ಮೋರಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಮೇ 29 – ಮಕ್ಕಳಿಲ್ಲದ ಅದೆಷ್ಟೋ ದಂಪತಿಗಳು ನೂರಾರು ದೇವರಿಗೆ ಹರಕೆ ಹೊತ್ತು , ವೈದ್ಯರ ಸಲಹೆ ಪಡೆದರೂ ಮಕ್ಕಳ ಭಾಗ್ಯ ಬಹು ಕಷ್ಟವಾಗಿರುವ ಇಂದಿನ ಕಾಲದಲ್ಲಿ ನವಜಾತ ಶಿಶುವನ್ನು ಮೋರಿಯಲ್ಲಿ ಎಸೆದಿರುವ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ ಹೆರಗು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೋರಿಯಲ್ಲಿ ನವಜಾತ ಶಿಶುವಿನ ಮೃತ ದೇಹ ನೀರಿನಲ್ಲಿ ತೇಲುತ್ತಿದ್ದು , ಅಲ್ಲಿಯೇ ಆಟವಾಡುತ್ತಿದ್ದ ಮಕ್ಕಳು ಇದನ್ನು ಗಮನಿಸಿ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ದೃಶ್ಯವನ್ನು ಕಣ್ಣಾರೆ ಕಂಡು ಮಮ್ಮುಲ ಮರುಗಿ ಈ ಶಿಶುವಿನ ಸ್ಥಿತಿಗೆ ಕಾರಣರಾದವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಕೂಡಲೇ ದುದ್ದಾ ಪೊಲೀಸ್ ಠಾಣೆಗೆ ಸುದ್ದಿ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.

ಜಿಲ್ಲೆಯಲ್ಲಿ ನವಜಾತ ಶಿಶುಗಳು ಬೀದಿ ನಾಯಿಗಳು ಹಾಗೂ ಮೋರಿ ಕಸದ ಪಾಲಾಗುತ್ತಿರುವ ಘಟನೆಗಳು ಪದೇ ಪದೇ ಮರು ಕಳಿಸುತ್ತಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇನ್ನಾದರೂ ನವಜಾತ ಶಿಶುಗಳ ಸಾವನ್ನು ತಡೆಯಬೇಕೆಂದು ಎಲ್ಲರ ಒತ್ತಾಯವಾಗಿದೆ.

Facebook Comments

Sri Raghav

Admin