ಎಲ್ಲಿ ಎಷ್ಟು ಜನ ಸೇರಬೇಕು ಎಂಬುದಕ್ಕೆ ಸರ್ಕಾರದಿಂದ ಹೊರಬಿತ್ತು ಹೊಸ ಮಾರ್ಗಸೂಚಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ದಿನದಿಂದ ದಿನಕ್ಕೆ ಕೊರೊನಾ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾರಂಭ/ ಆಚರಣೆ/ ಮನರಂಜನೆ ಕಾರ್ಯಕ್ರಮಗಳಿಗೆ ಪರಿಷ್ಕೃತ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಿದೆ. ರಾಜ್ಯಾದ್ಯಂತ ಸಾರ್ವಜನಿಕ ಸಮಾರಂಭ, ಆಚರಣೆಗಳು, ಮನರಂಜನೆ ಕಾರ್ಯಕ್ರಮಗಳಿಗೆ ಜನರ ಒಗ್ಗೂಡುವಿಕೆಗೆ ಇನ್ನಷ್ಟು ಬಿಗಿ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ.

ಧಾರ್ಮಿಕ ಆಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಕರ್ನಾಟಕ ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಆದೇಶ ಪ್ರಕಟಿಸಿದ್ದಾರೆ. ಈ ಆದೇಶವನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ಹಾಗೂ ಐಪಿಸಿ ಸೆಕ್ಷನ್ ಮತ್ತು ಇತರ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ತೆರೆದ ಪ್ರದೇಶಗಳಲ್ಲಿ ನಡೆಯುವ ಮದುವೆ ಸಮಾರಂಭದಲ್ಲಿ 200 ಮಂದಿ ಮೀರದಂತೆ ಹಾಗೂ ಕಲ್ಯಾಣ ಮಂಟಪ, ಹಾಲ್​ಗಳಲ್ಲಿ 100 ಜನ ಮೀರದಂತೆ ಜನ ಸೇರಬೇಕು ಎಂದು ಆದೇಶ ಹೊರಡಿಸಲಾಗಿದೆ.

# ಯಾವುದಕ್ಕೆ ಎಷ್ಟು ಜನ?
* ಮದುವೆ:
ತೆರೆದ ಪ್ರದೇಶದಲ್ಲಿ ಗರಿಷ್ಠ 200 ಮಂದಿಗೆ ಅನುಮತಿ. ಕಲ್ಯಾಣ ಮಂಟಪ/ ಸಭಾಂಗಣ/ ಹಾಲ್ ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ ಗರಿಷ್ಟ 100 ಮಂದಿಗೆ ಮಾತ್ರ ಅವಕಾಶ.

* ಜನ್ಮದಿನ ಇತರೇ ಆಚರಣೆ
ತೆರೆದ ಪ್ರದೇಶದಲ್ಲಿ 50 ಮಂದಿಗೆ ಅನುಮತಿ. ಸಭಾಂಗಣ, ಹಾಲ್, ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ 25 ಮಂದಿಗೆ ಅನುಮತಿ.
ಜನ್ಮದಿನ ಹಾಗೂ ಇತರೆ ಆಚರಣೆಗಳು
ತೆರೆದ ಪ್ರದೇಶಗಳಲ್ಲಿ ಗರಿಷ್ಠ 50 ಮಂದಿ
ಸಭಾಂಗಣ, ಹಾಲ್‌ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳು ಗರಿಷ್ಠ 25 ಮಂದಿ

* ನಿಧನ/ ಶವಸಂಸ್ಕಾರ:
ತೆರೆದ ಪ್ರದೇಶದಲ್ಲಿ 50 ಮಂದಿ, ಸಭಾಂಗಣ, ಹಾಲ್, ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ 25 ಮಂದಿಗೆ ಅವಕಾಶ.

ಅಂತ್ಯ ಕ್ರಿಯೆಯಲ್ಲಿ 25 ಮಂದಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಇತರೇ ಸಮಾರಂಭಗಳಿಗೆ 50 ಮಂದಿ ಮಾತ್ರ ಅವಕಾಶ ನೀಡಲಾಗಿದೆ. ರಾಜಕೀಯ ಸಮಾರಂಭಗಳಿಗೆ ತೆರೆದ ಪ್ರದೇಶದಲ್ಲಿ 200 ಮಂದಿಗೆ ಮಾತ್ರ ಅನುಮತಿ ನೀಡಲಾಗಿದೆ.

Facebook Comments

Sri Raghav

Admin