ತುಮಕೂರಲ್ಲಿ ಆಟೋರಿಕ್ಷಾ ಪ್ರಯಾಣಕ್ಕೆ ಹೊಸ ದರ ನಿಗದಿ, ಇಲ್ಲಿದೆ ನೋಡಿ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Auto--01

ತುಮಕೂರು,ಜೂ.27- ಆಟೋರಿಕ್ಷಾ ದರವನ್ನು ಹೆಚ್ಚಿಸಿ ಮಾರ್ಚ್ 6ರಿಂದ ಜಾರಿಗೆ ಬರುವಂತೆ ಹೊಸ ದರವನ್ನು ನಿಗದಿಗೊಳಿಸುವ ನಿರ್ಣಯನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಕೈಗೊಳ್ಳಲಾಯಿತು. ದರ ನಿಗದಿಯಂತೆ ಆಟೋ ರಿಕ್ಷಾದಲ್ಲಿ 3 ಜನ ಪ್ರಯಾಣಿಕರಿಗೆ ಪ್ರತಿ 1 ಕಿ.ಮೀ.ಗೆ 13 ರೂ., ಮೊದಲ 2 ಕಿ.ಮೀ.ಗೆ 25 ರೂ., ಕಾಯುವ ದರ ಮೊದಲ 5 ನಿಮಿಷಕ್ಕೆ ಉಚಿತ, ನಂತರದ 15 ನಿಮಿಷಕ್ಕೆ 5 ರೂ., ಲಗೇಜ್ ದರ ಮೊದಲ 20 ಕೆ.ಜಿ. ಉಚಿತ, ನಂತರದ ಪ್ರತಿ 20 ಕೆ.ಜಿ.ಗೆ 2 ರೂ.ಗಳನ್ನು ನಿಗಧಿಪಡಿಸಿದ್ದು, ಗರಿಷ್ಠ 50 ಕೆ.ಜಿ. ಲಗೇಜನ್ನು ಸಾಗಿಸಬಹುದು. ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ಮೀಟರ್‍ನ ಒಂದೂವರೆ ಪಟ್ಟು ದರವನ್ನು ನಿಗದಿಪಡಿಸಲಾಗಿದೆ.

ಆಟೋರಿಕ್ಷಾಗಳಿಗೆ ಕಲರ್ ಕೋಡಿಂಗ್ ಕಡ್ಡಾಯಗೊಳಿಸಿದ್ದು, ತುಮಕೂರು ನಗರದಲ್ಲಿ ಪ್ರಯಾಣಿಸುವ ಆಟೋಗಳಿಗೆ ಹಳದಿ ಬಣ್ಣದ ಪಟ್ಟಿಯನ್ನು ಹಾಗೂ ಹಳ್ಳಿಗಾಡಿನ ಆಟೋಗಳಿಗೆ ಕೆಂಪು ಬಣ್ಣದ ಪಟ್ಟಿಯನ್ನು ಹಾಕಿಸಬೇಕು. ತುಮಕೂರು ನಗರದಲ್ಲಿ ಸಂಚರಿಸುವ ಆಟೋರಿಕ್ಷಾಗಳಿಗೆ ಮೀಟರ್, ಟಿಟಿಪಿ ನಂಬರ್, ಡಿಸ್‍ಪ್ಲೇ ಕಾರ್ಡ್ ಕಡ್ಡಾಯಗೊಳಿಸಲಾಗಿದೆ.

ಭಾರಿ ಸರಕು ಸಾಗಣೆ ವಾಹನಗಳ ಪ್ರವೇಶ ನಿಷೇಧ:
ತುಮಕೂರು ನಗರದಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಭಾರಿ ಸರಕು ಸಾಗಣೆ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಬೆಳಿಗ್ಗೆ 8 ಗಂಟೆಗೆ ಮುಂಚೆ ಮತ್ತು ರಾತ್ರಿ 8 ಗಂಟೆಯ ನಂತರ ಲೋಡಿಂಗ್ ಮತ್ತು ಅನ್‍ಲೋಡಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಉಪಸಾರಿಗೆ ಆಯುಕ್ತರು ತಿಳಿಸಿದ್ದಾರೆ.

Facebook Comments

Sri Raghav

Admin