ಎನ್‍ಸಿಬಿಯಿಂದ 12 ಕಿ.ಗ್ರಾಂ. ಮಾದಕವಸ್ತು, ಬಂದೂಕು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜ.22- ದಕ್ಷಿಣ ಮುಂಬೈ ಡೋಂಗ್ರಿ ಪ್ರದೇಶದ ಗೃಹ ಪ್ರಯೋಗಾಲದ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ಅಧಿಕಾರಿಗಳು ದಾಳಿ ನಡೆಸಿ 12 ಕಿ.ಗ್ರಾಂ. ಮಾದಕ ದ್ರವ್ಯಗಳು ಮತ್ತು ಬಂಧೂಕನ್ನು ವಶ ಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ಗ್ಯಾಂಗ್‍ಸ್ಟರ್ ಪರ್ವೇಶ್ ಖಾನ್ ಅಲಿಯಾಸ್ ಚಿಂಕೂ ಪಠಾಣ್ ಹಾಗೂ ಭೂಗತಲೋಕ ದೊರೆ ದಾವೂದ್ ಇಬ್ರಾಹಿಂನ ಸಹಚರನೊಬ್ಬನನ್ನು ಡ್ರಗ್ಸ್ ಜಾಲದ ಸಂಬಂಧದಲ್ಲಿ ಬಂಧಿಸಿದ್ದಾರೆ.

ಎನ್‍ಸಿಬಿ ತಂಡ ಶೋಧ ಕಾರ್ಯದಲ್ಲಿ ತೊಡಗಿದ್ದರು. ಡೋಂಗ್ರಿಯ ಮನೆಯಲ್ಲಿ ಅನಧಿಕೃತವಾಗಿ ಪ್ರಯೋಗಾಲಯ ನಡೆಸುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿದ ಮುಂಬೈ ಜೋನ್‍ನ ಅಧಿಕಾರಿಗಳು 12 ಕಿಲೋ ಗ್ರಾಂ ಮಾದಕದ್ರವ್ಯ, 2.18 ಕೋಟಿ ರೂ. ನಗದು ಹಾಗೂ ಆಟೋಮ್ಯಾಟಿಕ್ ರಿವಾಲ್ವರ್ ವಶಕ್ಕೆ ಪಡೆದಿದ್ದಾರೆ. ನವಿ ಮುಂಬೈ ಭಾಗದ ಘನ್‍ಸೋಲಿ ಮನೆಯಲ್ಲಿ ವಾಸಿಸುತ್ತಿದ್ದ ಆರೋಪಿ ಖಾನ್‍ನನ್ನು ಎನ್‍ಸಿಬಿ ಜೋನಲ್ ನಿರ್ದೇಶಕ ಸಮೀರ್ ವಾಂಖೇಡೆ ನೇತೃತ್ವದ ತಂಡ ಬಂಧಿಸಿದೆ.

ಡೆಸ್ಟೆ ಹೆಸರಿನ ಪ್ರಯೋಗಾಲಯದಲ್ಲಿ 52.2 ಗ್ರಾಂ ಮೇಫೆಡ್ರೊನ್ ಮಾದಕ ವಸ್ತು, 1 ಕೆ.ಜಿ. ಮೆಥಾಂಫೇಟೈಮಿನ್ ಹಾಗೂ 6.12 ಕೆ.ಜಿ. ಎಫೆಡ್ರೈನ್ ಎನ್ನಲಾಗಿದೆ. ಇದರ ಜತೆಯಲ್ಲಿ ಅಪಾರ ಪ್ರಮಾಣದಲ್ಲಿ ಇತರ ವಸ್ತುಗಳನ್ನು ಹಾಗೂ ಲ್ಯಾಬೋರೇಟರಿ ನಡೆಸುತ್ತಿದ್ದ ಭುಜ್‍ವಾಲ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

Facebook Comments