ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‍ಗೆ ಮುಖಭಂಗ, ಪ್ರತ್ಯೇಕ ಪ್ರವೇಶ ಪರೀಕ್ಷೆ ರದ್ದುಗೊಳಿಸಿದ ಸುಪ್ರೀಂಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.21-ಐದು ವರ್ಷಗಳ ಸಮಗ್ರ ಬಿಎ ಎಲ್‍ಎಲ್‍ಬಿ(ಹಾನರ್ಸ್) ಪದವಿಗಾಗಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್‍ಎಲ್‍ಎಸ್‍ಐಯು) ನಡೆಸಿದ್ದ ಪ್ರತ್ಯೇಕ ಪ್ರವೇಶ ಪರೀಕ್ಷೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ರಾಷ್ಟ್ರೀಯ ಕಾನೂನು ಶಾಲೆಗೆ ಮುಖಭಂಗವಾಗಿದೆ.

ಎನ್‍ಎಲ್‍ಎಸ್‍ಐಯು ಸೆ.12ರಂದು ತನ್ನ ಇಂಟಿಗ್ರೇಟೆಡ್ ಬಿಎ ಎಲ್‍ಎಲ್‍ಬಿ(ಹಾನರ್ಸ್) ಡಿಗ್ರಿ ಪ್ರವೇಶಕ್ಕಾಗಿ ನ್ಯಾಷನಲ್ ಲಾ ಅಪ್ಟಿಟ್ಯೂಡ್ ಟೆಸ್ಟ್ (ಎನ್‍ಎಲ್‍ಎಟಿ)-2020 ಪ್ರತ್ಯೇಕ ಪರೀಕ್ಷೆ ನಡೆಸಲು ಅಸೂಚನೆ ಹೊರಡಿಸಿ ಪರೀಕ್ಷೆ ನಡೆಸಿತ್ತು. ಸುಪ್ರೀಂಕೋರ್ಟ್ ಅಧಿಸೂಚನೆ ಮತ್ತು ಪ್ರತ್ಯೇಕ ಪರೀಕ್ಷೆಯನ್ನು ರದ್ದುಗೊಳಿಸಿದೆ.

ಅಲ್ಲದೇ ಸೆ.28ರಂದು ನಡೆಯಲಿರುವ ಸಿಎಲ್‍ಎಟ-2020ಗೆ ಅನುಗುಣವಾಗಿ ಎಲ್ಲ 22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು (ಎನ್‍ಎಲ್‍ಯುಗಳು) ಪ್ರವೇಶ ಪ್ರಕ್ರಿಯೆ ನಡೆಸುವಂತೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠವು ಈ ಸಂಬಂಧ ಎನ್‍ಎಲ್‍ಎಸ್‍ಐಯು ಮಾಜಿ ಉಪ ಕುಲಪತಿ ಪ್ರೊ.ಆರ್.ವೆಂಕಟರಾವ್ ಅವರು ಎನ್‍ಎಲ್‍ಎಟಿ-2020 ವಿರುದ್ಧ ಸಲ್ಲಿಸಿದ್ದ ಅರ್ಜಿ ಕುರಿತು ಈ ಆದೇಶ ನೀಡಿದೆ.

Facebook Comments