ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಫಣೀಂದ್ರನ ಮಹಾದಾಸೆಯೇನುಗೋತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಾಥಪುರ, ಜೂ.7- ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (ನೀಟ್)ರಾಮನಾಥಪುರ ವಾಸಿ ಫಣೀಂದ್ರ ಡಿ.ಆರ್.ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿ ಶಾಲಾ-ಕಾಲೇಜು ಹಾಗೂ ಸ್ವಗ್ರಾಮಕ್ಕೆ ಹೆಸರು ತಂದಿದ್ದಾನೆ.

ಮಧುರಾ-ರಮೇಶ್ ಅವರ ಪುತ್ರನಾದ ಫಣೀಂದ್ರ ಪ್ರಾಥಮಿಕ ಶಾಲಾ ಹಂತವನ್ನು ಹಾಸನ ಜಿಲ್ಲೆ ಕೊಣನೂರಿನ ಎಂಕೆಎಸ್‍ನಲ್ಲಿ ಮುಗಿಸಿ ನಂತರ ನವೋದಯದಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ್ದಾನೆ.

ಹೆಚ್ಚು ಅಂಕ ಗಳಿಸಿದ ಅಧಾರದ ಮೇಲೆ ಮಹಾರಾಷ್ಟ್ರದ ಪುಣೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು, ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವುದು ಅಮೋಘ ಸಾಧನೆಯಾಗಿದೆ ಎಂದು ಪಟ್ಟಣದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರತಿಕೆಯೊಂದಿಗೆ ಮತನಾಡಿದ ಫಣೀಂದ್ರ, ನಾನು ನೀಟ್ ಪರೀಕ್ಷೆಯಲ್ಲಿ 50ನೆ ರ್ಯಾಂಕ್‍ನ ಅಸುಪಾಸಿನಲ್ಲಿರಬಹುದು ಎಂದುಕೊಂಡಿದ್ದೆ. ಆದರೆ, ರಾಜ್ಯಕ್ಕೆ ಮೊದಲ ರ್ಯಾಂಕ್ ಬಂದಿರುವುದು ಅತೀವ ಸಂತೋಷ ತಂದಿದೆ ಎಂದು ಹೇಳಿದರು.

ನನ್ನ ತಂದೆ ಶಿಕ್ಷಕರಾಗಿದ್ದು, ಮನೆಯಲ್ಲಿಯೇ ನವೋದಯ ಶಾಲೆಗೆ ಬೇಕಾದ ತರಬೇತಿಯನ್ನು ಆಗಾಗ ಕೊಡುತ್ತಿದ್ದರು. ಈ ಉತ್ತುಂಗಕ್ಕೆ ನನ್ನ ತಾಯಿ-ತಂದೆಯರೇ ಕಾರಣೀಭೂತರು ಎಂದು ಭಾವುಕರಾದ ಅವರು, ನಮ್ಮ ಶಿಕ್ಷಕರುಗಳ ಪ್ರೋತ್ಸಾಹ, ಮಾರ್ಗದರ್ಶನ ನನ್ನಲ್ಲಿ ಅತ್ಮವಿಶ್ವಾಸ ಹೆಚ್ಚಿಸಿತು.

ಬಡವರ ಪರ ಕಾಳಜಿ ವಹಿಸಿ ವೈದ್ಯಕೀಯ ರಂಗದಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬುದು ನನ್ನ ಮಹದಾಸೆಯಾಗಿದೆ ಎಂದು ತಿಳಿಸಿದರು. ನಾನು ದೆಹಲಿಯಲ್ಲಿ ಎಐಐಎಂಎಸ್ ಹಾಗೂ ಪುದುಚೇರಿಯಲ್ಲಿ ಜೆಐಪಿಎಂಇ ಅರ್ ಪರೀಕ್ಷೆ ಬರೆದಿದ್ದು, ಅದರ ಫಲಿತಾಂಶವನ್ನು ಕಾಯುತ್ತಿದ್ದೇನೆ ಎಂದು ಅಂತರಂಗದ ಮಾತುಗಳನ್ನು ಬಿಚ್ಚಿಟ್ಟರು.

Facebook Comments