ಯುದ್ಧ ಸ್ಮಾರಕದಲ್ಲಿ ಹುತಾತ್ಮರಿಗೆ ಪ್ರಧಾನಿ ಮೋದಿ ಶ್ರದ್ದಾಂಜಲಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.26-ರಾಜಧಾನಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ತೆರಳಿ ಹುತಾತ್ಮ ವೀರಗ್ರಣಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
71ನೇ ಗಣರಾಜ್ಯೋತ್ಸವದ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೂ ಮುನ್ನ ಪ್ರಧಾನಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಅಲ್ಲಿ ನಡೆದ ಪ್ರಮುಖ ಕಾರ್ಯಕ್ರಮದಲ್ಲಿ ಭಾಗವಹಿಸಿ ಹುತಾತ್ಮರಿಗೆ ಗೌರವ ಸಮರ್ಪಿಸಿದರು.

ಪ್ರಧಾನಿ ಮೋದಿ ಭಾರತೀಯ ಭೂ ಸೇನೆ, ವಾಯುಪಡೆ ಮತ್ತು ನೌಕದಳದ ಮುಖ್ಯಸ್ಥರು ಹಾಗೂ ಈ ಮೂರು ಸಶಸ್ತ್ರ ಪಡೆಗಳ ಮಹಾಮುಖ್ಯಸ್ಥರೊಂದಿಗೆ ಇಂಡಿಯಾ ಗೇಟ್ ಸಮೀಪವೇ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲು. ಹೀಗಾಗಿ ಇದು ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು.

ಗಣ್ಯರಾಜ್ಯೋತ್ಸವದ ದಿನ ಹುತಾತ್ಮ ಯೋಧರಿಗೆ ದೆಹಲಿಯ ಇಂಡಿಯಾ ಗೇಟ್‍ಬ ಳಿ 1972ರಲ್ಲಿ ನಿರ್ಮಾಣಗೊಂಡ ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲೇ ಪ್ರಧಾನಿ ಗೌರವ ಸಲ್ಲಿಸುವುದು ಇದುವರೆಗಿನ ಸಂಪ್ರದಾಯವಾಗಿತ್ತು.

ಆದರೆ ಈ ಬಾರಿ ಗಣರಾಜ್ಯೋತ್ಸವದ ಪರೇಡ್‍ಗೆ ಆಗಮಿಸುವ ಮುನ್ನ ಅವರು ಅಮರ್ ಜವಾನ್ ಜ್ಯೋತಿಗೆ ಪುಷ್ಪಗುಚ್ಚ ಅರ್ಪಿಸುವ ಸಂಪ್ರದಾಯಕ್ಕೆ ತೆರೆ ಎಳೆದು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮರಿಗೆ ನಮನ ಸಲ್ಲಿಸಿದರು.

Facebook Comments