ಜೂನ್ 9ರಂದು ಹಸೆಮಣೆ ಏರಲಿರುವ ನಯನತಾರಾ

ಈ ಸುದ್ದಿಯನ್ನು ಶೇರ್ ಮಾಡಿ

ಹೈದ್ರಾಬಾದ್, ಮೇ 7- ದೀರ್ಘ ಕಾಲದಿಂದ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್‍ರೊಂದಿಗೆ ಡೇಟಿಂಗ್ ನಡೆಸುತ್ತಿರುವ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಯನತಾರಾ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ವಿಘ್ನೇಶ್ ಶಿವನ್ ಹಾಗೂ ನಯನತಾರಾ ಅವರು ಈ ಹಿಂದೆಯೂ ಹಲವು ಬಾರಿ ಮದುವೆಯಾಗುವುದಾಗಿ ಹೇಳಿಕೊಂಡಿದ್ದ ರಾದರೂ ಕೆಲವು ಅನಿವಾರ್ಯ ಕಾರಣ ಗಳಿಂದಾಗಿ ಮದುವೆ ದಿನಾಂಕವನ್ನು ಮುಂದೂಡುತ್ತಲೇ ಹೋಗಿದ್ದರು.

ಆದರೆ ಈಗ ಜೂನ್ 9 ರಂದು ತಿರುಪತಿ ತಿರುಮಲದಲ್ಲಿ ಶ್ರೀ ವೆಂಕಟೇಶ್ವರಸ್ವಾಮಿಯ ಸನ್ನಿಧಾನದಲ್ಲಿ ಶಿವನ್ ಹಾಗೂ ನಯನತಾರಾ ಅವರು ಹಸೆಮಣೆ ತುಳಿಯಲಿದ್ದಾರೆ ಎಂದು ಅವರ ಆಪ್ತಮೂಲಗಳು ತಿಳಿಸಿವೆ. ಸರಳವಾಗಿ ಮದುವೆಯಾಗಲು ಇಚ್ಛಿಸಿರು ವುದರಿಂದ ಮದುವೆ ಸಮಾರಂಭದಲ್ಲಿ ಶಿವನ್ ಹಾಗೂ ನಯನತಾರಾರ ಕುಟುಂಬ ವರ್ಗದವರು, ಆಪ್ತೇಷ್ಟರು, ಸ್ನೇಹಿತರು ಮಾತ್ರ ಪಾಲ್ಗೊಳ್ಳಲಿದ್ದಾರೆ.

ಇತ್ತೀಚೆಗೆ ವಿಘ್ನೇಶ್ ಶಿವನ್ ನಿರ್ದೇಶಿಸಿ ನಯನತಾರಾ ಹಾಗೂ ಸಮಂತಾ ಅವರು ನಟಿಸಿದ್ದ ಕತ್ತುವಾಕುಲ ರೆಂಡು ಕದಲ್ ಎಂಬ ಚಿತ್ರವು ಯಶಸ್ವಿಗೊಂಡ ಬೆನ್ನಲ್ಲೇ ಶಿವನ್ ಹಾಗೂ ನಯನತಾರಾ ಅವರು ತಿರುಮಲ ತಿರುಪತಿಯ ದೇಗುಲಕ್ಕೆ ಭೇಟಿ ನೀಡಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.

ತಮ್ಮ ಮದುವೆಯ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸುತ್ತಿದ್ದ ಶಿವನ್ ಹಾಗೂ ನಯನತಾರಾ ಅವರ ವಿವಾಹದ ದಿನಾಂಕ ಸುದ್ದಿ ತಿಳಿದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ.

Facebook Comments