ ನಡೆಸಿದ್ದಾರೆ. ಇವರಿಬ್ಬರ ಸಂಭಾಷಣೆ ವೇಳೆ ದ್ವಿಪಕ್ಷೀಯ ವಿಷಯಗಳು ಚರ್ಚೆಗೆ ಬಂದವು.

ಆಫ್ಘಾನಿಸ್ತಾನದ ಅಭಿವೃದ್ಧಿ ವಿಷಯದಲ್ಲಿ ಪರಸ್ಪರ ಸಹಕಾರ, ವಾಣಿಜ್ಯ ಮೋದಿ-ಟ್ರಂಪ್ ನಡುವಿನ ಮಾತುಕತೆಯ ಪ್ರಮುಖ ವಿಷಯಗಳಾಗಿವೆ. 2019ರಲ್ಲಿ ಅಮೆರಿಕ-ಭಾರತ ನಡುವಿನ ಕಾರ್ಯ ತಂತ್ರದ ಪಾಲುದಾರಿಕೆಯನ್ನು ಬಲಿಷ್ಠಗೊಳಿಸುವ ಬಗ್ಗೆ ಉಭಯ ನಾಯಕರೂ ಚರ್ಚಿಸಿದ್ದು, ಅಮೆರಿಕ-ಭಾರತದ ನಡುವಿನ ವಾಣಿಜ್ಯ ಅಂತರವನ್ನು ಕಡಿಮೆ ಮಾಡುವುದರ ಬಗ್ಗೆ ಮಾತನಾಡಿದ್ದಾರೆ.

ಅಮೆರಿಕ-ಭಾರತದ ನಡುವೆ ವ್ಯಾಪಾರ ವಿತ್ತೀಯ ಕೊರತೆಯನ್ನು ಕೊನೆಗೊಳಿಸಲು ಅಮೆರಿಕ ಭಾರತದಿಂದ ಆಮದು ಮಾಡಿಕೊಳ್ಳುತ್ತಿರುವ ಉಕ್ಕು ಹಾಗೂ ಅಲ್ಯುಮಿನಿಯಂಗೆ ಹೆಚ್ಚಿನ ತೆರಿಗೆ ವಿಧಿಸಿದ್ದರು.

ಈ ಬೆನ್ನಲ್ಲೇ ಭಾರತವೂ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ತೆರಿಗೆ ಹೆಚ್ಚು ವಿಧಿಸುವುದಾಗಿ ಹೇಳಿತ್ತು. ಇವರಿಬ್ಬರ ನಡುವೆ ದ್ವಿಪಕ್ಷೀಯ ವಿಷಯಗಳ ನಡುವೆ ಸಮಾಲೋಚನೆ ನಡೆದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಉಭಯ ದೇಶಗಳ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin