ನೌಕಾಪಡೆಯ 33 ಯೋಧರಿಗೆ ಕೊರೊನಾ

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಾಥಪುರಂ,ಜೂ.25- ತಮಿಳುನಾಡಿನ ರಾಮನಾಥಪುರಂನಲ್ಲಿರುವ ಐಎನ್‍ಎಸ್ ಪರಂಡು ನೌಕಾ ವಾಯು ಕೇಂದ್ರದಲ್ಲಿನ 33 ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗಲಿದೆ.  ನೌಕಾಪಡೆಯ ಯೋಧರೂ ಸೇರಿದಂತೆ ಈ ಕೇಂದ್ರದ ಒಟ್ಟು 33 ಮಂದಿಗೆ ಕೋವಿಡ್ -19 ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ನಾವಿಕರು ಸೇರಿದಂತೆ ಸೋಂಕು ತಗುಲಿರುವ 33 ಸಿಬ್ಬಂದಿಯನ್ನು ಪ್ರತ್ಯೇಕವಾಗಿರಿಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಸಾಂಕ್ರಾಮಿಕ ರೋಗ ಕಂಡುಬಂದ ಕೆಲವರು ಹೊಸದಾಗಿ ನೌಕಾಪಡೆಗೆ ಸೇರ್ಪಡೆಯಾದ ಯೋಧರೂ ಆಗಿದ್ದಾರೆ.

Facebook Comments