ಭಾರತದ ಬೆಂಬಲಕ್ಕೆ ನಿಂತ ನ್ಯಾಟೋದ 30 ದೇಶಗಳು, ಜಂಟಿ ಸಮರಾಭ್ಯಾಸಕ್ಕೆ ಸಿದ್ದತೆ, ಚೀನಾಗೆ ಆಘಾತ..! ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.30-ಇಂಡೋ-ಚೀನಾ ಗಡಿ ಭಾಗದಲ್ಲಿ ಉಭಯ ದೇಶಗಳ ನಡುವೆ ತಲೆದೋರಿರುವ ಬಿಕ್ಕಟ್ಟು ಮುಂದುವರಿದಿರುವ ಸಂದರ್ಭದಲ್ಲೇ ಅಮೆರಿಕ ಸೇರಿದಂತೆ ವಿಶ್ವದ ಅನೇಕ ದೇಶಗಳ ಬೆಂಬಲ ವ್ಯಕ್ತವಾಗಿರುವುದು ಭಾರತಕ್ಕೆ ಆನೆ ಬಲ ಬಂದಂತಾಗಿದೆ.  ಅಲ್ಲದೇ ಸಮರಾಭ್ಯಾಸದಲ್ಲಿ ಭಾರತಕ್ಕೆ ಸಾಥ್ ನೀಡಲು ನ್ಯಾಟೋದ 30 ದೇಶಗಳು ಸಜ್ಜಾಗಿದ್ದು, ಚೀನಾಗೆ ಭಾರೀ ಆಘಾತ ನೀಡಿದೆ.

ಚೀನಾದ ದುರ್ವತನೆ ಬಗ್ಗೆ ನ್ಯಾಟೋ ನಾರ್ಥ್ ಆಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್) ರಾಷ್ಟ್ರಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕಮ್ಯೂನಿಸ್ಟ್ ಗಡಿ ಭಾಗದಲ್ಲಿ ಚೀನಾದ ಚಲನವಲನದ ಮೇಲೆ ನಿಗಾ ವಹಿಸಿದೆ.

ಭೂಸೇನೆ, ವಾಯುಪಡೆ ಮತ್ತು ನೌಕಾದಳ ಈ ಮೂರು ವಿಭಾಗಗಳಲ್ಲಿ ಭಾರತದ ಜೊತೆ ನ್ಯಾಟೋದ ಸದಸ್ಯ ದೇಶಗಳು ಜಂಟಿ ಸಮರಾಭ್ಯಾಸದಲ್ಲಿ ಸಹಕಾರ ನೀಡಲಿವೆ.

ಈಗಾಗಲೇ ನ್ಯಾಟೋ ಹಿಂದೆಂದಿಗಿಂತಲೂ ಚೀನಾ ಮೇಲೆ ಹೆಚ್ಚಿನ ನಿಗಾ ವಹಿಸಿದ್ದು, ಗಡಿ ಸರಹದ್ದಿನಲ್ಲಿ ಪದೇ ಪದೇ ತಗಾದೆಯ ಕಿರುಕುಳ ನೀಡುತ್ತಿರುವ ಚೀನಾ ಸೇನಾಪಡೆಗೆ ಬಿಸಿ ಮುಟ್ಟಿಸಲು ಸಜ್ಜಾಗಿರುವ ಭಾರತೀಯ ಸೇನೆಗೆ ನೆರವಾಗಲು ವಿಶೇಷ ಪರಿಣಿತಿ ಪಡೆದಿರುವ ಪಡೆಗಳನ್ನು ಲಡಾಕ್‍ನ ವಾಸ್ತವ ನಿಯಂತ್ರಣ ರೇಖೆ (ಎಲ್‍ಎಸಿ) ಬಳಿ ನಿಯೋಜಿಸಿದೆ.

ಇದೇ ಸಂದರ್ಭದಲ್ಲೇ ನ್ಯಾಟೋ ಮತ್ತು ಭಾರತದ ನಡುವಣ ಜಂಟಿ ಸಮರಾಭ್ಯಾಸ ಭಾರೀ ಮಹತ್ವ ಪಡೆದುಕೊಂಡಿದೆ. ಭಾರತಕ್ಕೆ ಅನೇಕ ದೇಶಗಳು ಬೆಂಬಲ ನೀಡಿದ್ದು, ಅಮೆರಿಕ ಸೇನೆಯನ್ನು ಭಾರತದ ನೆರವಿಗೆ ರವಾನಿಸಿರುವುದು ಚೀನಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಜೂನ್ 15ರಂದು 20 ಭಾರತೀಯ ಯೋಧರು ಹುತ್ಮಾತರಾದ ಪೂರ್ವ ಲಡಾಕ್‍ನ ಗಾಲ್ವಾನ್ ಕಣಿವೆಯ ವಾಸ್ತವ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಈಗಲೂ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‍ಎ) ಸೈನಿಕರು ಮತ್ತು ಯುದ್ಧಾಸ್ತ್ರಗಳು ಜಮಾವಣೆಗೊಂಡಿವೆ.

ಭಾರತದ ಮೂರು ಸಶಸ್ತ್ರ ಪಡೆಗಳಾದ ಅರ್ಮಿ, ನೇವಿ ಮತ್ತು ಏರ್‍ರ್ಪೋರ್ಸ್ ಈಗ ಚೀನಾವನ್ನು ಸುತ್ತುವರಿದಿರುವುದು ಕಮ್ಯೂನಿಸ್ಟ್ ರಾಷ್ಟ್ರಕ್ಕೆ ನಡುಕ ಉಂಆಂತಗಿದೆ.

Facebook Comments