ಶ್ವಾನಗಳಿಗೆ ಆಹಾರವಾದ ನವಜಾತ ಶಿಶು, ಈ ಸಾವು ನ್ಯಾಯವೇ…?

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ : ಅಲ್ಲಿ ಕಸದ ರಾಶಿ …ರಾಶಿಯ ಮದ್ಯ ಶ್ವಾನಗಳ ಹಸಿವಿನ ದಾಹಕ್ಕ ಮಾಂಸದ‌ ಮುದ್ದೆಯಂತೆ ಚಿಂದಿಯಾಗಿದ್ದ ನವಜಾತ ಶಿಶುವಿನ‌ ದೇಹ… ಇಂತಹ ಒಂದು ಅಮಾನವೀಯ ಹಾಗೂ ಮನಃ ಕಲಕುವ ದೃಶ್ಯ ಕಂಡುಬಂದದ್ದು ಹಾಸನದ ಶಂಕರಿಪುರಂ‌ ನಲ್ಲಿನ‌ ರಸ್ತೆ ಪಕ್ಕದಲ್ಲಿ.

ನಗರದ ಶಂಕರಿಪುರಂ ನಲ್ಲಿ ಎಂದಿನಂತೆ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ ಇಂತಹ ಕರುಳು ಹಿಂಡುವ ದೃಶ್ಯ ಕಂಡುಬಂದಿದ್ದು ಈ ರೀತಿ ಶಿಶು ವನ್ನು ಬೀದಿಪಾಲು ಮಾಡಿರುವುದಲ್ಲದೆ ಶ್ವಾನಗಳಿಗೆ ಆಹಾರವನ್ನಗಿಸಿದ ಹೃದಯ ಹೀನ ತಾಯಿ‌ ಯಾರು ಎಂದು ಪ್ರಶ್ನಿಸಿ ಕೊಂಡು ‌ಮರುಕಪಡುತ್ತ ಹಿಡಿ ಶಾಪ ಹಾಕಿದರು.

ನಗರದಲ್ಲಿ‌‌ ಇಂತಹ‌ ಹಲವು ಉದಾಹರಣೆಗಳು ಮರುಕಳುಹಿಸುತ್ತಿದ್ದು ಇದನ್ನು‌ ತಡೆಯುವ ನಿಟ್ಟಿನಲ್ಲಿ‌ ಖಾಸಗಿ ಆಸ್ಪತ್ರೆಯವರಾಗಲಿ‌ ಸರ್ಕಾರಿ ಸಂಬಂಧಿಸಿದ ಇಲಾಖೆಯಾಗಲಿ‌ ಮನಸ್ಸು ಮಾಡುತ್ತಿಲ್ಲಾ.

ಕೆಲವು ಖಾಸಗಿ‌ ಆಸ್ಪತ್ರೆಯಲ್ಲಿ ಇಂದಿಗೂ ಸಹ ಅಕ್ರಮವಾಗಿ ಬ್ರುಣ ಲಿಂಗಪತ್ತೆ ಸೇರಿದಂತೆ ಗರ್ಭಪಾತದಂತಹ ಪ್ರಕರಣಗಳು‌ ಹೆಚ್ಚುತ್ತಿದೆ. ಸದ್ಯ ಸ್ಥಳಕ್ಕೆ‌ ಬಡಾವಣೆ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ‌‌ ದಾಖಲಿಸಿದ್ದಾರೆ.

ಒಟ್ಟಾರೆ ನಗರದಲ್ಲಿ ಇಂತಹ ಪ್ರಕರಣ ಗಳು ಪುನಾರಾವರ್ತಿಸುತ್ತಿದೆ ಇನ್ನು ಕಣ್ಣು ಬಿಡದ ಜಗವನ್ನೆ ನೋಡದ. ಯಾವುದೇ ಪಾಪ‌ ಪುಣ್ಯ ಅರಿಯದ ಮಗುವನ್ನು ಬೀದಿ ಪಾಲು ಮಾಡಲು ತಾಯಿಗೆ ಹೇಗಾದರು ಮನಸ್ಸು ಬಂತು ಎಂದು ಪ್ರಶ್ನೆಯೊಂದಿಗೆ ಸಮಾಜದಲ್ಲಿ ಇಂತಹ ಹೀನ‌ ಕೃತ್ಯಕ್ಕೆ ಬಲಿಯಾದದ್ದು ಮಾತ್ರ ಮುಗ್ಧ ಶಿಶು‌ ಎಂಬುದೆ ಒಂದು ವಿಪರ್ಯಾಸ.

Facebook Comments

Sri Raghav

Admin