ಮುಂಬರುವ ವಿಧಾನಸಭೆ ಮತ್ತು ಉಪಚುನಾವಣೆಗೆ ಆಯೋಗದಿಂದ ಮಾರ್ಗಸೂಚಿ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ಮುಂಬರುವ ಬಿಹಾರ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಹಲವೆಡೆ ನಡೆಯಲಿರುವ ವಿಧಾನಸಭೆ ಮತ್ತು ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ನೂತನ ಮಾರ್ಗಸೂಚಿಯನ್ನು ಹೊರಡಿಸಿದೆ. ವಿವಿಧ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಅಭಿಪ್ರಾಯ ಸಂಗ್ರಹಿಸಿ ಈ ಮಾರ್ಗಸೂಚಿಗಳನ್ನ ರೂಪಿಸಲಾಗಿದೆ.

ಶುಕ್ರವಾರ ಸಂಜೆ ಹೊರಡಿಸಿರುವ ಹೊಸ ಮಾರ್ಗಸೂಚಿ ಪ್ರಕಾರ,ಬಿಹಾರದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಇಂದು ಸಭೆ ನಡೆಸಿ ನಿರ್ಧಾರ ತೆಗೆದುಕೊಂಡಿದೆ.
ಹೊಸ ಮಾರ್ಗಸೂಚಿಯಲ್ಲಿ ಅಂಚೆ ಮತಗಳ ಸೌಲಭ್ಯವನ್ನು ಹೆಚ್ಚಿನ ಮಂದಿಗೆ ವಿಸ್ತರಿಸಲಾಗಿದೆ.

ಚುನಾವಣಾ ಕರ್ತವ್ಯ ನಿಭಾಯಿಸುವ ಸಿಬ್ಬಂದಿಗೆ ಈ ಮುಂಚೆ ಪೋಸ್ಟಲ್ ಬ್ಯಾಲಟ್ ಸೌಲಭ್ಯ ಇರುತ್ತಿತ್ತು. ಈಗ ವಿಶೇಷ ಚೇತನದ ವ್ಯಕ್ತಿಗಳು, ಕೋವಿಡ್ ರೋಗಿಗಳು, 80 ವರ್ಷ ಮೇಲ್ಪಟ್ಟ ವೃದ್ಧರು, ಅಗತ್ಯ ಸೇವೆಯಲ್ಲಿರುವವರು ಇವರಿಗೆ ಅಂಚೆ ಮತ ಸೌಲಭ್ಯ ವಿಸ್ತರಿಸಲಾಗಿದೆ.

ಈ ಪ್ರಕಾರ ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಆನ್ ಲೈನ್ ಮೂಲಕ ಸಲ್ಲಿಸಬೇಕು.ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದು, ಪ್ರತಿಯೊಬ್ಬ ಮತದಾರರು ಕಡ್ಡಯವಾಗಿ ಕೈ ಗವಸು ( ಹ್ಯಾಂಡ್ ಗ್ಲೈಸ್) ಧರಿಸಿಯೇ ಮತಯಂತ್ರದ ಬಟನ್ ಒತ್ತಬೇಕು.

ಕೊರೊನಾ ಸೋಂಕು ಕಾಣಿಸಿಕೊಂಡು ಹೋಂ ಕ್ವಾರೈಂಟೆನ್ ಗೆ ಒಳಾಗಾಗಿರುವವರು ಮತದಾನದ ಅವಧಿ ಮುಗಿಯುವ ಒಂದು ಗಂಟೆ ಮುಂಚೆ ತಮ್ಮ ಹಕ್ಕು ಚಲಾಯಿಸಬಹುದು.

80 ವರ್ಷ ದಾಟಿದ ಹಿರಿಯರು ಮತಗಟ್ಟೆ ಬಳಿ ಬರಲು ಸಾಧ್ಯವಾಗದಿದ್ದರೆ, ಅಂತಹವರಿಗೆ ಪೋಸ್ಟ್‍ಲ್ ( ಅಂಚೆಯ ಮೂಲಕ) ಮತದಾನ ಮಾಡಲು ಆಯೋಗ ಅವಕಾಶ ನೀಡಿದೆ. ಅಲ್ಲದೆ, ಮತಗಟ್ಟೆ ಬಳಿ ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಾದಷ್ಟು ದೊಡ್ಡ ದೊಡ್ಡ ಮತಕೇಂದ್ರಗಳನ್ನೇ ಗುರುತಿಸಬೇಕು ಎಂದು ಸೂಚಿಸಿದೆ.

ಪ್ರತಿಮತಗಟ್ಟೆ ಬಳಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರಾನಿಂಗ್ ನಡೆಸಿಯೇ ಮತದಾರರನ್ನು ಕೇಂದ್ರದ ಒಳಗೆ ಬಿಡಬೇಕು. ಚುನಾವಣೆಗೆ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ಕಡ್ಡಯವಾಗಿ ಮುಖಕ್ಕೆ ಮಾಸ್ಕ್( ಮುಖಗವಸು) ಧರಿಸಿದ ಭಾವಚಿತ್ರದೊಂದಿದೆ ಆನ್ ಲೈನ್ ನಲ್ಲಿ ಬಿ ಫಾರಂ ಸಲ್ಲಿಸಬೇಲು.

ಜೊತೆಗೆ ಪ್ರಚಾರದ ವೇಳೆ ಅಭ್ಯರ್ಥಿಗಳು ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೇ ಮಾಡಬೇಕು. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘನೆ ಮಾಡಿದರೆ, ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದೆ.

ಹಾಗೆಯೇ, ಅಭ್ಯರ್ಥಿಗಳು ಆನ್ಲೈನ್ನಲ್ಲೇ ಸೆಕ್ಯೂರಿಟಿ ಹಣವನ್ನು ಒದಗಿಸುವ ಅವಕಾಶ ನೀಡಲಾಗಿದೆ. ನಾಮಪತ್ರ ಸಲ್ಲಿಕೆಯ ವೇಳೆ ಅಭ್ಯರ್ಥಿ ಜೊತೆ ಬರಬಹುದಾದ ಜನರ ಸಂಖ್ಯೆಯನ್ನು ಸೀಮಿತಗೊಳಿಸಲಅಗಿದೆ. ಮನೆ ಮನೆ ಪ್ರಚಾರದಲ್ಲಿ ಅಭ್ಯರ್ಥಿ ಸೇರಿ 5ಕ್ಕಿಂತ ಹೆಚ್ಚು ಮಂದಿ ಓಡಾಡುವಂತಿಲ್ಲ.

ಸಾರ್ವಜನಿಕ ಸಭೆ ಮತ್ತು ರೋಡ್ ಶೋಗಳಲ್ಲಿ ಸರ್ಕಾರ ವಿಧಿಸಿದ ನಿಯಮಗಳನ್ನ ಪಾಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಚುನಾವಣಾ ಪ್ರಕ್ರಿಯೆಯ ವೇಳೆ ಮಾಸ್ಕ್, ಸ್ಯಾನಿಟೈಸರ್, ಕೈಗವಸು, ಪಿಪಿಇ ಕಿಟ್ಗಳನ್ನ ಬಳಕೆ ಮಾಡಲಾಗುತ್ತದೆ. ಎಲ್ಲಾ ಮತದಾರರಿಗೂ ವೋಟರ್ ರಿಜಿಸ್ಟರ್ನಲ್ಲಿ ಸಹಿ ಮಾಡಲು ಮತ್ತು ವೋಟಿಂಗ್ ಮೆಷಿನ್ನಲ್ಲಿ ಬಟನ್ ಒತ್ತಲು ಕೈಗಳಿಗೆ ಗ್ಲೌಸ್ ನೀಡಲಾಗುತ್ತದೆ.

ಅಭ್ಯರ್ಥಿಗಳ ಪರ ಪ್ರಚಾರ ನಡೆಸುವವರು ದೊಡ್ಡ ದೊಡ್ಡ ರ್ಯಾಲಿ ನಡೆಸುವ ಬದಲು ವಚ್ರ್ಯುಯಲ್ ರ್ಯಾಲಿ ನಡೆಸಲು ಹೆಚ್ಚಿನ ಆದ್ಯತೆ ನೀಡಬೇಕು. ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹಬ್ಬುವುದನ್ನು ತಡೆಗಟ್ಟುವ ಹೊಣೆಗಾರಿಕೆಯನ್ನು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ತಿಳಿದುಕೊಳ್ಳಬೇಕೆಂದು ಆಯೋಗ ಸಲಹೆ ಮಾಡಿದೆ.

ಮತದಾನ ಕೇಂದ್ರಗಳನ್ನು ಮತದಾನದ ಮುನ್ನಾ ದಿನ ಕಡ್ಡಾಯವಾಗಿ ಸೋಂಕುನಿವಾರಕಗಳನ್ನು ಬಳಸಿ ಸ್ವಚ್ಛಗೊಳಿಸಬೇಕು,ಒಂದು ಮತಗಟ್ಟೆಯಲ್ಲಿ 1,500 ಮತದಾರರ ಬದಲಾಗಿ ಗರಿಷ್ಠ 1,000 ಮತದಾರರಿಗೆ ಅವಕಾಶ,ಮನೆ ಮನೆ ಪ್ರಚಾರಕ್ಕೆ ಭದ್ರತಾ ಸಿಬ್ಬಂದಿ ಹೊರತುಪಡಿಸಿ ಅಭ್ಯರ್ಥಿ ಸೇರಿದಂತೆ ಗರಿಷ್ಠ 5 ಜನರಿಗಷ್ಟೇ ಅವಕಾಶ ರೋಡ್‍ಶೋ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ವಾಹನ ಹೊರತುಪಡಿಸಿ ಒಟ್ಟಾಗಿ ಕೇವಲ ಐದು ವಾಹನಗಳು ಸಂಚರಿಸಲಷ್ಟೇ ಅವಕಾಶ ನೀಡಲಾಗಿದೆ.

ಕೋವಿಡ್-19 ಮಾರ್ಗಸೂಚಿಗಳನ್ನು(ಪರಸ್ಪರ ಆರು ಅಡಿ ಅಂತರ, ಮುಖಗವಸು ಕಡ್ಡಾಯ ಮುಂತಾದವುಗಳು) ಅನುಸರಿಸಿ ಸಾರ್ವಜನಿಕ ಸಭೆ, ರ್ಯಾಲಿ ಆಯೋಜಿಸಬಹುದು. ಸಾರ್ವಜನಿಕ ಸಭೆಗಳಿಗೆ ಮೈದಾನಗಳನ್ನು ಜಿಲ್ಲಾ ಚುನಾವಣಾಧಿಕಾರಿ ಮೊದಲೇ ಗುರುತಿಸಬೇಕು.

ಇವುಗಳಿಗೆ ಸೂಕ್ತವಾದ ಪ್ರವೇಶ ಹಾಗೂ ನಿರ್ಗಮನ ವ್ಯವಸ್ಥೆ ಇರಬೇಕು.ನಿಗದಿಪಡಿಸಿದ ಮೈದಾನಗಳಲ್ಲಿ ಆಯೋಜಿಸುವ ಸಭೆಯಲ್ಲಿ ಭಾಗವಹಿಸುವ ಜನರು ಪರಸ್ಪರ ಅಂತರ ಕಾಯ್ದುಕೊಂಡು ಕುಳಿತುಕೊಳ್ಳುವಂತೆ ಮೊದಲೇ ಗುರುತು ಹಾಕುವ ಹೊಣೆ ಜಿಲ್ಲಾ ಚುನಾವಣಾಧಿಕಾರಿಗೆ ನೀಡಲಾಗಿದೆ.

ಸಾರ್ವಜನಿಕ ಸಭೆಗಳಿಗೆ ಆಯಾ ರಾಜ್ಯಗಳ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸೂಚಿಸಿದ ಸಂಖ್ಯೆಗಿಂತ ಅಧಿಕ ಸಂಖ್ಯೆಯ ಜನರು ಭಾಗವಹಿಸದಂತೆ ನಿರ್ವಹಿಸುವ ಹೊಣೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಎಸ್‍ಪಿಗೆ ಕೊಡಲಾಗಿದೆ.

ಬಿಹಾರ ವಿಧಾನಸಭಾ ಚುನಾವಣೆ ಯಾವಾಗ ನಡೆಯಲಿದೆ ಎಂಬ ಗುಟ್ಟನ್ನು ಆಯೋಗ ಬಿಟ್ಟುಕೊಟ್ಟಿಲ್ಲ. ಮೂಲಗಳ ಪ್ರಕಾರ ಸೆಪ್ಟಂಬರ್ 20 ರಂದು ಆಯೋಗ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

# ಚುನಾವಣೆ ಮುಂದೂಡಲು ಆಗ್ರಹ  : 
ದೇಶದೆಲ್ಲೆಡೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಬಿಹಾರ ವಿಧಾನಸಭಾ ಚುನಾವಣೆಯನ್ನು ಮುಂದೂಡಬೇಕು ಎಂದು ಮಾಜಿ ಕೇಂದ್ರ ಸಚಿವ ಯಶವಂತಾ ಸಿನ್ಹಾ ಆಗ್ರಹಿಸಿದ್ದಾರೆ.

ಕೊರೋನಾದಿಂದಾಗಿ ರಾಜಕೀಯ ಚಟುವಟಿಕೆಗಳು ಸ್ಥಗಿತಗೊಂಡಿವೆ. ಆದರೆ, ಚುನಾವಣೆಯನ್ನು ಮುಂದೂಡಲು ಯಾವುದೇ ಕ್ರಮವನ್ನು ಕೈಗೊಂಡಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೇ ಕೊರೋನಾ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಈ ಅವಧಿಯಲ್ಲಿ ಚುನಾವಣೆ ನಡೆಸಿದರೆ ಮತಗಟ್ಟೆಗಳು ಕೊರೋನಾ ಕೇಂದ್ರಗಳಾಗಿ ಬದಲಾಗಬಹುದು, ಆಗ ಕೊರೋನಾ ಎಷ್ಟು ಪ್ರಮಾಣದಲ್ಲಿ ಹರಡಿದೆ ಎಂಬುದನ್ನು ಅಂದಾಜಿಸುವುದು ಬಹಳ ಕಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಬಿಹಾರ ಸರ್ಕಾರವು ಚುನಾವಣಾ ಆಯೋಗದ ಮುಂದೆ ಕೊರೋನಾ ಪ್ರಕರಣಗಳು ಕಡಿಮೆಯಿದೆ ಎಂದು ತೋರಿಸಲು ನಿಜವಾದ ಅಂಕಿಅಂಶಗಳನ್ನು ಮರೆಮಾಚುತ್ತಿವೆ ಎಂದು ಆರೋಪಿಸಿರುವ ಸಿನ್ಹಾ, ಒಂದು ವೇಳೆ ನವೆಂಬರ್ ಅಂತ್ಯದ ಬಳಿಕ ಚುನಾವಣೆ ನಡೆದರೆ ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಬರಬಹುದು.

ಆಗ ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾಗಬಹುದು ಎಂಬ ಭಯದಿಂದ ನಿತಿಶ್ ಕುಮಾರ್ ಚುನಾವಣೆ ಮುಂದೂಡಲು ಮನಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

Facebook Comments

Sri Raghav

Admin