ಆಸುಸ್ ಜೆನ್‍ಬುಕ್ ಸರಣಿಯ ಹೊಸ ಲ್ಯಾಪ್ಟಾಪ್ ಗಳು ಮಾತುಕಟ್ಟೆಗೆ, ವಿಶೇಷತೆಗಳೇನು ಗೊತ್ತೇ..

ಈ ಸುದ್ದಿಯನ್ನು ಶೇರ್ ಮಾಡಿ

laptopಎಲೆಕ್ಟ್ರಾನಿಕ್ ವಸ್ತುಗಳ ಉತ್ಪನ್ನ ಕಂಪನಿಯಾದ ಆಸುಸ್ ಇತ್ತೀಚೆಗೆ ಬೇಡಿಕೆವುಳ್ಳ ಜೆನ್‍ಬುಕ್ ಸರಣಿಯ ಮುಂದುವರೆದ ಭಾಗವಾಗಿ ಜೆನ್ ಬುಕ್ 15 (ಯುಎಕ್ಸ್ 533), ಜೆನ್ ಬುಕ್ 14 (ಯುಎಕ್ಸ್ 433) ಹಾಗೂ ಜೆನ್ ಬುಕ್ 13 (ಯುಎಕ್ಸ್ 333) ಲ್ಯಾಪ್ ಟಾಪ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ವಿಸ್ಮಯಕಾರಿ, ಸ್ಪೂರ್ತಿದಾಯಕ ಹಾಗೂ ಮನಮೋಹಕವಾಗಿ ಈ ಲ್ಯಾಪ್‍ಟಾಪ್‍ಗಳನ್ನು ವಿನ್ಯಾಸಗೊಳಿಸಿದ್ದು, ಅತ್ಯುತ್ಯಮವಾಗಿ ಕಾರ್ಯನಿರ್ವಹಿಸುತ್ತವೆ. ತೆಳು, ಹಗುರ ಹಾಗೂ ಸುಂದರ ವಿನ್ಯಾಸಕ್ಕಾಗಿ ವಿಶ್ವದಾದ್ಯಂತ ಪ್ರಸಿದ್ಧಿಗೊಂಡಿರುವ ಅತ್ಯಾಧುನಿಕ ತಂತ್ರಜ್ಞಾನ  ಒಳಗೊಂಡ ಜೆನ್‍ಬುಕ್ ಲ್ಯಾಪ್‍ಟಾಪ್‍ಗಳ ಸರಣಿಯ ಅತ್ಯಾಧುನಿಕ ಲ್ಯಾಪ್‍ಟಾಪ್‍ಗಳು ಇವಾಗಿವೆ.

ಇತ್ತೀಚೆಗೆ ನಗರದಲ್ಲಿ ಲ್ಯಾಪ್‍ಟಾಪ್‍ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಆಸುಸ್ ಕಂಪನಿಯ ಪಿಸಿ ಮತ್ತು ಗೇಮಿಂಗ್ ವಿಭಾಗದ ಮುಖ್ಯಸ್ಥೆ ಅರ್ನೊಲ್ಡ್‍ಸು, ಕಳೆದ ಮೂರು ದಶಕಗಳಿಂದ ಆಸುಸ್ ಕಂಪೆನಿಯು ಅರ್ಥಪೂರ್ಣ ಹಾಗೂ ಅನಿವಾರ್ಯದಂತಹ ಕಂಪ್ಯೂಟರಿಂಗ್ ಆವಿಷ್ಕಾರಗಳನ್ನು ಮಾರುಕಟ್ಟೆಗೆ ಪರಿಚಯಿಸುವತ್ತ ಹೆಚ್ಚು ಕೇಂದ್ರೀಕರಿಸಿದೆ.

ಪರಿಪೂರ್ಣ ಕಂಪ್ಯೂಟರಿಂಗ್ ಅನುಭವಕ್ಕಾಗಿ ಕಂಪ್ಯೂಟರಿಂಗ್ ನ ಸಣ್ಣ ಸಣ್ಣ ವಿಚಾರಗಳನ್ನೂ ಸೂಕ್ಷ್ಮವಾಗಿ ಗಮನಿಸಿ ಅವುಗಳಿಗೆ ವಿನೂತನ ಪರಿಹಾರ ಕಂಡುಹಿಡಿಯುತ್ತೇವೆ ಎಂದರು.

ಕಾರ್ಯಕ್ಷಮತೆ ಹಾಗೂ ಸಂಪೂರ್ಣ ಪೋರ್ಟಬಲಿಟಿ ಮೇಲೆ ಕೇಂದ್ರಿಕರಿಸಿ ರೂಪಿಸಿರುವ ವಿಶ್ವದ ಅತ್ಯಂದ ಚಿಕ್ಕ ಲ್ಯಾಪ್‍ಟಾಪ್ ಗಳನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ. ನಮ್ಮ ಗ್ರಾಹಕರು ಖಂಡಿತವಾಗಿಯೂ ಹೊಸ ಜೆನ್‍ಬುಕ್ ಲ್ಯಾಪ್ ಟಾಪ್‍ಗಳನ್ನು ಇಷ್ಟ ಪಡುತ್ತಾರೆ ಹಾಗೂ ಅವುಗಳ ಅತ್ಯಂತ ಕಡಿಮೆ ಬೆಲೆಯನ್ನು ಕಂಡು ಆಶ್ಚರ್ಯಚಕಿತರಾಗುತ್ತಾರೆ ಎಂದು ಅವರು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ