ಮೇ.10ರಂದು ವಿಶ್ವಾಸ ಮತ ಯಾಚಿಸಲಿದ್ದಾರೆ ನೇಪಾಳಿ ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

ಕಠ್ಮಂಡು,ಮೇ 3-ನೇಪಾಳ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿ ಅವರು ಮೇ 10 ರಂದು ಸಂಸತ್‍ನಲ್ಲಿ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ.ನೇಪಾಳ ಆಧ್ಯಕ್ಷರಾದ ಬಿದ್ಯಾದೇವಿ ಭಂಡಾರಿ ಅವರು ಮೇ.10 ರಂದು ವಿಶೇಷ ಅಧಿವೇಶನ ಕರೆದು ವಿಶ್ವಾಸಮತ ಯಾಚನೆ ಮಾಡುವಂತೆ ಶಿಫಾರಸು ಮಾಡಿದ್ದರು.

ಅಧ್ಯಕ್ಷರ ಸೂಚನೆ ಮೇರೆ ಓಲಿ ಅವರು ಮೇ.10 ರಂದು ವಿಶ್ವಾಸ ಮತ ಯಾಚನೆ ಮಾಡಲು ತೀರ್ಮಾನಿಸಿದ್ದಾರೆ. 275 ಸದಸ್ಯ ಬಲದ ನೇಪಾಳ ಸಂಸತ್‍ನಲ್ಲಿ ಓಲಿ ಅವರು ವಿಶ್ವಾಸ ಮತ ಗೆಲ್ಲಬೇಕಾದರೆ 136 ಮತ ಪಡೆಯಬೇಕಾಗುತ್ತದೆ.

ಕಳೆದ ಡಿಸಂಬರ್‍ನಲ್ಲಿ ಓಲಿ ಕೆಲವು ಸದಸ್ಯರನ್ನು ಕಾನೂನುಬಾಹಿರವಾಗಿ ಡಿಸಾಲ್ವ್ ಮಾಡಿದ ವಿವಾದಾತ್ಮಾಕ ತೀರ್ಪಿನ ಹಿನ್ನಲೆಯಲ್ಲಿ ವಿಶ್ವಾಸ ಮತ ಯಾಚನೆ ಪರಿಸ್ಥಿತಿ ಎದುರಿಸುವಂತಾಗಿದೆ. ನಾನು ಮೇ.10 ರ ಅಗ್ನಿಪರೀಕ್ಷೆಯಲ್ಲಿ ಗೆದ್ದು ಅಧಿಕಾರ ಉಳಿಸಿಕೊಳ್ಳುತ್ತೇನೆ. ಈ ಬಗ್ಗೆ ಯಾವುದೆ ಆತಂಕವಿಲ್ಲ ಎಂದು ಓಲಿ ಹೇಳಿಕೊಂಡಿದ್ದಾರೆ.

Facebook Comments

Sri Raghav

Admin