ಸೋಂಕಿತರ ಸಂಖ್ಯೆ 6 ಲಕ್ಷ ದಾಟಿದ ಬಳಿಕ, ಸ್ಟ್ರಿಕ್ಟ್ ರೂಲ್ಸ್ ತಂದ ಯಡಿಯೂರಪ್ಪ ಸರ್ಕಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.1-ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಆಗಿದೆ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ 6 ಲಕ್ಷ ದಾಟಿದೆ. ಸಾವಿನ ಸಂಖ್ಯೆ 8 ಸಾವಿರಕ್ಕೆ ಏರಿದೆ. ಈಗ ಸರ್ಕಾರ ಮಾಸ್ಕ್ ಕಡ್ಡಾಯ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಸಲು ಮುಂದಾಗಿದೆ.

ಆರ್ಥಿಕ ಚಟುವಟಿಕೆಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಲಾಕ್‍ಡೌನ್ ಕ್ರಮಗಳನ್ನು ಒಂದೊಂದೆ ಸಡಿಲಗೊಳಿಸುತ್ತಾ ಬಂದಂತೆ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಬಂದವು. ಜನರು ಕೊರೊನಾ ಭಯದಿಂದ ದೂರವಾಗಿ ತಮ್ಮ ಹಿಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರಾದರೂ ಕೊರೊನಾ ಸೋಂಕು ಮಾತ್ರ ದೂರವಾಗಲಿಲ್ಲ.

ಕೊರೊನಾ ಸೋಂಕು ನಿಯಂತ್ರಣಕ್ಕೆ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಾ ಬಂದರೂ ಜಾಗೃತಿ ಮೂಡಿಸಬೇಕಾದ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಕೂಡ ನಿರ್ಲಕ್ಷ್ಯ ವಹಿಸುತ್ತಲೇ ಬಂದ ಪರಿಣಾಮ ಪ್ರತಿದಿನ ರಾಜಧಾನಿ ಸೇರಿದಂತೆ ರಾಜ್ಯದಲ್ಲಿ ಸರಿಸುಮಾರು 10 ಸಾವಿರ ಕೊರೊನಾ ಸೋಂಕಿನ ಪ್ರಕರಣಗಳು ಕಂಡುಬರತೊಡಗಿದವು.

ಕೊರೊನಾ ಸೋಂಕು ನಿಯಂತ್ರಣಕ್ಕೆ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸ್ಯಾನಿಟೈಸರ್ ಬಳಸಬೇಕು ಎಂದು ಎಷ್ಟೇ ಪ್ರಚಾರ ಮಾಡಿದರೂ ಜನ ಎಚ್ಚೆತ್ತುಕೊಳ್ಳದ ಪರಿಣಾಮ ಸೋಂಕಿನ ಸಂಖ್ಯೆ ಇಂದಿಗೆ 6 ಲಕ್ಷಕ್ಕೇರಿದೆ. ಸಾವಿನ ಸಂಖ್ಯೆ 10 ಸಾವಿರ ಸಮೀಪ ಬಂದಿದೆ.

ಜನಪ್ರತಿನಿಗಳು, ಜನರು ಕೂಡ ಸಾಯಲಾರಂಭಿಸಿದ ಪರಿಣಾಮ ಎಚ್ಚೆತ್ತುಕೊಂಡಿರುವ ಸರ್ಕಾರ ಈಗ ಮಾಸ್ಕ್‍ನ್ನು ಕಡ್ಡಾಯ ಮಾಡಿದೆ. ಮಾಸ್ಕ್ ಧರಿಸದವರಿಗೆ ಒಂದು ಸಾವಿರ ರೂ. ದಂಡ ವಿಸಲು ಮುಂದಾಗಿದೆ.
ಅದೇ ರೀತಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.

ಅಂಗಡಿ ಮುಂಗಟ್ಟುಗಳ ಮುಂದೆ ಕ್ಯೂ ನಿಲ್ಲುವಾಗ 6 ಅಡಿ ಅಂತರವಿರಬೇಕು ಎಂಬ ನಿಯಮವನ್ನು ಮರುಜಾರಿ ಮಾಡುತ್ತಿದೆ. ಹಿಂದೆಯೇ ಈ ನಿಯಮಗಳು ಇದ್ದವು. ಈ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡುತ್ತಾ ಬಂದಿದ್ದರಿಂದ ಕೊರೊನಾ ನಿಯಂತ್ರಣದಲ್ಲಿತ್ತು. ಆದರೆ ನಿರ್ಲಕ್ಷ್ಯ ಮಾಡಿ ನಿಯಮಗಳನ್ನು ಸಡಿಲಗೊಳಿಸಿ ಸಭೆ, ಸಮಾರಂಭ, ಹಬ್ಬ, ಜಾತ್ರೆ, ಪ್ರತಿಭಟನೆ, ಧರಣಿ, ವಿವಾಹ, ಶವಸಂಸ್ಕಾರ ಮುಂತಾದವುಗಳಿಗೆ ಅವಕಾಶ ನೀಡಿದ ಪರಿಣಾಮ ಕೊರೊನಾ ಸೋಂಕು ಪ್ರಕರಣಗಳು ಹಾಗೂ ಸಾವಿನ ಪ್ರಕರಣಗಳು ಹೆಚ್ಚಾದವು.

ಕೋವಿಡ್-19 ನಿಯಮಗಳ ಪಾಲನೆಯಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಯಿತು. ಸೋಂಕಿತರ ಆರೈಕೆ, ಸೋಂಕಿತರ ಸಂಪರ್ಕಿತರನ್ನು ಗುರುತಿಸುವುದು, ತಪಾಸಣೆ ನಡೆಸುವುದು ಎಲ್ಲಾ ನಿಯಮಗಳನ್ನು ಸಡಿಲಗೊಳಿಸುತ್ತಾ ಬಂದ ಪರಿಣಾಮ ದಿನೇ ದಿನೇ ಸೋಂಕು ಹೆಚ್ಚಾಗುತ್ತಲೇ ಬಂತು.

ಈಗ ಎಚ್ಚೆತ್ತ ಆರೋಗ್ಯ ಇಲಾಖೆ ಎಲ್ಲರಿಗೂ ಸೀಲ್‍ಡೌನ್ ನಿಯಮಗಳನ್ನು ಬಿಗಿಗೊಳಿಸಲು ಮುಂದಾಗಿದೆ. ತಪಾಸಣೆಗಳನ್ನು ಹೆಚ್ಚು ಮಾಡಲು ಕ್ರಮ ವಹಿಸಿದೆ. ಅದೇ ರೀತಿ ಜನರು ಮಾಸ್ಕ್ ಧರಿಸಿರುವುದನ್ನು ಕಡ್ಡಾಯಗೊಳಿಸಿದೆ. ಹೆಚ್ಚು ಜನ ಸೇರುವ ಮಾರುಕಟ್ಟೆ ಪ್ರದೇಶ, ಬಸ್ ನಿಲ್ದಾಣ, ಎಪಿಎಂಸಿ ಸ್ಥಳಗಳಲ್ಲಿ ತೀವ್ರ ನಿಗಾವಹಿಸಿದೆ.

ಮಾಸ್ಕ್ ಧರಿಸದಿರುವವರ ಮೇಲೆ ನಿಗಾವಹಿಸಲು ಮಾರ್ಷಲ್‍ಗಳನ್ನು ನೇಮಿಸಿದ್ದು, ಮಾಸ್ಕ್ ಧರಿಸದೇ ಓಡಾಡುವವರ ಗಮನಿಸಿ ಅವರು ದಂಡ ವಿಸಲಿದ್ದಾರೆ. ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗೆ ಇಳಿದಿರುವ ಮಾರ್ಷಲ್‍ಗಳು ಮಾಸ್ಕ್ ಧರಿಸದವರಿಗೆ ದಂಡ ವಿಸುತ್ತಿದ್ದಾರೆ. ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರೆ ಕೊರೊನಾ ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗುತ್ತಿತ್ತು.

Facebook Comments

Sri Raghav

Admin