ಛತ್ತೀಸ್‍ಗಢದಲ್ಲಿ ನಕ್ಸಲ್ ಹಾವಳಿ : 40 ಕೆಜಿ ಸ್ಫೋಟಕ ಪತ್ತೆ, ತಪ್ಪಿದ ವಿಧ್ವಂಸಕ ಕೃತ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬಿಜಾಪುರ್ (ಛತ್ತೀಸ್‍ಗಢ) ಜು.27-ಛತ್ತೀಸ್‍ಗಢದಲ್ಲಿ ನಕ್ಸಲರ ಹಾವಳಿ ಮುಂದುವರಿದಿದ್ದು, ಜಂಟಿ ಭದ್ರತಾ ಪಡೆಗಳ ಸಕಾಲಿಕ ಕ್ರಮದಿಂದ ಭಾರೀ ವಿಧ್ವಂಸಕ ಕೃತ್ಯವೊಂದು ತಪ್ಪಿದಂತಾಗಿದೆ.

ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿಗಳು ರಸ್ತೆಯಲ್ಲಿ ಇಟ್ಟಿದ್ದ 40 ಕೆಜಿ ಸುಧಾರಿತ ಸ್ಫೋಟಕಗಳನ್ನು (ಐಇಡಿ) ಯೋಧರು ವಶಪಡಿಸಿಕೊಂಡು ನಿಷ್ಕ್ರಿಯಗೊಳಿಸಿದ್ದಾರೆ.

ಬಸಗುಡಾ-ತರ್ರೆಮ್ ಹೆದ್ದಾರಿಯಲ್ಲಿ ವಿಸ್ಫೋಟ ನಡೆಸಲು ದೊಡ್ಡ ಪ್ಲಾಸ್ಟಿಕ್ ಕಂಟೈನರ್‍ನಲ್ಲಿ 40 ಕೆಜಿ ಪ್ರಬಲ ಸ್ಫೋಟಕಗಳನ್ನು ನಕ್ಸಲರು ಇರಿಸಿದ್ದರು ಎಂದು ಬಿಜಾಪುರ್ ಪೊಲೀಸ್ ವರಿಷ್ಠಾಧಿಕಾರಿ ಕಮಲೋಚನ್ ಕಶ್ಯಪ್ ತಿಳಿಸಿದ್ದಾರೆ.

ಸಿಆರ್‍ಪಿಎಫ್, ಕೋಬ್ರಾ, ಜಿಲ್ಲಾ ಮೀಸಲು ಪೊಲೀಸ್ ಮತ್ತು ಪೊಲೀಸ್ ಸಿಬ್ಬಂದಿ ರಸ್ತೆಯಲ್ಲಿ ನೆಲಬಾಂಬ್ ಪತ್ತೆ ಕಾರ್ಯ ನಡೆಸುತ್ತಿದ್ದ ವೇಳೆ ಐಇಡಿ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin