ನೇಪಾಳ ಮೂಲದ ಬಾಲಕಿ ಮೇಲೆ ಅತ್ಯಾಚಾರ
ಕುಣಿಗಲ್, ಜ.30- ನೇಪಾಳ ಮೂಲದ ಏಳು ವರ್ಷದ ಬಾಲಕಿ ಮೇಲೆ ಗ್ರಾಮದ ಯುವಕ ಅತ್ಯಾಚಾರವೆಸಗಿದ್ದು, ಈ ಪ್ರಕರಣ ಮುಚ್ಚಿಹಾಕಲು ಯತ್ನಿಸಿ ಕುಟುಂಬ ಸಮೇತ ಆರೋಪಿ ತಲೆಮರೆಸಿಕೊಂಡಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನೇಪಾಳ ಮೂಲದ ಕುಟುಂಬವೊಂದು ಯಡಿ ಯೂರು ಹೋಬಳಿ ತಟ್ಟೆಕೆರೆ ಗ್ರಾಮದಲ್ಲಿ ನೆಲೆಸಿದ್ದು, ಇವರ ಏಳು ವರ್ಷದ ಬಾಲಕಿ ಮೇಲೆ ಗ್ರಾಮದಲ್ಲೇ ಗೋಶಾಲೆ ನಡೆಸುವ ಕುಟುಂಬವೊಂದರ ಮಗ ಅತ್ಯಾಚಾರವೆಸಗಿದ್ದಾನೆ.
ಮಗ ಅತ್ಯಾಚಾರವೆಸಗಿರುವ ವಿಷಯ ತಿಳಿದ ಈತನ ತಂದೆ ಸಂತ್ರಸ್ತ ಬಾಲಕಿಯ ತಾಯಿಗೆ ಹಣಕೊಟ್ಟು ಪ್ರಕರಣ ಮುಚ್ಚಿಹಾಕಲು ಯತ್ನಿಸಿ ಬೆಂಗಳೂರಿನ ಆರ್ಟಿ ನಗರದಲ್ಲಿ ಪರಿಚಯವಿರುವ ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಬಿಟ್ಟುಬಂದಿದ್ದಾನೆ. ಕೆಲ ದಿನಗಳ ನಂತರ ಬಾಲಕಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡು ಅನಾರೋಗ್ಯಕ್ಕೊಳಗಾದಾಗ ಪುನರ್ವಸತಿ ಕೇಂದ್ರದವರು ಬಾಲಕಿಯನ್ನು ಆಸ್ಪತ್ರೆಗೆ ಸೇರಿಸುತ್ತಾರೆ.
ವೈದ್ಯರು ಬಾಲಕಿಯನ್ನು ಪರೀಕ್ಷಿಸಿ ಅತ್ಯಾಚಾರವಾಗಿ ರುವುದು ತಿಳಿದ ತಕ್ಷಣ ಬಾಲಕಿ ತಾಯಿ ಹಾಗೂ ಆರೋಪಿ ಮತ್ತು ಈತನ ತಂದೆ ವಿರುದ್ಧ ಅಮೃತೂರು ಪೊಲೀಸರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾ ಚರಣೆ ನಡೆಸಿ ಬಾಲಕಿಯನ್ನು ಸೇರಿಸಲು ಸಹಕರಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದು ಉಳಿದವರಿಗಾಗಿ ಶೋಧ ಮುಂದುವರೆಸಿದ್ದಾರೆ.