ನವರಾತ್ರಿ ಉತ್ಸವ : ಭಾರತೀಯರಿಗೆ ಟ್ರಂಪ್, ಬಿಡೆನ್, ಕಮಲಾ ಶುಭಾಶಯ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಅ.18- ನವರಾತ್ರಿ ಉತ್ಸವದ ಪ್ರಯುಕ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಮೈಕ್ ಫೆನ್ಸ್, ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಹುರಿಯಾಳು, ಮಾಜಿ ಉಪಾಧ್ಯಕ್ಷ ಜೋಬಿಡೆನ್ ಹಾಗೂ ಉಪಾಧ್ಯಕ್ಷೆ ಅಭ್ಯರ್ಥಿ ಕಮಲಾ ಹ್ಯಾರಿಸ್ ಸೇರಿದಂತೆ ಅನೇಕ ಗಣ್ಯರು ಭಾರತೀಯರಿಗೆ ಶುಭ ಕೋರಿದ್ದಾರೆ.

ಭಾರತೀಯ ಮೂಲದ ಅಮೆರಿಕ ಸಂಸದರಾದ ರಾಜಾ ಕೃಷ್ಣಮೂರ್ತಿ, ಡಾ.ಅನಿಲ್ ಬೇರಾ, ಪ್ರಮೀಳಾ ಜೈಪಾಲ್, ರೋ ಖನ್ನಾ ಸೇರಿದಂತೆ ಅನೇಕರು ನವರಾತ್ರಿ ಶುಭಾಶಯ ಕೋರಿ ದುರ್ಗಾದೇವಿ ಭಾರತೀಯರಿಗೆ ಸುಖ-ಸಂತೋಷ ಮತ್ತು ನೆಮ್ಮದಿ ನೀಡಲಿ ಎಂದು ಶುಭ ಕೋರಿದ್ದಾರೆ.

ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷೀಯ ಅಭ್ಯರ್ಥಿಗಳು ಭಾರತೀಯರನ್ನು ಓಲೈಸಲು ನಾನಾ ಕಸರತ್ತು ಅನುಸರಿಸುತ್ತಿದ್ದಾರೆ.

Facebook Comments