ಬೆಂಗಳೂರಲ್ಲಿ ಪ್ರಾಪರ್ಟಿ ಹೊಂದಿರುವಿರಾ..? ಇಲ್ಲಿದೆ ನೋಡಿ ಮಹತ್ವದ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.19- ನಗರದಲ್ಲಿ ಇ-ಖಾತೆ ಹೊಂದುವುದು ಸದ್ಯದಲ್ಲೇ ಸಾಧ್ಯವಾಗಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜ್ಯ ಇ-ಆಡಳಿತ ವಿಭಾಗ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ ಬಿಬಿಎಂಪಿಗೆಂದೇ ರೂಪಿಸಿದ ಇ-ಆಸ್ತಿ ಎಂಬ ಹೊಸ ಸಾಫ್ಟ್‍ವೇರ್ ಅನ್ನು ಪರಿಚಯಿಸಲು ಮುಂದಾಗಿದೆ. ಇದನ್ನು ಕಾವೇರಿ ಎಂಬ ಇನ್ನೊಂದು ಅಪ್ಲಿಕೇಶನ್‍ನೊಂದಿಗೆ ಸಂಯೋಜಿಸಲಾಗಿದೆ.

ಬಿಬಿಎಂಪಿಯು ಇದನ್ನು ಬೆಂಗಳೂರಿನ ಪೂರ್ವ ವಲಯದಲ್ಲಿ ಪರಿಚಯಿಸಲು ಮುಂದಾಗಿದೆ ಮತ್ತು ಅಂತಿಮವಾಗಿ ನಗರದ ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ ಸುಮಾರು 100 ವಾರ್ಡ್‍ಗಳನ್ನು ಒಳಗೊಳ್ಳಲಿದೆ. ಬಿಬಿಎಂಪಿಯ ಈ ಮಹತ್ವದ ಕ್ರಮವು ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಲಿದೆ ಮತ್ತು ಆಸ್ತಿಗೆ ಸಂಬಂಸಿದ ವಂಚನೆಗಳನ್ನು ತಡೆಯಲಿದೆ.

ಮನುಷ್ಯರ ನೆರವಿಲ್ಲದೆ ಕೇವಲ ಹ್ಯಾಂಡ್ ಫ್ರೀ ಕಾರ್ಯಾಚರಣೆ ಇದಾಗಿದ್ದು, ಬಿಬಿಎಂಪಿಯ ಈ ಮುಂದಾಳತ್ವ ಸ್ವಾಗತಾರ್ಹ ಕ್ರಮವಾಗಿದೆ. ಆಸ್ತಿಯನ್ನು ನೋಂದಾಯಿಸಿದ ನಂತರ ಮತ್ತು ದೃಢೀಕರಿಸಿದ ಬಳಿಕ ಸ್ವಯಂಚಾಲಿತ ವ್ಯವಸ್ಥೆಯಿಂದ ಇದು ಮುಂದುವರಿಯುತ್ತದೆ. ಕೆಲವು ಕೆಲಸಗಳನ್ನು ಕೈಯಿಂದಲೇ ಮಾಡುವ ಮೂಲಕ ಆಸ್ತಿ ಹೂಡಿಕೆದಾರರ ಕೆಲಸ ಮತ್ತಷ್ಟು ಸರಳಗೊಳ್ಳುತ್ತದೆ.

ಸರ್ಕಾರವು ಇಂತಹ ಹೆಚ್ಚು ಸಕ್ರಿಯ ಗ್ರಾಹಕ ಸ್ನೇಹಿ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನಾವು ಎದುರು ನೋಡುತ್ತಿದ್ದೇವೆ. ಈ ಹಂತಗಳು ಖಂಡಿತವಾಗಿಯೂ ಸಂಕಷ್ಟದಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸ್ವಲ್ಪ ಮಟ್ಟಿನ ಪರಿಹಾರವನ್ನು ನೀಡುತ್ತದೆ ಎಂದು ಕ್ರೆಡೈ ಬೆಂಗಳೂರು ಅಧ್ಯಕ್ಷ ಸುರೇಶ್ ಹರಿ ಅಭಿಪ್ರಾಯಪಟ್ಟಿದ್ದಾರೆ.

ಹೊಸ ಸಾಫ್ಟ್‍ವೇರ್‍ನೊಂದಿಗೆ, ನಾಗರಿಕರು ಖಾತೆಗೆ ಒಂದು ಗುಂಡಿಯನ್ನು ಕ್ಲಿಕ್ ಮಾಡುವ ಮೂಲಕ ಪ್ರವೇಶಿಸಬಹುದು ಮತ್ತು ಆನ್‍ಲೈನ್‍ನಲ್ಲಿ ಆಸ್ತಿ ವಹಿವಾಟುಗಳನ್ನು ನಡೆಸಬಹುದು. ಆಧಾರ್ ಸಂಖ್ಯೆಯೊಂದಿಗೆ ಸಂಬಂತ ದಾಖಲೆಗಳನ್ನು ಸಲ್ಲಿಸುವುದರ ಮೂಲಕ ಈ ವಹಿವಾಟನ್ನು ಅಡೆತಡೆಯಿಲ್ಲದೆ ನಡೆಸಬಹುದು.

ಖಾತೆ ಹೊಂದುವ ಪ್ರಕ್ರಿಯೆ ಡಿಜಿಟಲೀಕರಣಗೊಂಡಿರುವುದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸರಿಯಾದ ದಿಕ್ಕಿನಲ್ಲಿ ಸಿಕ್ಕ ಒಂದು ಮುನ್ನಡೆಯಾಗಿದೆ. ಇದು ಮನೆಯ ಮಾಲಿಕರಿಗೆ ದಾಖಲೆಗಳನ್ನು ಕಾಪಾಡುವುದು ಮತ್ತು ಪಡೆಯುವ ಕೆಲಸವನ್ನು ಸುಲಭವಾಗಿಸುತ್ತದೆ ಎಂದು ವೈಷ್ಣವಿ ಗ್ರೂಪ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ ಎನ್ ಗೋವಿಂದರಾಜು ಹೇಳಿದ್ದಾರೆ.

ಆಸ್ತಿಗಾಗಿ ಖಾತೆ ಹೊಂದುವುದು ಯಾವುದೇ ಆಸ್ತಿ ಮಾಲೀಕರಿಗೆ ಸದಾ ಕಷ್ಟಕರವಾದ ಕೆಲಸವಾಗಿದೆ. ಇ-ಆಸ್ತಿಯೊಂದಿಗೆ, ಈ ಪ್ರಕ್ರಿಯೆ ವೇಗವಾಗಿ ನಡೆಯುವ ಭರವಸೆ ಇದೆ. ಇ-ಖಾತಾ ಪ್ರಮಾಣಪತ್ರಗಳು ಆಸ್ತಿ ಹೊಂದಿರುವವರ ಕೆಲಸದಲ್ಲಿ ಪಾರದರ್ಶಕತೆ ಮತ್ತು ಸರಾಗತೆಯನ್ನು ಉಂಟುಮಾಡುತ್ತದೆ, ಏಕೆಂದರೆ ಇನ್ನು ಪ್ರತಿಯೊಂದಕ್ಕೂ ಸುದೀರ್ಘ ಸರತಿ ಸಾಲಿನಲ್ಲಿ ಕಾಯಬೇಕಿಲ್ಲ.  ಪೇಪರ್- ಪತ್ರಗಳನ್ನು ಹಿಡಿದು ಸಬ್ ರಿಜಿಸ್ಟ್ರಾರ್ ಕಚೇರಿಗೆ ಅಲೆಯಬೇಕಿಲ್ಲ, ಇದು ಹಿಂದಿನಿಂದಲೂ ಮನೆಯ ಮಾಲಿಕರಿಗೆ ಅಡ್ಡಿಯಾಗಿದ್ದ ಹಲವು ಸಂಗತಿಗಳನ್ನು ನಿವಾರಿಸಲಿವೆ ಎಂದು ಹೊಯ್ಸಳ ಯೋಜನೆಗಳ ನಿರ್ದೇಶಕಿ ಮೋನಿಕಾ ಮಥಿಯಾಸ್ ಅಭಿಪ್ರಾಯಪಟ್ಟಿದ್ದಾರೆ.

Facebook Comments

Sri Raghav

Admin