ಮೋದಿ ದೋಸ್ತ್ ಇಸ್ರೇಲ್ ಪ್ರಧಾನಿ ರಾಜಕೀಯ ಯುಗಾಂತ್ಯ..?!

ಈ ಸುದ್ದಿಯನ್ನು ಶೇರ್ ಮಾಡಿ

ಜೆರುಸಲೆಂ, ಸೆ.18(ಪಿಟಿಐ)-ಇಸ್ರೇಲ್‍ನ ಸುದೀರ್ಘ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಜಮಿನ್ ನೆತನ್ಯಾಹು ಅವರ ರಾಜಕೀಯ ಜೀವನ ಅಂತ್ಯವಾಗುವುದೆ? ಚುನಾವಣೋತ್ತರ ಸಮೀಕ್ಷೆಗಳನ್ನು ನಂಬುವುದಾದರೆ ಜನಪ್ರಿಯ ಪ್ರಧಾನಿಗೆ ಸಂಸತ್ತಿನಲ್ಲಿ ಬಹುಮತ ಗಳಿಸಲು ಕೊರತೆ ಕಂಡುಬಂದಿದೆ.

ಇದರೊಂದಿಗೆ ದಾಖಲೆ ಐದನೇ ಬಾರಿ ಪ್ರಧಾನಮಂತ್ರಿಯಾಗುವ ಅವರ ಆಕಾಂಕ್ಷೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.  ಬೆಂಜಮಿನ್ ನೆತನ್ಯಾಹು ಅವರು ತಮ್ಮ ಮುಖ್ಯ ಸ್ಪರ್ಧಿ ಬ್ಲೂ ಅಂಡ್ ವೈಟ್ ಪಾರ್ಟಿ ನಾಯಕ ಬೆನ್ನಿ ಗಂಟ್ಜ್ ಅವರಿಗಿಂತ ಹಿಂದೆ ಇದ್ದಾರೆ ಎಂದು ಎಗ್ನಿಟ್ ಪೋಲ್ ಸಮೀಕ್ಷೆ ಹೇಳಿದೆ.

ಚುನಾವಣೋತ್ತರ ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಲಭಿಸುವ ಸಾಧ್ಯತೆಯೂ ಇಲ್ಲ. ರೈಟ್-ವಿಂಗ್ ಬ್ಲಾಕ್ ನಾಯಕರಾದ ನೆತನ್ಯಾರು ಅವರಿಗೆ 55-57 ಸ್ಥಾನಗಳು ಲಭಿಸಲಿವೆ ಎಂದು ಸಮೀಕ್ಷೆ ತಿಳಿಸಿವೆ. ಆದರೆ ಅವರ ಪ್ರಬಲ ಪ್ರತಿಸ್ಪರ್ಧಿ ಬೆನ್ನಿ ನೇತೃತ್ವದ ಪಕ್ಷಕ್ಕೆ 61 ಸ್ಥಾನಗಳು ದಕ್ಕಲಿವೆ ಎಂದು ಸುಳಿವು ನೀಡಲಾಗಿದೆ.

ನೆಸ್ಸಟ್(ಇಸ್ರೇಲಿ ಪಾರ್ಲಿಮೆಂಟ್) 120 ಸದಸ್ಯ ಬಲ ಹೊಂದಿದೆ. ಅತಂತ್ರ ಫಲಿತಾಂಶ ಹೊರಹೊಮ್ಮಿದರೆ ಅಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಂಭವವಿದೆ.

Facebook Comments