ಎನ್‍ಕೌಂಟರ್ ನಾಲ್ವರು ನಕ್ಸಲರ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಬಿಹಾರ, ಜು. 10- ಇಂದು ಮುಂಜಾನೆ ಬಿಹಾರದ ಪಶ್ಚಿಮ ಚಂಪರನ್ ಜಿಲ್ಲೆಯಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ನಾಲ್ವರು ನಕ್ಸಲರು ಬಲಿಯಾಗಿದ್ದಾರೆ. ವಾಲ್ಮೀಕಿನಗರದ ಕಾಡಿನಲ್ಲಿ ಎಸ್‍ಎಸ್‍ಬಿ ಮತ್ತು ಎಸ್‍ಟಿಎಫ್ ತಂಡಗಳು ನಡೆಸಿದ ಎನ್‍ಕೌಂಟರ್ ಕಾರ್ಯಾಚರಣೆ ವೇಳೆ ನಕ್ಸಲರಿಂದ ಎಕೆ- 56, ಸೆಲ್ಪ್ ಲೋಡಿಂಗ್ ರೈಫಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಎಸ್‍ಬಿಯ ಐಜಿ ಸಂಜಯ್‍ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಾರ್ಯಾಚರಣೆಯ ವೇಳೆ ನಕ್ಸಲರು ಕೂಡ ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.  ಎನ್‍ಕೌಂಟರ್‍ನಲ್ಲಿ ಮೃತಪಟ್ಟ ನಕ್ಸಲರ ದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

Facebook Comments