ಸುಶಾಂತ್ ಸಿಂಗ್ ಪ್ರಕರಣ : ಮುಂಬೈ, ಗೋವಾದ ಹಲವೆಡೆ ಎನ್‍ಸಿಬಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ/ಪಣಜಿ, ಸೆ.12-ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ತನಿಖೆಯ ಭಾಗವಾಗಿ ಮಾದಕ ವಸ್ತುಗಳ ನಿಯಂತ್ರಣ ಮಂಡಳಿ (ಎನ್‍ಸಿಬಿ) ಅಧಿಕಾರಿಗಳ ತಂಡಗಳು ಇಂದು ಬೆಳಗ್ಗೆಯಿಂದ ಮುಂಬೈ ಮತ್ತು ಗೋವಾದ ವಿವಿಧೆಡೆ ಸರಣಿ ದಾಳಿಗಳನ್ನು ನಡೆಸಿದೆ.

ಮುಂಬೈ ಮತ್ತು ಪಣಜಿಗಳ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ದಾಳಿಗಳು ನಡೆದಿದ್ದು, ಚಿತ್ರತಾರೆಯರೂ ಸೇರಿದಂತೆ ಕೆಲವರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಸುಶಾಂತ್‍ಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದ ಸಂಬಂಧ ಬಂಧಿತರಾದ ಚಿತ್ರನಟಿ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಅಧಿಕಾರಿಗಳ ಮುಂದೆ ಮತ್ತಷ್ಟು ಸಂಗತಿಗಳನ್ನು ಬಹಿರಂಗಗೊಳಿಸಿದ್ದಾರೆ.

ಬಾಲಿವುಡ್ ತಾರೆ ಮತ್ತು ಹಿರಿಯ ಅಭಿನೇತ ಸೈಫ್ ಅಲಿ ಖಾನ್ ಅವರ ಪುತ್ರಿ ಸಾರಾ ಅಲಿ ಖಾನ್, ಸ್ಯಾಂಡಲ್‍ವುಡ್ ಸೇರಿದಂತೆ ಬಹುಭಾಷಾ ನಟಿ ರಾಕುಲ್ ಪ್ರೀತ್, ಚಿತ್ರ ನಿರ್ಮಾಪಕ ಮುಕೇಶ್ ಛಾಬ್ರಾ, ವಸ್ತ್ರ ವಿನ್ಯಾಸಕಿ ಸೈಮೋನೆ ಕಂಬಾಟಾ, ಸುಶಾಂತ್ ಗೆಳತಿ ಮತ್ತು ಮಾಜಿ ಮ್ಯಾನೇಜರ್ ರೋಹಿಣಿ ಅಯ್ಯರ್ ಡ್ರಗ್ಸ್ ಸೇವಿಸಿದ್ದ ಸಂಗತಿಯನ್ನು ರಿಯಾ ಎನ್‍ಸಿಬಿ ಮುಂದೆ ಬಾಯಿಬಿಟ್ಟಿದ್ದಾರೆ.

ಈ ಬಗ್ಗೆ ತನಿಖೆ ತೀವ್ರಗೊಳಿಸಿರುವ ತನಿಖಾ ಸಂಸ್ಥೆ ಪ್ರಕರಣದಲ್ಲಿ ಹೆಸರಿಸಲ್ಪಟ್ಟಿರುವವರ ಜಾಡು ಹಿಡಿದು ತನಿಖೆ ನಡೆಸುತ್ತಿದ್ದು, ಇನ್ನೂ ಕೆಲವರು ಬಂಧನಕ್ಕೆ ಒಳಗಾಗುವ ನಿರೀಕ್ಷೆ ಇದೆ. ಸುಶಾಂತ್ ಸಾವು ಪ್ರಕರಣದಲ್ಲಿ ಡಗ್ಸ್ ಜಾಲದ ನಂಟು ಕೇಳಿ ಬಂದ ನಂತರ ತನಿಖೆಯ ಆಳ ಅಗೆದಷ್ಟು ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ.

Facebook Comments