ದುರ್ಗಾದೇವಿ ವಿಸರ್ಜನೆ ವೇಳೆ ದುರಂತ, 14 ಮಂದಿ ನೀರುಪಾಲು

ಈ ಸುದ್ದಿಯನ್ನು ಶೇರ್ ಮಾಡಿ

ದೋಲ್‍ಪುರ್/ಥಾಣೆ, ಅ.10- ನವರಾತ್ರಿ ಉತ್ಸವದ ಅಂತಿಮ ಭಾಗವಾದ ಮಾತೆ ದುರ್ಗಾದೇವಿ ವಿಗ್ರಹ ವಿಸರ್ಜನೆ ವೇಳೆ ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಸಂಭವಿಸಿದ ಪ್ರತ್ಯೇಕ ದುರಂತದಲ್ಲಿ 14 ಯುವಕರು ನೀರು ಪಾಲಾಗಿದ್ದಾರೆ. ಈ ಘಟನೆಗಳಲ್ಲಿ ಇನ್ನೂ ಕೆಲವರು ನಾಪತ್ತೆಯಾಗಿದ್ದು, ಶೋಧಕಾರ್ಯ ಮುಂದುವರೆದಿದೆ.

ರಾಜಸ್ಥಾನದ ದೋಲ್‍ಪುರ್‍ನಲ್ಲಿ ನಿನ್ನೆ ರಾತ್ರಿ ಪಾರ್ವತಿ ನದಿಯಲ್ಲಿ ದುರ್ಗಾದೇವಿಯ ವಿಗ್ರಹಗಳ ವಿಸರ್ಜನೆ ಕಾರ್ಯಗಳು ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸ್ನಾನಕ್ಕೆಂದು ನದಿಗೆ ಇಳಿದ ಹುಡುಗನೊಬ್ಬ ನೀರಿನಲ್ಲಿ ಮುಳುಗಿದ ಈತನನ್ನು ರಕ್ಷಿಸಲು ಅಲ್ಲಿದ ಯುವಕರ ಗುಂಪು ನದಿಗೆ ಹಾರಿದರು. ಆದರೆ ನೀರಿನ ಸೆಳೆತ ಹೆಚ್ಚಾಗಿದ್ದ ಕಾರಣ ಹತ್ತು ಮಂದಿ ನೀರು ಪಾಲದರೆಂದು ದೋಲ್‍ಪುರ್ ಜಿಲ್ಲಾಧಿಕಾರಿ ರಾಕೇಶ್ ಜೈಸ್ವಾಲ್ ತಿಳಿಸಿದ್ದಾರೆ.

ಈ ವರೆಗೆ 8 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಉಳಿದವರಿಗಾಗಿ ಮುಳುಗುತಜ್ಞರು ಶೋಧ ಮುಂದುವರೆಸಿದ್ದಾರೆ.ಮೃತಕುಟುಂಬಗಳಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ತಲಾ 1ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.

ನಾಲ್ವರ ಜಲಸಮಾಧಿ:  ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಾಲು ನದಿಯಲ್ಲಿ ಮಾತೆದುರ್ಗಾದೇವಿ ವಿಗ್ರಹ ವಿಸರ್ಜನೆ ವೇಳೆ ಮತ್ತೊಂದು ದುರಂತದಲ್ಲಿ ನಾಲ್ವರು ಯುವಕರು ಜಲಸಮಾಧಿಯಾಗಿದ್ದಾರೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಇನ್ನು ಕೆಲ ಯುವಕರು ನೀರಿನಲ್ಲಿ ಮುಳಗಿರಬಹುದೆಂದು ಶಂಕಿಸಲಾಗಿದೆ. ಶೋಧ ಮುಂದುವರೆದಿದೆ.

Facebook Comments