ಮಹಾರಾಷ್ಟ್ರ : ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಹತ

ಈ ಸುದ್ದಿಯನ್ನು ಶೇರ್ ಮಾಡಿ

ನಾಗ್ಪುರ, ಸೆ.15- ನಕ್ಸಲ ನಿಗ್ರಹ ಪಡೆಯೊಂದಿಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಮಾವೋವಾದಿಗಳು ಹತರಾದ ಘಟನೆ ಇಂದು ಮುಂಜಾನೆ ಮಹಾರಾಷ್ಟ್ರದ ಗಡ್‍ಚೀರೊಳಿಯಲ್ಲಿ ನಡೆದಿದೆ. ಹತರಾದ ನಕ್ಸಲರಿಂದ ರೈಫಲ್‍ಗಳು, ಬುಲೆಟ್‍ಗಳು ಮತ್ತು ದಿನಬಳಕೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಕ್ಸಲರಿರುವ ಖಚಿತ ವರ್ತಮಾನದ ಮೇರೆಗೆ ಗಡ್‍ಚೀರೊಳಿ ಜಿಲ್ಲೆಯ ನರ್‍ಕಸ ಅರಣ್ಯಪ್ರದೇಶದಲ್ಲಿ ಮಹಾರಾಷ್ಟ್ರದ ವಿಶೇಷ ನಕ್ಸಲ ನಿಗ್ರಹ ದಳ ಸಿ-60 ಕಮಾಂಡೋಗಳು ತೀವ್ರ ಶೋಧ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮರೆಯಲ್ಲಿ ಅಡಗಿದ್ದ ನಕ್ಸಲರು ಯೋಧರ ಮೇಲೆ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಇಬ್ಬರು ನಕ್ಸಲರು ಹತರಾದರು ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎನ್‍ಕೌಂಟರ್ ವೇಳೆ ಇನ್ನೂ ಕೆಲ ನಕ್ಸಲರಿಗೆ ಗಾಯವಾಗಿದ್ದು, ಪರಾರಿಯಾಗಿದ್ದಾರೆ. ಅವರಿಗಾಗಿ ತೀವ್ರ ಶೋಧ ಮುಂದುವರೆದಿದೆ. ಜಾರ್ಖಂಡ್, ಛತ್ತಿಸಗಡ್ ಮತ್ತು ಬಿಹಾರ್ ರಾಜ್ಯಗಳಲ್ಲೂ ಮೊನ್ನೆ ಮತ್ತು ನಿನ್ನೆ ನಡೆದ ಎನ್‌ಕೌಂಟರ್‌ನಲ್ಲಿ ಗಳಲ್ಲಿ ಕುಖ್ಯಾತರೂ ಸೇರಿದಂತೆ ಒಟ್ಟು 7 ನಕ್ಸಲರು ಹತರಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು

Facebook Comments