ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಪುತ್ರಿ ಮೇರಿಯಮ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Pakistan--01

ಲಾಹೋರ್. ಜು.13 : ಭ್ರಷ್ಟಚಾರದ ‌ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಷರೀಫ್ ಹಾಗೂ ಅವರ ಪುತ್ರಿ ಮೇರಿಯಮ್ ಅವರುಗಳನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ. ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ನವಾಜ್ ಷರೀಫ್ ಬಂಧನ ಭಾರೀ ಪರಿಣಾಮ ಬೀರಿವ ಸಾಧ್ಯತೆ ಇದೆ.

ಲಂಡನ್ ನಿಂದ ರಾತ್ರಿ ತಮ್ಮ ಪುತ್ರಿ ಜೊತೆ ಇಸ್ಲಾಮಬಾದ್ ಗೆ ಬಂದು ಬಳಿಕ ಲಾಹೋರ್ ಹೊರಟ ಷರೀಫ್ ಹಾಗೂ ಪುತ್ರಿಯನ್ನು ಪೊಲೀಸರು ವಶಕ್ಕೆ ಪಡೆದರು. ಸದ್ಯ ಅವರನ್ನು ಲಾಹೋರ್ ನ ವಿಶೇಷ ಜೈಲಿನಲ್ಲಿ ಭಾರೀ ಬಿಗಿ ಭದ್ರತಾ ನಡೆವೆ ಇರಿಸಲಾಗಿದೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದಲ್ಲದೆ, ಅವರ ಮಗಳು ಮೇರಿಯಮ್ ಗೆ 7 ವರ್ಷಗಳ ಶಿಕ್ಷೆಯನ್ನು ನ್ಯಾಯಾಲಯ ಘೋಷಿಸಿತ್ತು.

ನ್ಯಾಯಾಲಯವು ನವಾಜ್ ಷರೀಫ್ಗೆ 73 ಕೋಟಿ ರೂ. ದಂಡ ಅದೇ ಸಮಯದಲ್ಲಿ, ನವಾಜ್ ಮಗಳಿಗೆ ದಂಡವನ್ನು 18 ಕೋಟಿ ದಂಡ ವಿಧಿಸಲಾಗಿತ್ತು. ನವಾಜ್ ಅವರ ಪುತ್ರಿ ಮೇರಿ ಪಾಕಿಸ್ತಾನದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಭ್ರಷ್ಟಾಚಾರ ಬಯಲುಗೊಂಡು ಷರೀಫ್ ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿದ ನಂತರ, 68 ವರ್ಷದ ಷರೀಫ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ ಪ್ರಕರಣಗಳು ಆರಂಭಗೊಂಡವು. ಕಳೆದ ವರ್ಷ ನವಾಜ್ ಶರೀಫ್ ಪ್ರಧಾನಮಂತ್ರಿ ಹುದ್ದೆಯಲ್ಲಿರುವಾಗ ನವಾಜ್ ಷರೀಫ್ ಅವರು ಅಕ್ರಮ ಸಂಪಾದನೆ ಮತ್ತು ತೆರಿಗೆ ವಂಚನೆಯಿಂದ ಗಳಿಸಿದ ಕಪ್ಪು ಹಣವನ್ನು ಅಂತರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಹಾಗೂ ವಿದೇಶಗಳಲ್ಲಿ ಹೂಡಿಕೆ ಮಾಡಿದವರ ಪಟ್ಟಿಯನ್ನು ಪನಾಮ ಪೇಪರ್ಸ್ ಲೀಕ್ ಮಾಡಿತ್ತು. ಲಂಡನ್ ನಲ್ಲಿ ನಾಲ್ಕು ಐಷಾರಾಮಿ ಫ್ಲಾಟ್ ಗಳನ್ನು ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ 10 ವರ್ಷ ಹಾಗೂ ಪುತ್ರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.  ಷರೀಫ್ ಆಗಮನದ ಹಿನ್ನೆಲೆಯಲ್ಲಿ ಲಾಹೋರ್ ನಗರವೇ ಸ್ತಬ್ಧವಾಗಿದ್ದು, ಅಘೋಷಿತ ಬಂದ್ ಜಾರಿಯಲ್ಲಿತ್ತು.

ಎಲ್ಲೆಲ್ಲೂ ಷರೀಫ್‌ಗೆ ಬೆಂಬಲ ವ್ಯಕ್ತವಾಗಿದ್ದು, ನಗರದಲ್ಲಿ 10 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಭದ್ರತೆ ನೀಡಲಾಗಿತ್ತು. ಒಂದು ಕಾಲದಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿ ಮೆರೆಯುತ್ತಿದ್ದವರು ನವಾಜ್ ಷರೀಫ್. ರಾಜಕಾರಣಿಗಳ ಸಾಮಾನ್ಯ ಬುದ್ಧಿಯಂತೆ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದರು. ಕೊನೆಗೊಮ್ಮೆ ಅಂತರಾಷ್ಟ್ರೀಯ ತನಿಖಾ ವರದಿ ‘ಪನಾಮ ಪೇಪರ್ಸ್’ನಲ್ಲಿ ಈ ಗೌಪ್ಯತೆಗಳೆಲ್ಲಾ ಬಯಲಾಯಿತು. ಆರೋಪ ಎದುರಿಸುತ್ತಿದ್ದ ಷರೀಫ್ ಜನರ ಆಕ್ರೋಶಕ್ಕೆ ಗುರಿಯಾದರು. ಒತ್ತಡದ ತೀವ್ರತೆ, ನ್ಯಾಯಾಲಯದ ಆದೇಶಕ್ಕೆ ಮಣಿದು ಅವರು ರಾಜೀನಾಮೆಯನ್ನು ನೀಡಬೇಕಾಯಿತು.

ಅಲ್ಲಿಂದ ಕೋರ್ಟ್, ವಿಚಾರಣೆ, ತನಿಖೆ ಆರಂಭವಾಯಿತು. ಇಷ್ಟೆಲ್ಲಾ ಅಧ್ಯಾಯಗಳು ಮುಗಿದು ಮೊನ್ನೆ ಜುಲೈ 6 ರಂದು ಇಸ್ಲಾಮಾಬಾದ್‌ನ ‘ಭ್ರಷ್ಚಾಚಾರ ನಿಯಂತ್ರಣ ನ್ಯಾಯಾಲಯ’ ಷರೀಫ್‌ಗೆ 10 ವರ್ಷಗಳ ಸೆರೆಮನೆ ವಾಸದ ಶಿಕ್ಷೆ ವಿಧಿಸಿತ್ತು. ಜತೆಗೆ ಷರೀಫ್‌ ಮಗಳು ಮರಿಯಮ್‌ ನವಾಜ್‌ಗೆ 7 ವರ್ಷ ಹಾಗೂ ಅಳಿಯ ನಿವೃತ್ತ ಕ್ಯಾಪ್ಟನ್‌ ಸಫ್ದಾರ್‌ 1 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಅಲ್ಲದೇ ನ್ಯಾಯಾಲಯ ನವಾಜ್‌ ಶರೀಫ್‌ಗೆ 8 ಮಿಲಿಯನ್‌ ಪೌಂಡ್ಸ್‌ ಹಾಗೂ ಮರಿಯಮ್‌ಗೆ 2 ಮಿಲಿಯನ್‌ ಪೌಂಡ್ಸ್‌ ದಂಡವನ್ನೂ ವಿಧಿಸಿತ್ತು.

ಪಾಕಿಸ್ತಾನದ ರಾಷ್ಟ್ರೀಯ ಹೊಣೆಗಾರಿಕೆ ಸಂಸ್ಥೆ (ಎನ್ಎಬಿ) ನ್ಯಾಯಾಲಯ ಲಂಡನ್ನ ಎವೆನ್ಫೀಲ್ಡ್ ಪ್ರಾಪರ್ಟೀಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಜುಲೈ 6ರಂದು ತೀರ್ಪು ಪ್ರಕಟಿಸಿತ್ತು. ಪನಾಮ ಪೇಪರ್ಸ್ ಹಗರಣ ಬೆಳಕಿಗೆ ಬಂದ ನಂತರ ನವಾಜ್ ಷರೀಫ್ ವಿರುದ್ಧ ಒಟ್ಟು ಮೂರು ಭ್ರಷ್ಟಾಚಾರ ಪ್ರಕರಣನ್ನು ದಾಖಲಿಸಲಾಗಿತ್ತು. ಅದರಲ್ಲಿ 1 ಪ್ರಕರಣದಲ್ಲಿ ತೀರ್ಪು ಹೊರಬಿದ್ದಿದ್ದು ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಉಳಿದ 2 ಪ್ರಕರಣಗಳ ವಿಚಾರಣೆ ಪ್ರಗತಿಯಲ್ಲಿದೆ. ಆದರೆ ನ್ಯಾಯಾಲಯದ gಈ ತೀರ್ಪು ಹೊರ ಬೀಳುವ ಹೊತ್ತಿಗೆ ಅವರೆಲ್ಲಾ ದೇಶದಿಂದ ಹೊರಗೆ ದೂರದ ಲಂಡನ್‌ನಲ್ಲಿದ್ದರು. ಅಲ್ಲಿ ಷರೀಫ್ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಕುಟುಂಬವು ಅಲ್ಲೇ ನೆಲೆಸಿತ್ತು. ಅಲ್ಲಿಂದ ಅವರನ್ನು ಕರೆತರುವ ಏರ್ಪಾಟು ಮಾಡಲಾಯಿತು.

ಈ ‘ಮೆರವಣಿಗೆ’ ಇನ್ನೂ ಜಾರಿಯಲ್ಲಿದೆ. ಬೆಳಿಗ್ಗೆ ಲಂಡನ್‌ನಲ್ಲಿ ಷರೀಫ್‌ಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.  ಷರೀಫ್ ಆಗಮನದ ಹಿನ್ನೆಲೆಯಲ್ಲಿ ಲಾಹೋರ್ ನಗರವೇ ಸ್ತಬ್ಧವಾಗಿದ್ದು, ಅಘೋಷಿತ ಬಂದ್ ಜಾರಿಯಲ್ಲಿದೆ. ಎಲ್ಲೆಲ್ಲೂ ಷರೀಫ್‌ಗೆ ಬೆಂಬಲ ವ್ಯಕ್ತವಾಗಿದ್ದು, ನಗರದಲ್ಲಿ 10 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯಿಂದ ಭಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ಮುಂಜಾಗ್ರತಾ ಕ್ರಮವಾಗಿ ಷರೀಫ್ ಅವರ ಪಿಎಂಎಲ್‌—ಎನ್ ಪಕ್ಷದ 300ಕ್ಕೂ ಹೆಚ್ಚು ಕಾರ್ಯಕರ್ತರು, ನಾಯಕರನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ?  ಪನಾಮಾ ಪೇಪರ್ಸ್‌ನಿಂದ ಬೆಳಕಿಗೆ ಬಂದ ಭ್ರಷ್ಟಾಚಾರ ಪ್ರಕರಣದಲ್ಲಿ ನವಾಜ್‌ ಷರೀಫ್‌ ಹೆಸರು ಕೇಳಿ ಬಂದಿತ್ತು. ನವಾಜ್‌ ಶರೀಫ್‌ ಮತ್ತು ಅವರ ಪುತ್ರಿ ಮರಿಯಮ್‌ ಹೆಸರಿನಲ್ಲಿ ಲಂಡನ್‌ನಲ್ಲಿ ಐಶಾರಾಮಿ ಬಂಗಲೆಗಳಿವೆ ಎಂದು ತಿಳಿದು ಬಂದಿತ್ತು. ಈ ಕುರಿತು 2017ರ ಜುಲೈ ತಿಂಗಳಲ್ಲಿ ವಿಚಾರಣೆ ನಡೆಸಿದ್ದ ಪಾಕಿಸ್ತಾನದ ಸುಪ್ರೀಂ ಕೋರ್ಟ್, ಲಂಡನ್‌ನಲ್ಲಿ ಶರೀಫ್‌ ಖರೀದಿಸಿರುವ ಬಂಗಲೆಗಳ ಹಣದ ಮೂಲದ ಬಗ್ಗೆ ಪ್ರಶ್ನೆಯೆತ್ತಿತ್ತು. ಬಂಗಲೆಗಳನ್ನು ತನ್ನ ಸ್ವಂತ ಆದಾಯದಿಂದಲೇ ಕೊಂಡಿರುವುದಾಗಿ ಶರೀಫ್‌ ಕುಟುಂಬ ವಾದಿಸಿತ್ತಾದರೂ, ಅಧಿಕೃತ ದಾಖಲೆಗಳನ್ನು ಒದಗಿಸುವಲ್ಲಿ ಸೋತಿತ್ತು. ಕೊನೆಗೆ ಮತ್ತೊಂದಷ್ಟು ವಿಚಾರಣಾ ಸಂದರ್ಭದ ಹೈಡ್ರಾಮಗಳ ನಂತರ ಅಂತಿಮ ತೀರ್ಪನ್ನು ಪ್ರಕಟಿಸಿದ್ದ ಇಸ್ಲಾಮಾಬಾದ್‌ ನ್ಯಾಯಾಲಯ, ಪುತ್ರಿ ಮರಿಯಮ್‌, ಅಳಿಯ ಸಫ್ದಾರ್‌ಗೆ ಜೈಲು ಶಿಕ್ಷೆ ವಿಧಿಸಿತ್ತು.

‘ಬಿದ್ದರೂ ಮೀಸೆ ಮಣ್ಣಾಗಲಿಲ್ಲ’

ಇದೀಗ ಬಂಧನವನ್ನು ಎದುರು ನೋಡುತ್ತಿರುವ ನವಾಜ್ ಷರೀಫ್ ಲಂಡನ್‌ನಿಂದ ಅಬುಧಾಬಿಗೆ ಬಂದಿಳಿಯುತ್ತಿದ್ದಂತೆ, “ನನ್ನನ್ನು ನೇರ ಜೈಲಿಗೆ ತೆಗೆದುಕೊಂಡು ಹೋಗಲಾಗುತ್ತದೆ. ನಾನು ಪಾಕಿಸ್ತಾನಿಯರಿಗಾಗಿ ಈ ಕೆಲಸ ಮಾಡುತ್ತಿದ್ದೇನೆ. ಮುಂದೆ ಬರಲಿರುವ ಜನಾಂಗಕ್ಕಾಗಿ ತ್ಯಾಗ ಮಾಡುತ್ತಿದ್ದೇನೆ. ಈ ರೀತಿಯ ಅವಕಾಶಗಳು ಮತ್ತೆ ಬರುವುದಿಲ್ಲ. ಪಾಕಿಸ್ತಾನದ ಭವಿಷ್ಯವನ್ನು ಒಟ್ಟಾಗಿ ಕಟ್ಟೋಣ,” ಎಂದು ಸಿನಿಮಾ ನಟನ ಧಾಟಿಯಲ್ಲಿ ಡೈಲಾಗ್‌ಗಳನ್ನು ಉದುರಿಸಿದ್ದಾರೆ.

ಈ ಎಲ್ಲಾ ನಾಟಕೀಯ ಬೆಳವಣಿಗೆಗಳ ಮಧ್ಯೆ ಜುಲೈ 25ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಚುನಾವಣೆ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಪಿತೂರಿ ನಡೆಸಲಾಗಿದೆ ಎನ್ನುವುದು ಷರೀಫ್ ವಾದ. ಏನೇ ಆದರೂ ಈ ಚುನಾವಣೆಯಲ್ಲಿ ಷರೀಫ್ ಅವರ ಪಿಎಂಎಲ್-ಎನ್ ಪಕ್ಷವೇ ಮುಂಚೂಣಿಯಲ್ಲಿದೆ. ಅವರ ತಮ್ಮ ಮತ್ತು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶೆಹಬಾಜ್ ಷರೀಫ್ ಪಕ್ಷವನ್ನು ಮುನ್ನಡೆಸುತ್ತಿದ್ದು, ಪ್ರಧಾನಿಯಾಗುವ ಎಲ್ಲಾ ಸಾಧ್ಯತೆ ಇದೆ. ಜತೆಗೆ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಮತ್ತು ಬಿಲಾವಲ್ ಬುಟ್ಟೋ ಜರ್ದಾರಿಯ ಪಿಪಿಪಿ ಪಕ್ಷಗಳೂ ಕಣದಲ್ಲಿವೆ.

Facebook Comments

Sri Raghav

Admin