ಒಡಿಶಾದ 30 ಜಿಲ್ಲೆಗಳ ಪೈಕಿ 19 ಜಿಲ್ಲೆಗಳು ನಕ್ಸಲ್ ಕಾಟ

ಈ ಸುದ್ದಿಯನ್ನು ಶೇರ್ ಮಾಡಿ

ಭುವನೇಶ್ವರ್,ಜು.10-ಒಡಿಶಾದ ರಾಜ್ಯದ ಹೊಸದಾಗಿ ಐದು ಜಿಲ್ಲೆಗಳನ್ನು ಭದ್ರತಾ ಸಂಬಂಧ ವೆಚ್ಚದ ಯೋಜನೆಯಿಂದ ಕೈಬಿಡಲಾಗಿದೆ. ಒಡಿಶಾದ 30 ಜಿಲ್ಲೆಗಳ ಪೈಕಿ 19 ಜಿಲ್ಲೆಗಳು ನಕ್ಸಲ್ ಪೀಡಿತವಾಗಿವೆ.

ಅವುಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಪುನರ್ವಸತಿ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರ ಎಸ್‍ಆರ್‍ಇ(ಭದ್ರತಾ ಸಂಬಂಧ ವೆಚ್ಚ) ಯೋಜನೆಯನ್ನು ಜಾರಿಗೆ ತಂದಿತ್ತು.

ನಕ್ಸಲ್ ಚಟುವಟಿಕೆಗಳು ಕಡಿಮೆಯಾದ ಹಿನ್ನೆಲೆಯಲ್ಲಿ 2018ರ ಏಪ್ರಿಲ್‍ನಲ್ಲಿ ಜೈಪುರ್, ಜೆನೆಕನಾಲ್, ಪ್ಯೂಯೊನ್‍ಜಾರ್ಜ್, ಮಯೊರ್‍ಬಂಜ್, ಗಜಪತಿ, ಗಂಜಾಮ್ ಜಿಲ್ಲೆಗಳನ್ನು ನಕ್ಸಲ್ ಪೀಡಿತ ಜಿಲ್ಲೆಗಳೆಂದು ಘೋಷಣೆ ಮಾಡಲಾಗಿತ್ತು.

ಈಗ ಹೊಸದಾಗಿ ಅಂಗೂಲ್‍ದುಗ್ಗ, ಸಾಮ್ಲಾಪುರ್, ಡಿಯೋಘರ್, ನಯಾಘರ್ ಸೇರಿ ಐದು ಜಿಲ್ಲೆಗಳನ್ನು ನಕ್ಸಲ್ ಮುಕ್ತ ಪ್ರದೇಶಗಳೆಂದು ಘೋಷಣೆ ಮಾಡಿರುವುದಾಗಿ ಬಿಜೆಪಿಯ ಅಭಯ್ ತಿಳಿಸಿದ್ದಾರೆ.

ಮಾವೋಯಿಸ್ಟ್‍ಗಳ ಚಟುವಟಿಕೆಗಳಿಂದಾಗಿ ಇದುವರೆ ಒಟ್ಟು 11 ಜಿಲ್ಲೆಗಳನ್ನು ಎಸ್‍ಆರ್‍ಇ ಯಿಂದ ಮುಕ್ತಗೊಳಿಸುವುದಾಗಿ ತಿಳಿಸಿದ್ದಾರೆ.

Facebook Comments