ನಶೆಯಲ್ಲಿ ತೇಲಾಡಿದ ಸ್ಯಾಂಡಲ್‍ವುಡ್‍ ನಟ-ನಟಿಯರಿಗೆ ಎನ್‍ಸಿಬಿ ನೋಟಿಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.29- ದಿನದಿಂದ ದಿನಕ್ಕೆ ಹೊಸ ಹೊಸ ಸ್ವರೂಪ ಪಡೆದುಕೊಳ್ಳುತ್ತಿರುವ ಡ್ರಗ್ಸ್ ಜಾಲದ ಪ್ರಕರಣ ಸಂಬಂಧ ಮಾದಕ ವಸ್ತುಗಳ ಸೇವನೆ ಆರೋಪದಡಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹೆಸರಾಂತ ನಟನಟಿಯರಿಗೆ ಮಾದಕದ್ರವ್ಯ ನಿಯಂತ್ರಣ ದಳ(ಎನ್‍ಸಿಬಿ) ನೋಟಿಸ್ ನೀಡಲು ಮುಂದಾಗಿದೆ.

ಈ ಬೆಳವಣಿಗೆಗಳ ನಡುವೆಯೇ ಪತ್ರಕರ್ತ ಇಂದ್ರಜೀತ್ ಲಂಕೇಶ್ ಅವರು ನನಗೆ ಸೂಕ್ತ ರಕ್ಷಣೆ ನೀಡಿದರೆ ಡ್ರಗ್ಸ್ ಸೇವನೆ ಮಾಡುವ ಚಿತ್ರರಂಗದ ಗಣ್ಯರ ಹೆಸರನ್ನು ಬಹಿರಂಗಪಡಿಸುವುದಾಗಿ ಸೋಟಕ ಮಾಹಿತಿ ನೀಡಿದ್ದಾರೆ.

ಇದರ ನಡುವೆಯೇ ಬೆಂಗಳೂರು ನಗರ ಜಾಲೀಸ್ ಆಯುಕ್ತ ಕಮಲ್ ಪಂಥ್   ಅವರು ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ್ದು, ಎಸ್‍ಸಿಬಿ ತನಿಖಾ ತಂಡ ಯಾವುದೇ ಮಾಹಿತಿ ಕೇಳಿದರೂ ಒದಗಿಸಲು ಸಿದ್ದರಿದ್ದೇವೆ ಎಂದು ಹೇಳಿದ್ದಾರೆ.

ಹೀಗಾಗಿ ಮುಂದಿನ ದಿನಗಳಲ್ಲಿ ಡ್ರಗ್ಸ್ ಜಾಲ ಹಲವರ ಕೊರಳಿಗೆ ಉರುಳಾಗುವ ಸಾಧ್ಯತೆಯಿದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.   ಕಳೆದ ಗುರುವಾಗ ಡ್ರಗ್ ಡೀಲರ್ಸ್ ಆರೋಪದಡಿ ಬಂಧನಕ್ಕೊಳಪಟ್ಟಿರುವ ಅನಿಕಾ, ಅನೂಪ್ ಮತ್ತು ರಿಜೇಶ್ ಅವರುಗಳು ವಿಚಾರಣೆ ವೇಳೆ ಹಲವು ನಟ- ನಟಿಯರ ಹೆಸರನ್ನು ಬಹಿರಂಗಪಡಿಸಿದ್ದು, ಕಳೆದ ಹಲವು ವರ್ಷಗಳಿಂದ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿರುವುದಾಗಿ ತನಿಖಾ ಅಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ.

ಕೇವಲ ಸ್ಟಾರ್ ನಟರಲ್ಲದೆ ಉದಯೋನ್ಮುಖ ತಾರೆಗಳು, ಕನ್ನಡದ ವಿವಾದಿತ ನಟಿ, ರಿಯಾಲಿಟಿ ಶೋನ ಸ್ರ್ಪಗಳು, ನೃತ್ಯಗಾರ್ತಿಯರು, ದಕ್ಷಿಣ ಭಾರತದ ಹೆಸರಾಂತ ಸಂಗೀತ ನಿರ್ದೇಶಕರು, ಪ್ರಭಾವಿ ಪತ್ರಕರ್ತರೊಬ್ಬರ ಸಂಬಂಯ ನಟ ಸೇರಿದಂತೆ ಹಲವರು ಅನಿಕಾಳ ಗ್ರಾಹಕರಾಗಿದ್ದಾರೆ ಎಂಬ ಸೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಡ್ರಗ್ ಗ್ರಾಹಕರಲ್ಲಿ ನಟರಿಗಿಂತ ನಟಿಯರೇ ಹೆಚ್ಚಾಗಿರುವುದು ತನಿಖೆಯಿಂದ ಹೊರಬಿದ್ದಿದೆ. ಈ ಎಲ್ಲಾ ಮಾಹಿತಿಯನ್ನು ಬಂತ ಅನೂಪ್ ತನಿಖಾ ಅಕಾರಿಗಳ ಮುಂದೆ ಬಾಯಿಬಿಟ್ಟಿದ್ದಾನೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

ಹೈಟೆಕ್ ಡ್ರಗ್ ಪೆಡ್ಲರ್‍ಗಳಾಗಿರುವ ಈ ಮೂವರು ವಿಚಾರಣೆ ವೇಳೆ ದಿನಕ್ಕೆ ಒಂದರಂತೆ ಒಂದೊಂದೇ ಭಯಾನಕ ಸತ್ಯವನ್ನು ಹೊರಹಾಕುತ್ತಿದ್ದು, ದಕ್ಷಿಣ ಭಾರತದ ಚಿತ್ರರಂಗದ ಗಣ್ಯಾತಿಗಣ್ಯರು, ನಟಿಯರು ಸೌಂದರ್ಯ ಹೆಚ್ಚಿಸಿಕೊಳ್ಳಲು ಡ್ರಗ್ಸ್ ಹಿಂದೆ ಬಿದ್ದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸಿನಿಮಾ ರಿಲೀಸ್ ನಂತರ ಪ್ರತಿಷ್ಠಿತ ಸ್ಟಾರ್ ಹೋಟೆಲ್, ಪಬ್, ಹೈಟೆಕ್ ಪಾರ್ಟಿಗಳಲ್ಲಿ ಸ್ಟಾರ್ ನಟ-ನಟಿಯರು, ಮಾಡೆಲ್‍ಗಳು, ಸಂಗೀತ ನಿರ್ದೇಶಕರು ಭಾಗಿಯಾಗುತ್ತಿದ್ದರು. ಇದೇ ಪಾರ್ಟಿಯಲ್ಲಿ ಆರೋಪಿ ಡ್ರಗ್ಸ್ ಹಂಚಿಕೆ ಮಾಡುತ್ತಿದ್ದಳು. ಪಾರ್ಟಿಯಲ್ಲಿಯೇ ಅನಿಕಾಳಿಗೆ ಹಣ ಕೊಟ್ಟು ಹಲವು ಬಾರಿ ಡ್ರಗ್ಸ್ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ಜೊತೆಗೆ ತಮಿಳು, ತೆಲುಗು, ಮಲೆಯಾಳಿ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದ ಎಲ್ಲಾ ನಟನಟಿಯರು, ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ದೇಶಕರು ಸೇರಿದಂತೆ ಬಹತೇಕ ಕಲಾವಿದರಿಗೆ ಈ ಮಾದಕ ವಸ್ತುಗಳನ್ನು ಒದಗಿಸುತ್ತಿದ್ದರು.

ಲಾಕ್‍ಡೌನ್ ಸಮಯದಲ್ಲಿ ಅನಿಕಾ ಇರುವ ಕಡೆಗೆ ಬಂದು ಡ್ರಗ್ಸ್ ಪಡೆದುಕೊಳ್ಳುತ್ತಿದ್ದರು. ಅನಿಕಾ ಹಲವು ಬಾರಿ ಸ್ಟಾರ್ ನಟರು ಇರುವ ಅವರ ಖಾಸಗಿ ಫಾರ್ಮ್ ಹೌಸ್‍ಗಳಿಗೆ ತೆರಳಿ ಡ್ರಗ್ಸ್ ನೀಡಿದ್ದಾಳೆ ಎಂಬ ಆರೋಪವಿದೆ.

ಇದೀಗ ಮೂವರನ್ನು ವಶಕ್ಕೆ ಪಡೆದಿರುವ ಎನ್‍ಸಿಬಿ ಅಕಾರಿಗಳು ದಿನಕ್ಕೆ ಒಬ್ಬರಂತೆ ವಿಚಾರಣೆಗೊಳಪಡಿಸಿದ್ದಾರೆ. ಪ್ರಕರಣದ ಕಿಂಗ್‍ಪಿನ್ ಎಂದೇ ಹೇಳಲಾಗಿರುವ ಅನಿಕಾ, ಕಾಲೇಜಿನಲ್ಲೇ ಡ್ರಗ್ ಪೂರೈಕೆ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

ನಗರದ ಪ್ರತಿಷ್ಠಿತ ಹೋಟೆಲ್, ಪಬ್ ಮತ್ತು ಹೈಟೆಕ್ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಅನಿಕಾ ಈ ಮುಖಾಂತರ ಪಾರ್ಟಿಗೆ ಬರುತ್ತಿದ್ದ ಸ್ಟಾರ್ ನಟ-ನಟಿಯರು, ಮಾಡೆಲ್ಸ್ ಹಾಗೂ ಸಂಗೀತ ನಿರ್ದೇಶಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು.

ಸಿನಿಮಾ ಬಿಡುಗಡೆಯಾದ ನಂತರ ನಡೆಯುತ್ತಿದ್ದ ಖಾಸಗಿ ಪಾರ್ಟಿಗಳಿಗೂ ತೆರಳಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದಳು. ಲಾಕ್‍ಡೌನ್ ವೇಳೆ ನಟ, ನಟಿಯರು ಅನಿಕಾ ಇದ್ದೆಡೆಗೆ ಬಂದು ಡ್ರಗ್ಸ್ ಖರೀದಿಸುತ್ತಿದ್ದರು ಎಂಬ ಮಾಹಿತಿ ದೊರೆತಿದೆ.

# ಇಂದ್ರಜಿತ್ ಹೇಳಿದ್ದೇನು?:
ಡ್ರಗ್ಸ್ ಜಾಲದ ಬಗ್ಗೆ ಸೋಟ ಮಾಹಿತಿ ನೀಡಿರುವ ಪತ್ರಕರ್ತ ಇಂದ್ರಜಿತ್ ಲಂಕೇಶ್, ಹಲವಾರು ರೇವ್ ಪಾರ್ಟಿಗಳು ನಡೆಯುತ್ತಾ ಇರುತ್ತವೆ. ಯುವ ನಟ ಹಾಗೂ ನಟರು ಇದರಲ್ಲಿ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.

ಪ್ರಚಾರ ಪಡೆಯುತ್ತಿರುವಂತಹ ಯುವ ನಟ-ನಟಿಯರು ಪಾರ್ಟಿ ಹಾಗೂ ಈ ರೀತಿಗಳಲ್ಲಿ ತಮ್ಮನ್ನು ತಾವು ತೊಡಿಸಿಕೊಳ್ಳುತ್ತಾರೆ ಎಂಬುದನ್ನು ನಾನು ಕೇಳಿದ್ದೀನಿ. ಹಲವಾರು ಘಟನೆಗಳು ಕೂಡ ನನಗೆ ತಿಳಿದಿದೆ. ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದಂತೆ ನನಗೂ ರಕ್ಷಣೆ ಕೊಟ್ಟರೆ ನಾನೂ ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಲು ಸಿದ್ಧನಿದ್ದೇನೆ ಎಂದು ಬಾಂಬ್ ಸಿಡಿಸಿದ್ದಾರೆ.

# ವಿಚಾರಣೆಗೆ ಸಹಕಾರ ಕೊಡಲು ಸಿದ್ದ:
ಸ್ಯಾಂಡಲ್‍ವುಡ್‍ನ್ ಡ್ರಗ್ಸ್ ಮಾಫಿಯಾದ ಬಗ್ಗೆ ಎನ್‍ಸಿಬಿ ತನಿಖೆ ನಡೆಸುತ್ತಿದೆ. ಅವರು ನಮ್ಮ ಸಹಕಾರ ಕೇಳಿದರೆ ನಾವು ಸಹಾಯ ಮಾಡುತ್ತೇವೆ ಎಂದು ನಗರ ಜಾಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ.

ಎನ್‍ಸಿಬಿ ಅಕಾರಿಗಳು ಹೊರಗಡೆಯಿಂದ ಬರುತ್ತಿದ್ದಾರೆ ಎಂದು ನಮಗೆ ಗೊತ್ತಾಗಿದೆ. ಒಂದು ವೇಳೆ ಎನ್‍ಸಿಬಿ ತಂಡ ನಮ್ಮ ಸಹಕಾರ, ಬೆಂಬಲವನ್ನು ಕೇಳಿದರೆ ನಾವು ಪೂರ್ಣ ಪ್ರಮಾಣದಲ್ಲಿ ಸಹಕಾರಿಸುವುದಾಗಿ ತಿಳಿಸಿದ್ದಾರೆ.

ಅವರಿಗೆ ಅನುಕೂಲವಾದಾಗ ಪ್ರಕರಣವನ್ನು ನಮಗೆ ನೀಡಿದರೆ ನಾವು ಖಂಡಿತ ತನಿಖೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಸಹಕಾರ ನೀಡಲು ಜಾಲೀಸರು ಬದ್ಧರಾಗಿದ್ದೇವೆ. ಎನ್‍ಸಿಬಿ ಅಕಾರಿಯಿಂದ ನಮಗೆ ಇಲ್ಲಿವರೆಗೂ ಯಾವುದೇ ಮಾಹಿತಿ ತಿಳಿಸಿಲ್ಲ. ಎನ್‍ಸಿಬಿ ಮಾಹಿತಿ ಹಂಚಿಕೊಂಡರೆ ನಂತರ ನಾವು ಕ್ರಮ ತೆಗೆದುಕೊಳ್ಳುತ್ತೇವೆ ತಿಳಿಸಿದ್ದಾರೆ.

ಇಂದ್ರಜಿತ್ ಲಂಕೇಶ್ ಹೇಳಿಕೆ ಬಗ್ಗೆ ನಮ್ಮ ಜಾಲೀಸರು ಗಮನಿಸಿದ್ದೇವೆ. ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಅವರಿಗೆ ರಕ್ಷಣೆ ಬೇಕೆಂದರೆ ನೀಡಲು ಸಿದ್ದರಿದ್ದೇವೆ. ಬಳಿಕ ಸಮನ್ಸ್ ನೀಡುವುದರ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

Facebook Comments

Sri Raghav

Admin