ಫೋನಿ ಚಂಡಮಾರುತ ಪೀಡಿತ ರಾಜ್ಯಗಳಿಗೆ ಪ್ರಧಾನಿ ಮೋದಿ ಅಭಯ

ಈ ಸುದ್ದಿಯನ್ನು ಶೇರ್ ಮಾಡಿ

ಹಿಂದೌನ್(ರಾಜಸ್ತಾನ), ಮೇ 3- ಫೋನಿ ಚಂಡಮಾರುತದಿಂದ ನಲುಗಿರುವ ಓಡಿಶಾ ಸೇರಿದಂತೆ ನಾಲ್ಕು ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಯ ನೀಡಿದ್ದಾರೆ. ಈ ರಾಜ್ಯಗಳಿಗೆ ಮತ್ತು ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಕೇಂದ ಸರ್ಕಾರ ಸರ್ವ ಸನ್ನದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ರಾಜಸ್ತಾನದ ಹಿಂದೌನ್‍ನಲ್ಲಿ ಇಂದು ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಚಂಡಮಾರುತ ಸಂತ್ರಸ್ತ ರಾಜ್ಯಗಳ ಪರಿಸ್ಥಿತಿ ಮೇಲೆ ಕೇಂದ್ರ ಸರ್ಕಾರ ಸೂಕ್ತ ನಿಗಾ ವಹಿಸಿದೆ. ಈಗಾಗಲೇ ಆ ರಾಜ್ಯಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಕೇಂದ್ರ ನೆರವು ನೀಡಿದೆ ಎಂದು ತಿಳಿಸಿದರು.

ಸೈಕ್ಲೋನ್ ಪೀಡಿತ ರಾಜ್ಯಗಳಲ್ಲಿ ತುರ್ತು ಪರಿಹಾರ ಕೈಗೊಳ್ಳಲು ಈಗಾಗಲೇ 1,000 ಕೋಟಿ ರೂ.ಗಳಿಗೆಊ ಅಧಿಕ ಮೊತ್ತೆ ಬಿಡುಗಡೆ ಮಾಡಲಾಗಿದೆ. ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ತಾವು ಇಂದು ಬೆಳಗ್ಗೆ ಮಾತನಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾಗಿ ಪ್ರಧಾನಿ ಹೇಳಿದರು.

ಜೈಷ್ ಮುಖ್ಯಸ್ಥ ಮಸೂದ್ ಅಜರ್‍ನನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ನಮ್ಮ ರಾಜತಾಂತ್ರಿಕ ಯತ್ನಕ್ಕೆ ಗೆಲುವು ಲಭಿಸಿದೆ. ಇಡೀ ವಿಶ್ವ ಈಗ ಭಾರತದತ್ತ ನೋಡುತ್ತಿದೆ. ಭಯೋತ್ಪಾದನೆ ನಿರ್ಮೂಲನೆಗೆ ಭಾರತ ಸರ್ವಸನ್ನದ್ಧ ಎಂಬುದನ್ನು ಇದು ತೋರಿಸಿದೆ ಎಂದರು.

ದೇಶದಲ್ಲಿ ಸುರಕ್ಷತೆ ಮತ್ತು ಭದ್ರತೆ ವಾತಾವರಣ ಸುಧಾರಿಸುತ್ತಿದೆ. ಇದು ಕಾಂಗ್ರೆಸ್‍ಗೆ ಸಹಿಸಲಾಗುತ್ತಿಲ್ಲ. ಅಜರ್‍ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸಿರುವುದಕ್ಕೆ ಸಂಭ್ರಮಿಸುವ ಬದಲು ವಿರೋಧ ಪಕ್ಷಗಳು ಇಲ್ಲಸಲ್ಲದ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಟೀಕಿಸಿದರು.

ಕಾಂಗ್ರೆಸ್ ಆಡಳಿತದಲ್ಲಿ ಯಾವ ನಗರವೂ ಸುಭದ್ರ ಸ್ಥಿತಿಯಲ್ಲಿರಲಿಲ್ಲ. ಭಯೋತ್ಪಾದಕರ ದಾಳಿ ಸಾಮಾನ್ಯವಾಗಿತ್ತು. ಆದರೆ, ನಮ್ಮ ಸರ್ಕಾರ ಉಗ್ರರಿಗೆ ಅವರ ಭಾಷೆಯಲ್ಲೇ ಉತ್ತರ ನೀಡಿ ಮಟ್ಟ ಹಾಕುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು.

Facebook Comments

Sri Raghav

Admin