ಮತ್ತೆ ಹೊಸ ರೇಷನ್ ಕಾರ್ಡ್ ನೀಡಲು ಸರ್ಕಾರ ಚಿಂತನೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಬಿಪಿಎಲ್ ವರ್ಗಕ್ಕೆ ಅನರ್ಹರೆಂದು ಲಕ್ಷಾಂತರ ಪಡಿತರ ಕಾರ್ಡ್‍ಗಳನ್ನು ರದ್ದುಗೊಳಿಸಿದ ನಂತರ ಮತ್ತೆ ಸರ್ಕಾರ ರೇಷನ್ ಕಾರ್ಡ್ ನೀಡಲು ಆರಂಭಿಸಿದೆ. ಸರ್ಕಾರಿ ಕೆಲಸ ಮತ್ತು ವಾರ್ಷಿಕವಾಗಿ 1.2 ಲಕ್ಷ ರು ಆದಾಯ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ ಎಂದು ಸರ್ಕಾರ ಹೇಳಿತ್ತು.

ಸರ್ಕಾರದ ಆದೇಶದಂತೆ, ನಗರಗಳಲ್ಲಿನ ಶೇ.50 ರಷ್ಟು ಜನರಿಗೆ ಬಿಪಿಎಲ್ ಪಡಿತರ ಚೀಟಿಗಳನ್ನು ನೀಡಬಹುದು. ಹೊಸ ಪಡಿತರ ಚೀಟಿಗಳನ್ನು ನೀಡುವುದನ್ನು ಒಂದು ವರ್ಷದ ಹಿಂದೆ ನಿಂತುಹೋಗಿತ್ತು. ಈಗ, ನಿಧಾನವಾಗಿ ಆದ್ಯತೆಯ ಮೇರೆಗೆ ಕೆಲವು ವಿಭಾಗಗಳಿಗೆ ಹೊಸ ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಇಲಾಖೆ ನಿಧಾನವಾಗಿ ಆರಂಭಿಸಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅರ್ಹ ಅಭ್ಯರ್ಥಿಗಳನ್ನು ಗುರುತಿಸ ಬೇಕು ಮತ್ತು ಅಂತವರ ಪಟ್ಟಿಯನ್ನು ನೀಡಬೇಕೆಂದು ಮಾಹಿತಿ ಕೇಳಲಾಗಿತ್ತು. ಬಡತನ ರೇಖೆಗಿಂತ ಕೆಳಗಿರುವವರು ಮತ್ತು ದಿನನಿತ್ಯದ ಕೂಲಿ ಕಾರ್ಮಿಕರು ಹೊಸ ಪಡಿತರ ಚೀಟಿ ಪಡೆಯಲು ಹಿಂಜರಿಯುತ್ತಿದ್ದಾರೆ ಎಂದು ಸೌಮ್ಯ ಹೇಳಿದ್ದಾರೆ. ಆದರೆ ಕೊರೋನಾ ಸಾಂಕ್ರಾಮಿಕದ ನಂತರ, ಆಹಾರ ಅಭದ್ರತೆಯು ಒಂದು ಪ್ರಮುಖ ಕಾಳಜಿಯಾಗಿದೆ ಎಂದು ಹೇಳಿದ್ದಾರೆ.

ಹಲವಾರು ಪಡಿತರ ಚೀಟಿ ರದ್ದು: ಈಗಾಗಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಇತ್ತೀಚಿನ ಮಲ್ಯಮಾಪನ ಕೆಲವು ಆಸಕ್ತಿದಾಯಕ ಡೇಟಾಗಳನ್ನು ಹೊರತಂದಿದೆ. ಪಡಿತರಚೀಟಿ ಹೊಂದಿರುವವರ ಪೈಕಿ ಕನಿಷ್ಠ 91,189 ಜನರು ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಸ್ತರಕ್ಕೆ ಸೇರಿದವರಲ್ಲ, ಆದರೆ ಸರ್ಕಾರದ ಸಬ್ಸಿಡಿಗಳನ್ನು ಬಳಸುತ್ತಿದ್ದಾರೆ. ಇಲಾಖೆ ಅಂತಹ ಪ್ರಕರಣಗಳನ್ನು ಗುರುತಿಸಿ ಅವರ ಪಡಿತರ ಚೀಟಿಗಳನ್ನು (ಆರ್‍ಸಿ) ರದ್ದುಗೊಳಿಸಿದೆ.

ಸಬ್ಸಿಡಿ ಪಡಿತರವನ್ನು ಪಡೆಯುತ್ತಿರುವ ಅಂತಹ ಅನೇಕ ವ್ಯಕ್ತಿಗಳು ಮೂರು ಹೆಕ್ಟೇರ್ ಭೂಮಿಯನ್ನು ಹೊಂದಿದ್ದಾರೆ ಅಥವಾ ವಾರ್ಷಿಕ ಆದಾಯವು 1.28 ಲಕ್ಷ ರೂ. ಇದೆ. ಪಡಿತರ ಚೀಟಿ ಹೊಂದಿರುವ ಕೆಲವರು ಮೃತರಾಗಿ ದ್ದಾರೆ. ಇತರರು ರಾಜಕೀಯ ಸಂಪರ್ಕ ಗಳನ್ನು ಹೊಂದಿದ್ದಾರೆ ಅಥವಾ ಉತ್ತಮ ವೃತ್ತಿಯಲ್ಲಿದ್ದರೂ ಬಿಪಿಎಲ್ ಕಾರ್ಡು ಗಳನ್ನು ಹೊಂದಿದ್ದಾರೆ ಮತ್ತು ಮಾಸಿಕ ಸಬ್ಸಿಡಿ ಪಡಿತರವನ್ನು ಪಡೆಯುತ್ತಾರೆ.

ಇತ್ತೀಚಿನ ವರದಿಯ ಪ್ರಕಾರ, ಅವರ ಆದಾಯ ತೆರಿಗೆ ವಿವರಗಳ ಆಧಾರದ ಮೇಲೆ ಒಟ್ಟು 91,189 ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ.
50,060 ಜನರು ಆಂತ್ಯೋದಯ ಅನ್ನ ಯೋಜನೆ (ಎಎವೈ), ಪ್ರಾಥಮಿಕ ನಿವಾಸಿ (ಪಿಎಚ್‍ಹೆಚ್) ಕಾರ್ಡ್‍ಗಳನ್ನು ಹೊಂದಿದ್ದಾರೆ, 1.20 ಲಕ್ಷ ರೂ.ಗಿಂತ ಹೆಚ್ಚಿನ ಕೌಟುಂಬಿಕ ಆದಾಯ ಹೊಂದಿ 85,204 ಆದಾಯ ತೆರಿಗೆ ಪಾವತಿದಾರರು ಮತ್ತು 2,18,125 ಜನರು ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್‍ಗಿಂತ ಹೆಚ್ಚು ಭೂಮಿಯನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಆದಾಯ ತೆರಿಗೆ ಸಲ್ಲಿಕೆಯ ಆಧಾರದ ಮೇಲೆ ಒಟ್ಟು 79,069 ಎಎವೈ ಪಡಿತರ ಚೀಟಿಗಳು ಮತ್ತು ಪಿಎಚ್‍ಹೆಚ್ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದ್ದು, ಇಲಾಖೆಗೆ ತಿಂಗಳಿಗೆ 5.01 ಕೋಟಿ ರೂ., ಮತ್ತು ವಾರ್ಷಿಕವಾಗಿ 60.20 ಕೋಟಿ ರೂ ಉಳಿತಾಯಕ್ಕೆ ಕಾರಣವಾಗಿದೆ ಎಂದು ಅಕಾರಿಗಳು ಮಾಹಿತಿ ನೀಡಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಡೇಟಾಬೇಸ್‍ನಲ್ಲಿ ಸೇರ್ಪಡೆ ದೋಷಗಳನ್ನು ತೆಗೆದುಹಾಕಲು ಆಹಾರ ಫಲಾನುಭವಿಗಳ ಡೇಟಾಬೇಸ್ ಅನ್ನು ಈಗ ಬೇರೆ ಬೇರೆ ಇಲಾಖೆಗಳ ಫಲಾನುಭವಿಗಳ ಪಟ್ಟಿಗಳೊಂದಿಗೆ ಹೋಲಿಕೆ ಮಾಡಲಾಗುತ್ತಿದೆ.

ಕಳೆದ ಎರಡು ವರ್ಷಗಳಿಂದ ಇಲಾಖೆ ಯಾವುದೇ ಪಡಿತರ ಚೀಟಿ ನೀಡಿಲ್ಲ, ಮತ್ತು ಸಾಂಕ್ರಾಮಿಕ ರೋಗದ ಒಂದು ವರ್ಷಕ್ಕೂ ಹೆಚ್ಚು ಕಾಲ ಅಕ್ರಮ ಫಲಾನುಭವಿಗಳನ್ನು ತೆಗೆದು ಹಾಕಲು ಬಳಸಿಕೊಳ್ಳಲಾಗಿದೆ. ಡೇಟಾವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

Facebook Comments