ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲಿಗೆ ಹೊಸ ಸ್ಪರ್ಶ, ವಿಶೇಷತೆ ಏನು ಗೊತ್ತೇ ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಹುಬ್ಬಳ್ಳಿ, ಜೂ.13-ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ಉದ್ಯಾನನಗರಿ ಬೆಂಗಳೂರು ನಡುವೆ ಸಂಚರಿಸುತ್ತಿರುವ ಜನಪ್ರಿಯ ರಾಣಿ ಚೆನ್ನಮ್ಮ ಎಕ್ಸ್‍ಪ್ರೆಸ್ ರೈಲಿಗೆ ಹೊಸ ಸ್ಪರ್ಶ ನೀಡಲಾಗುತ್ತಿದೆ.

ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಪಿಯೂಷ್ ಗೋಯೆಲ್ ತಮ್ಮ ಇಲಾಖೆಗೆ ಆಮೂಲಾಗ್ರ ಬದಲಾವಣೆ ಮತ್ತು ಸುಧಾರಣೆಗಾಗಿ ನೀಲನಕ್ಷೆಯೊಂದನ್ನು ಸಿದ್ಧ್ದಪಡಿಸಿದ್ದಾರೆ. ಇದರಲ್ಲಿ ರಾಣಿ ಚೆನ್ನಮ್ಮ ಎಕ್ಸ್‍ಪ್ರೆಸ್‍ಗೆ ಹೊಸ ಸ್ಪರ್ಶ ನೀಡುವುದೂ ಸೇರಿದೆ.

ಎಲ್‍ಇಡಿ ದ್ವೀಪಗಳು ಮತ್ತು ಫಿಟ್ಟಿಂಗ್‍ಗಳು, ಬ್ರೈಲ್ ಲಿಪಿ ಸಂದೇಶ ಮತ್ತು ಜೈವಿಕ ಶೌಚಾಲಯಗಳಂಥ ಹೊಸ ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ರಾಣಿ ಚೆನ್ನಮ್ಮ ಎಕ್ಸ್‍ಪ್ರೆಸ್ ರೈಲಿಗೆ ಸ್ವಚ್ಛತೆ ಮತ್ತು ಸೌಂದರ್ಯದ ಲೇಪ ನೀಡಲಾಗುತ್ತಿದೆ.

ಕಳೆದ ವರ್ಷ ಭಾರತೀಯ ರೈಲ್ವೆ ಉತ್ಕøಷ್ ಯೋಜನೆ ಜಾರಿಗೊಳಿಸಿದ್ದು, ಅದರ ಅಡಿ, ನೈರುತ್ಯ ರೇಲ್ವೆಯ 20 ರೈಲುಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಅಲ್ಲದೆ ಈ ಎಕ್ಸ್‍ಪ್ರೆಸ್ ರೈಲುಗಳ ಬೋಗಿಗಳ ಬಣ್ಣವನ್ನು ಬದಲಿಸುವ ಕಾರ್ಯ ಸಾಗಿದೆ.

ಹುಬ್ಬಳ್ಳಿ-ವಾರಣಾಸಿ-ಹುಬ್ಬಳ್ಳಿ ಎಕ್ಸ್‍ಪ್ರೆಸ್ ರೈಲಿಗೆ ಈಗಾಗಲೇ ಆಧುನಿಕ ಸ್ಪರ್ಶ ನೀಡಲಾಗಿದೆ. ಹುಬ್ಬಳ್ಳಿ ಮಾರ್ಗವಾಗಿ ಕೊಲ್ಹಾಪುರ ಮತ್ತು ಬೆಂಗಳೂರು ನಡುವೆ ಸಂಚರಿಸುವ ರಾಣಿ ಚೆನ್ನಮ್ಮ ಎಕ್ಸ್‍ಪ್ರೆಸ್ ಹೊಸ ರೂಪದೊಂದಿಗೆ ಕಂಗೊಳಿಸಲಿದೆ.

ಇದರೊಂದಿಗೆ ಹುಬ್ಬಳ್ಳಿಯ ಶತಮಾನದಷ್ಟು ಹಳೆಯದಾದ ಬೋಗಿ ದುರಸ್ತಿ ಕಾರ್ಯಾಗಾರವನ್ನು ಆಧುನೀಕರಣಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಪ್ರತಿ ರೈಲಿನ ಉನ್ನತೀಕರಣಕ್ಕಾಗಿ ತಲಾ 60 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ.

ಈ ರೈಲುಗಳು ಸ್ಮೂತ್ ಟಾಯ್ಲೆಟ್ ಫ್ಲಶ್, ಎಲ್‍ಇಡಿ ದ್ವೀಪ, ಆಕರ್ಷಕ ಪಿವಿಪಿ ಸ್ಟಿಕ್ಕರ್‍ಗಳು, ಬ್ರೈಲ್ ಲಿಪಿ ಸಂದೇಶ(ದೃಷ್ಟಿಚೇತನರಿಗೆ ನೆರವಾಗಲು), ಜೈವಿಕ ಶೌಚಾಲಯಗಳನ್ನು ಪ್ರತಿ ಕೋಚ್‍ಗೂ ಅಳವಡಿಸಲಾಗುತ್ತಿದೆ. ಈ ಬೋಗಿಗಳ ಬಣ್ಣವು ಹಳದಿ ಮತ್ತು ಗಾಢ ಕೆಂಪು ಬಣ್ಣಗಳೊಂದಿಗೆ ಅತ್ಯಾಕರ್ಷಕವಾಗಿ ಕಂಗೊಳಿಸಲಿದೆ.

ಹುಬ್ಬಳ್ಳಿ-ವಾರಣಾಸಿ-ಹುಬ್ಬಳ್ಳಿ ಎಕ್ಸ್‍ಪ್ರೆಸ್ ಮತ್ತು ರಾಣಿ ಚೆನ್ನಮ್ಮ ಎಕ್ಸ್‍ಪ್ರೆಸ್ ರೈಲುಗಳ ಸೌಂದರ್ಯಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ತಾಜ್‍ಮಹಲ್, ವಿಧಾನಸೌಧ, ಕೆಂಪು ಕೋಟೆಯಂಥ ಪ್ರಸಿದ್ದ ಸ್ಮಾರಕಗಳು ಮತ್ತು ದೇಶದ ಭವ್ಯ ಸಂಸ್ಕøತಿ, ಪರಂಪರೆಗಳನ್ನು ಬಿಂಬಿಸುವ ಸ್ಟಿಕ್ಕರ್‍ಗಳು ಪ್ರತಿ ಬೋಗಿಗಳ ಸೊಗಸನ್ನು ಮತ್ತಷ್ಟು ಹೆಚ್ಚಿಸಲಿವೆ.

Facebook Comments

Sri Raghav

Admin