ನರ್ಮದಾ ನದಿಯಲ್ಲಿ ದೋಣಿ ಮುಳುಗಿ ಮೂವರು ನಾಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬರ್ವಾ (ಮಧ್ಯಪ್ರದೇಶ), ಜ.9- ನರ್ಮದಾ ನದಿ ದಾಟುತ್ತಿದ್ದ ದೋಣಿ ನೀರಿನ ಮಧ್ಯದಲ್ಲಿದ್ದ ಸೇತುವೆ ಕಂಬಕ್ಕೆ ಬಡಿದು ಉರುಳಿ ಒಬ್ಬರು ಮಹಿಳೆ ಸೇರಿದಂತೆ ಮೂವರು ನಾಪತ್ತೆಯಾಗಿದ್ದಾರೆ. ಹನ್ನೊಂದು ಮಂದಿಯನ್ನು ಹೊತ್ತ ದೋಣಿ ಮಧ್ಯಾಹ್ನ ನರ್ಮದಾ ನದಿ ಆ ಕಡೆ ಪ್ರದೇಶಕ್ಕೆ ತೆರುಳುತ್ತಿತ್ತು. ಖಾರ್‍ಗೋನ್ ಜಿಲ್ಲೆಯ ಖಾಂಡ್ವ ಬಳಿಯ ಸೇತುವೆ ಬಳಿ ಬಂದಾಗ ದೋಣಿ ಅಲೆಯ ಒತ್ತಡಕ್ಕೆ ಸಿಲುಕಿ ಬೃಹತ್ ಪಿಲ್ಲರ್‍ವೊಂದಕ್ಕೆ ಡಿಕ್ಕಿ ಹೊಡೆದಿದೆ. ದೋಣಿ ನಿಯಂತ್ರಣಕ್ಕೆ ಸಿಗದೆ ತಲೆ ಕೆಳಗಾಗಿದೆ ಎಲ್ಲರೂ ನೀರಿಗೆ ಬಿದ್ದಿದ್ದಾರೆ.

ನದಿ ಪಾತ್ರದ ಜನರು ಹಾಗೂ ರಕ್ಷಣಾ ಪಡೆ ಸಿಬ್ಬಂದಿ ಎಂಟು ಮಂದಿಯನ್ನು ರಕ್ಷಿಸಿದ್ದಾರೆ. ಒಬ್ಬ ಮಹಿಳೆ ಮತ್ತು ಇತರ ಇಬ್ಬರು ವ್ಯಕ್ತಿಗಳು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಅವರ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Facebook Comments