ಹೆತ್ತ ಮಗುವನ್ನು ಬ್ಯಾಗ್ ನಲ್ಲಿ ಬಚ್ಚಿಟ್ಟು ಪರಾರಿಯಾದ ನಿರ್ಧಯಿ ತಾಯಿ

ಈ ಸುದ್ದಿಯನ್ನು ಶೇರ್ ಮಾಡಿ

Baby--01
ಕೋಲಾರ, ಸೆ.7- ಮಕ್ಕಳಿಲ್ಲವೆಂದು ಎಷ್ಟೋ ಮಹಿಳೆಯರು ಹರಕೆ ಹೊರುತ್ತಾರೆ. ಆದರೆ ನಗರಲ್ಲೊಬ್ಬಳು ನಿರ್ಧಯಿ ತಾಯಿ ತಾನು ಹೆತ್ತ ಮಗುವನ್ನು ಬ್ಯಾಗ್‍ನಲ್ಲಿಟ್ಟು ನಿಷ್ಕರುಣೆಯಿಂದ ಪರಾರಿಯಾಗಿದ್ದು , ಹಸಿವಿನಿಂದ ಅಳುತ್ತಿದ್ದುದು ಎಂತವರ ಮನವನ್ನು ಕರಗಿಸುವಂತಿತ್ತು. ಬೆಳಗ್ಗೆ ಸುಮಾರು 11 ಗಂಟೆಯಲ್ಲಿ ನಗರದ ಎಚ್‍ಎನ್‍ಆರ್ ಸರ್ಕಾರಿ ಆಸ್ಪತ್ರೆ ಗೇಟ್ ಮುಂದೆ ಹಸುಳೆಯ ಆಕ್ರಂದನ ಮುಗಿಲು ಮುಟ್ಟಿತ್ತು. ತಕ್ಷಣ ಸ್ಥಳೀಯರು ಧಾವಿಸಿ ನೋಡಿದಾಗ ಬ್ಯಾಗೊಂದರಲ್ಲಿ ಕೈ ಕಾಲು ಆಡಿಸುತ್ತಾ ಮುದ್ದಾದ ಗಂಡು ಮಗು ಹಸಿವಿನಿಂದ ಅಳುತ್ತಿದ್ದುದು ಕಂಡು ಬಂದಿತು.

ತಕ್ಷಣ ಆಸ್ಪತ್ರೆ ಸಿಬ್ಬಂದಿಗೆ ತಿಳಿಸಲಾಗಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾರಾಯಣಸ್ವಾಮಿ ಹಾಗೂ ನರ್ಸ್‍ಗಳು ಧಾವಿಸಿ ಮಗುವನ್ನು ಎತ್ತಿಕೊಂಡು ಅಸಮಾಧಾನಪಡಿಸಿ ಆರೈಕೆ ಮಾಡಿದ್ದಾರೆ. ಸ್ಥಳೀಯರು ತಲೆಗೊಂದು ಮಾತನಾಡುತ್ತಿದ್ದು , ಅನೈತಿಕ ಸಂಬಂಧದಲ್ಲಿ ಮಗು ಜನಿಸಿರಬಹುದು. ಅದಕ್ಕಾಗಿ ತಾನು ಹೆತ್ತ ಕಂದನನ್ನು ತಾಯಿ ಬಿಟ್ಟು ಹೋಗಿರಬಹುದು ಎಂದು ಹೇಳುತ್ತಿದ್ದಾರೆ. ಏನಾದರೂ ಕಾಯಿಲೆ ಇದ್ದು ಮಗುವನ್ನು ಸಾಕಲಾಗದೆ ಯಾರೋ ಆಸ್ಪತ್ರೆ ಬಳಿ ಇಟ್ಟು ಹೋಗಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಒಟ್ಟಾರೆ ಯಾವ ತಾಯಿ ಹೆತ್ತ ಮಗುವೋ? ಆಗ ತಾನೆ ಹುಟ್ಟಿದ ಮದ್ದಾದ ಗಂಡು ಮಗು ಸದ್ಯ ಬೀದಿ ನಾಯಿಗಳ ಪಾಲಾಗದಂತೆ ರಕ್ಷಿಸಲಾಗಿದ್ದು , ಜಿಲ್ಲಾ ಸರ್ಜನ್ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Facebook Comments

Sri Raghav

Admin