ನೌಕಾಪಡೆ ದಿನಾಚರಣೆ : ಶುಭಾಶಯ ಕೋರಿದ ರಾಷ್ಟ್ರಪತಿ ಕೋವಿಂದ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.4- ನೌಕಾಪಡೆ ದಿನಾಚರಣೆಯಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನೌಕಾಪಡೆ ಸಿಬ್ಬಂದಿ, ಹಿರಿಯರು ಮತ್ತು ಅವರ ಕುಟುಂಬಗಳಿಗೆ ಶುಭಾಶಯ ಕೋರಿದ್ದಾರೆ. ಭಾರತೀಯ ನೌಕಾಪಡೆಯು ದೇಶದ ಕರಾವಳಿಗೆ ಭದ್ರರಕ್ಷಣೆ ಒದಗಿಸುವುದರ ಜೊತೆಗೆ ಕೋವಿಡ್ ಸಂಬಂಧಿತ ಬಿಕ್ಕಟ್ಟಿನ ಸಂದರ್ಭದಲ್ಲೂ ತಾರಾಪಾತ್ರ ನಿರ್ವಹಿಸಿದೆ. ಭಾರತೀಯ ಜನತೆ ನಿಮ್ಮ ಸೇವೆಗೆ ಕೃತಜ್ಞರಾಗಿದ್ದಾರೆ ಎಂದು ರಾಷ್ಟ್ರಪತಿ ನುಡಿದಿದ್ದಾರೆ.

1971ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಕರಾಚಿ ಬಂದರಿನ ಮೇಲೆ ಭಾರತೀಯ ನೌಕಾಪಡೆಯ ದಾಳಿಯ ಸ್ಮರಣಾರ್ಥವಾಗಿ ಪ್ರತಿ ವರ್ಷ ಡಿಸೆಂಬರ್ 4ರಂದು ನೌಕಾಪಡೆ ದಿನಾಚರಣೆ ನಡೆಸಲಾಗುತ್ತದೆ.

Facebook Comments