ಲಂಕಾ ಅಧ್ಯಕ್ಷರ ನಿವಾಸದಲ್ಲಿ ಅಶೋಕ ಗಿಡ ನೆಟ್ಟ ಮೋದಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕೊಲಂಬೊ, ಜೂ. 9- ದ್ವೀಪರಾಷ್ಟ್ರ ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಅಧಿಕೃತ ನಿವಾಸದಲ್ಲಿ ಅಶೋಕ ಗಿಡ ನೆಟ್ಟು ನೀರೆರದರು. ರಾಜಧಾನಿ ಕೊಲಂಬೊಗೆ ಇಂದು ಆಗಮಿಸಿದ ಮೋದಿ ರಾಷ್ಟ್ರಾಧ್ಯಕ್ಷರ ನಿವಾಸದಲ್ಲಿ ಭೋಜನ ಕೂಟ ಮತ್ತು ಮಾತುಕತೆಗೆ ತೆರಳಿದರು.

ಈ ಸಂದರ್ಭದಲ್ಲಿ ಅವರ ನಿವಾಸದ ಉದ್ಯಾನವನದಲ್ಲಿದ್ದ ಮರಗಿಡಗಳನ್ನು ವೀಕ್ಷಿಸಿ ಅಲ್ಲಿ ಅಶೋಕ ಸಸ್ಯವನ್ನು ನೆಟ್ಟು ನೀರೆರದರು. ನಂತರ ಭೋಜನ ಕೂಟದ ಬಳಿಕ ಸಿರಿಸೇನಾ ಅವರೊಂದಿಗೆ ಉಭಯ ದೇಶಗಳ ದ್ವಿಪಕ್ಷೀಯ ಬಲವರ್ಧನೆ ಕುರಿತು ಸಮಾಲೋಚನೆ ನಡೆಸಿದರು.

ಭಯೋತ್ಪಾದನೆ ನಿಗ್ರಹಕ್ಕೆ ಬೆಂಬಲ : ಶ್ರೀಲಂಕಾಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ದ್ವೀಪ ರಾಷ್ಟ್ರದ ಅಧ್ಯಕ್ಷ ಸಿರಿಸೇನಾ ಮೈತ್ರಿ ಪಾಲ ಮತ್ತು ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.  ಭಾರತ- ಶ್ರೀಲಂಕಾ ನಡುವಣ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಕಾರ ಸಂಬಂಧ ಮುಂದುವರೆಸುವ ಕುರಿತು ಈ ನಾಯಕರೊಂದಿಗೆ ಮೋದಿ ಗಹನ ಸಮಾಲೋಚನೆ ನಡೆಸಿದರು.

ಭಯೋತ್ಪಾದನೆ ವಿರುದ್ಧ ಶ್ರೀಲಂಕಾದ ಹೋರಾಟಕ್ಕೆ ಭಾರತ ಸಂಪೂರ್ಣ ಸಹಕಾರ , ಬೆಂಬಲ ನೀಡಲಿದೆ ಎಂದು ಮೋದಿ ಪುನರುಚ್ಚರಿಸಿದರು. ದಕ್ಷಿಣ ಏಷ್ಯಾದ ದ್ವೀಪ ಸಮೂಹಗಳ ರಾಷ್ಟ್ರ ಮಾಲ್ಡೀವ್ಸ್‍ಗೆ ಎರಡು ದಿನಗಳ ಭೇಟಿ ನಂತರ ಇಂದು ಬೆಳಗ್ಗೆ ರಾಜಧಾನಿ ಮಾಲೆಯಿಂದ ಶ್ರೀಲಂಕಾಗೆ ಆಗಮಿಸಿದ ಮೋದಿಯವರನ್ನು ಕೊಲಂಬೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಂಕಾ ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಆತ್ಮೀಯವಾಗಿ ಸ್ವಾಗತಿಸಿದರು.

ನಂತರ ಮೋದಿಯವರು ರಾಷ್ಟ್ರಾಧ್ಯಕ್ಷ ಸಿರಿಸೇನಾ ಮೈತ್ರಿ ಪಾಲ ಮತ್ತು ಪ್ರಧಾನಿ ವಿಕ್ರಮ ಸಿಂಘೆ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಕುರಿತು ಸಮಾಲೋಚನೆ ನಡೆಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin