ಧರ್ಮಸ್ಥಳದಲ್ಲಿ ನಿವಾರಣೆಯಾಯ್ತು ಜಲಕ್ಷಾಮ, ತುಂಬಿ ಹರಿಯುತ್ತಿದೆ ನೇತ್ರಾವತಿ ನದಿ..

ಈ ಸುದ್ದಿಯನ್ನು ಶೇರ್ ಮಾಡಿ

ದಕ್ಷಿಣಕನ್ನಡ, ಜೂ. 13- ವಾಯು ಚಂಡಮಾರುತದಿಂದ ರಾಜ್ಯದ ಕರಾವಳಿ, ದಕ್ಷಿಣ ಕನ್ನಡ, ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಧರ್ಮಸ್ಥಳದಲ್ಲಿ ಜಲಕ್ಷಾಮ ನಿವಾರಣೆಯಾಗಿದ್ದು ಭಕ್ತರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು-ಮೂರು ದಿನಗಳಿಂದ ಬಿರುಗಾಳಿ ಸಹಿತ ಬಾರಿ ಮಳೆ ಸುರಿಯುತ್ತಿದ್ದು, ನೇತ್ರಾವತಿ ತುಂಬಿ ಹರಿಯುತ್ತಿದ್ದಾಳೆ. ಇದರಿಂದಾಗಿ ಶ್ರೀ ಕ್ಷೇತ್ರ ಮಂಜುನಾಥನಿಗೂ ತಟ್ಟಿದ್ದ ಜಲಕ್ಷಾಮದ ಆತಂಕ ನಿವಾರಣೆಯಾಗಿದೆ. ಭಕ್ತರು ಸಂತಸದಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಮಂಜುನಾಥನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಕಳೆದ ತಿಂಗಳಷ್ಟೇ ಧರ್ಮಸ್ಥಳದ ಧರ್ಮಾಧಿಕಾರಿಗಳಾ ಶ್ರೀ ವೀರೇಂದ್ರ ಹೆಗಡೆಯವರು, ಶ್ರೀ ಕ್ಷೇತ್ರದಲ್ಲಿ ನೀರಿಗೆ ಅತೀವ ತೊಂದರೆಯಾಗಿದೆ. ಆದ್ದರಿಂದ ದಯವಿಟ್ಟು ಭಕ್ತರು ಕ್ಷೇತ್ರಕ್ಕೆ ಆಗಮಿಸುವುದನ್ನು ಮುಂದೂಡಬೇಕೆಂದು ಮನವಿ ಮಾಡಿಕೊಂಡಿದ್ದರು.

ಶ್ರೀ ಕ್ಷೇತ್ರದ ಜಲ ಸಮಸ್ಯೆ ನಿವಾರಣೆಗಾಗಿ ಬಿಬಿಎಂಪಿ ವತಿಯಿಂದ 75,000 ಸಾವಿರ ಲೀಟರ್ ಕುಡಿಯುವ ನೀರನ್ನು ಕಳುಹಿಸಿಕೊಡಲಾಗಿತ್ತು. ಇದೀಗ ಭಾರೀ ಮಳೆ ಸುರಿಯುತ್ತಿರುವದರಿಂದ ನೇತ್ರಾವತಿಯ ಸ್ನಾನಘಟ್ಟ ಭರ್ತಿಯಾಗಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಸ್ನಾನ ಮಾಡಿ ಆ ಮಂಜುನಾಥನನ್ನು ನೆಮ್ಮದಿ ಪೂಜಿಸಿ ಹೋಗುತ್ತಿದ್ದಾರೆ.

Facebook Comments