“ನಾನು ಯಾವ ಸಾಮ್ರಾಟನೂ ಅಲ್ಲ, ಸಾಮಾನ್ಯ ಕಾರ್ಯಕರ್ತ”

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಆ.22-ನಾನು ಯಾವ ಸಾಮ್ರಾಟನೂ ಅಲ್ಲ, ನಾನೂ ಸಹ ಸಾಮಾನ್ಯ ಕಾರ್ಯಕರ್ತ ಎಂದು ನೂತನ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಜಿಲ್ಲೆಯ ಹುಣಸೂರು ತಾಲೂಕಿನ ವೀರನ ಹೊಸಹಳ್ಳಿಯಲ್ಲಿ ಗಜ ಪಯಣಕ್ಕೆ ಚಾಲನೆ ನೀಡಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ಯಾರಿಗೂ ಪ್ರತಿಸ್ಫರ್ಧಿಯಲ್ಲ. ಗಜರಾಜನಿಗೆ ಪೂಜೆ ಸಲ್ಲಿಸುವುದನ್ನು ತಪ್ಪಿಸಬಾರದೆಂದು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು. ನೆರೆಪೀಡಿತರಿಗೆ ಒಳಿತಿಗಾಗಿಯೇ ಪೂಜೆ ಸಲ್ಲಿಸುತ್ತಿದ್ದೇನೆ ಎಂದ ಅವರು, ಇದೇಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ದೈವೇಚ್ಛೆ ಏನು ಇದೆ ಎಂಬುದು ನನಗೆ ಗೊತ್ತಿಲ್ಲ.

ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಮೈಸೂರು ಉಸ್ತುವಾರಿ ಸಚಿವನಾಗುವ ಆಸೆಯಿಮದಾಗಿ ಇಲ್ಲಿಗೆ ಬಂದಿಲ್ಲ ಎಂದ ಅವರು, ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ ಎಂದರು.

ಅರ್ಜುನ ನೇತೃತ್ವದ ಆರು ಆನೆಗಳು ಮೈಸೂರಿನತ್ತ ಪ್ರಯಾಣ ಬೆಳೆಸಿದವು.ಮಾವುತರು ಮತ್ತು ಕಾವಾಡಿಗರಿಗೆ ತಾಂಬೂಲ ನೀಡಿ ದಸರೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಯಿತು.

Facebook Comments