ಐದು ಸಾವಿರ ಸಸಿ ನೆಡಲು ಮುಂದಾದ ಬಾಲಿವುಡ್ ನಟ

ಈ ಸುದ್ದಿಯನ್ನು ಶೇರ್ ಮಾಡಿ

ಮುಜಾಫರ್‍ನಗರ,ಜೂ.21- ಬಾಲಿವುಡ್ ನಟ ನವಾಜುದ್ದಿನ್ ಸಿದ್ದಿಕ್ಕಿ ಅವರು ಐದು ಸಾವಿರಕ್ಕೂ ಹೆಚ್ಚು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ತಮ್ಮ ಹುಟ್ಟೂರಾದ ಉತ್ತರ ಪ್ರದೇಶದ ಶಫೀಪುರ ಪಟ್ಟಿ ಗ್ರಾಮದಲ್ಲಿ 35 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವ ಅವರು ಪ್ರತಿಯೊಬ್ಬ ಗ್ರಾಮಸ್ಥರು ತಮ್ಮ ತಮ್ಮ ಜಮೀನುಗಳಲ್ಲಿ ಸಸಿ ನೆಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

ತಮ್ಮ ಗ್ರಾಮದಲ್ಲಿ ಐದು ಸಾವಿರ ಸಸಿ ನೆಡುವ ಗುರಿಯಿರಿಸಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ನಾನು ಯಶಸ್ವಿಯಾಗುತ್ತೇನೆ ಎಂದು ಸಿದ್ದಿಕ್ಕಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin