ದ್ರಾವಿಡ್‍ರಿಂದ ತೆರವಾದ NCA ಅಧ್ಯಕ್ಷ ಸ್ಥಾನಕ್ಕೆ ಅರ್ಹರ ಹುಡುಕಾಟದಲ್ಲಿ BCCI

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ. 18- ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗುವ ರೇಸಿನಲ್ಲಿ ಇದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅವರು ಬಿಸಿಸಿಐಗೆ ಶಾಕ್ ನೀಡಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ಸ್ಥಾನವನ್ನು ಖ್ಯಾತ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ನಿರಾಕರಿಸಿರುವುದರಿಂದ ಬಿಸಿಸಿಐ ಸದಸ್ಯರು ಹೊಸಬರ ಹುಡುಕಾಟಕ್ಕೆ ಮುಂದಾಗಿದೆ.

ಎನ್‍ಸಿಎ ಅಧ್ಯಕ್ಷರಾಗಿದ್ದ ಕನ್ನಡಿಗ ರಾಹುಲ್ ದ್ರಾವಿಡ್‍ರ ಸೇವಾವ ಮುಗಿದಿರುವುದರಿಂದ ಆ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್‍ರನ್ನು ಕರೆತರಲು ಬಿಸಿಸಿಐ ನಿರ್ಧರಿಸಿತ್ತಾದರೂ ಲಕ್ಷ್ಮ್‍ಣ್ ಅವರು ನಿರಾಕರಿಸಿ ರುವುದರಿಂದ ಬಿಸಿಸಿಐಗ ಹಿನ್ನೆಡೆ ಉಂಟಾಗಿದೆ.

ರಾಹುಲ್ ದ್ರಾವಿಡ್ ಅವರು ಮತ್ತೊಂದು ಬಾರಿಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಮನಸ್ಸು ಹೊಂದಿದ್ದರಾದರೂ ಎರಡು ವರ್ಷಗಳ ಅವಗೆ ಭಾರತದ ಹಿರಿಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಆಯ್ಕೆಯಾಗಿರುವುದರಿಂದ ಆ ಸ್ಥಾನಕ್ಕೆ ಬೇರೆಯವರನ್ನು ಕರೆತರಲು ಬಿಸಿಸಿಐ ನಿರ್ಧರಿಸಿದೆ.

ಚುಟುಕು ವಿಶ್ವಕಪ್ ಮುಗಿದ ನಂತರ ರವಿಶಾಸ್ತ್ರಿಯ ಸೇವಾವ ಮುಗಿದ ನಂತರ ಕನ್ನಡಿಗ ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಕಾರ್ಯವನ್ನು ನಿಭಾಯಿಸಲಿದ್ದಾರೆ.

ರಾಹುಲ್‍ದ್ರಾವಿಡ್‍ರಿಂದ ತೆರವಾದ ಎನ್‍ಸಿಎ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ್ ಅವರು ಸೂಕ್ತ ಅಭ್ಯರ್ಥಿಯಾಗಿದ್ದರು, ಅವರು ಈಗಾಗಲೇ ಬಂಗಾಳದ ಕ್ರಿಕೆಟ್‍ನ ಬ್ಯಾಟಿಂಗ್ ಸಲಹೆಗಾರ ಹಾಗೂ ಐಪಿಎಲ್‍ನಲ್ಲಿ ಸನ್‍ರೈಸರ್ಸ್ ಹೈದ್ರಾಬಾದ್ ತಂಡದ ಮೆಂಟರ್ ಆಗಿ ಕಾರ್ಯನಿರ್ವ ಹಿಸುತ್ತಿರುವುದಲ್ಲದೆ 134 ಟೆಸ್ಟ್ ಪಂದ್ಯಗಳಿಂದ 17 ಸೆಂಚುರಿ ಸಹಿತ 8781 ರನ್ ಗಳಿಸಿದ್ದಾರೆ.

ಚುಟುಕು ಮಾದರಿಯ ಕ್ರಿಕೆಟ್‍ಗೆ ಲಕ್ಷ್ಮಣ್ ಅವರು ಸೂಕ್ತ ಅಲ್ಲ ಎಂಬ ಅನೇಕ ಕ್ರಿಕೆಟ್ ಪಂಡಿತರೇ ಲೆಕ್ಕಾಚಾರ ಹಾಕಿದರೂ ಐಪಿಎಲ್‍ನಲ್ಲಿ ಸನ್‍ರೈಸರ್ಸ್ ತಂಡ ಸೇರಿದಂತೆ ಹಲವು ತಂಡಗಳ ಪರ ಆಡಿ ನಂತರ ಎಸ್‍ಆರ್‍ಎಚ್‍ನ ಮೆಂಟರ್ ಆಗಿದ್ದಲ್ಲದೆ ಆ ತಂಡವನ್ನು ಐಪಿಎಲ್ ಚಾಂಪಿಯನ್ ಆಗಿಸುವಲ್ಲಿ ಲಕ್ಷ್ಮಣ್ ಯಶಸ್ವಿಯಾಗಿದ್ದರು.

Facebook Comments