ಸ್ವಾತಂತ್ರ್ಯೋತ್ಸವದಂದು ದಿನದಂದು ಮಹತ್ವದ ಯೋಜನೆ ಪ್ರಕಟಿಸಲಿದ್ದಾರೆ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.3-ಸ್ವಾತಂತ್ರ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಹೊಸ ಆರೋಗ್ಯ ಮಹತ್ವದ ಯೋಜನೆಯೊಂದನ್ನು ಪ್ರಕಟಿಸಲಿದ್ದು, ಪ್ರತಿಯೊಬ್ಬ ಭಾರತೀಯರಿಗೂ ವೈಯಕ್ತಿಕ ಗುರುತಿನ ಚೀಟಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್(ಎನ್‍ಡಿಎಚ್‍ಎಂ) ಯೋಜನೆ ಅನ್ವಯ ಈ ದೇಶದ ಪ್ರತಿಯೊಬ್ಬ ನಾಗರಿಕರು ವೈಯಕ್ತಿಕ ಆರೋಗ್ಯ ಚೀಟಿ ಮತ್ತು ಅವರ ಆರೋಗ್ಯ ಸ್ಥಿತಿಗತಿಗಳ ದಾಖಲೆಗಳ ಡಿಜಟೀಲಕರಣಗೊಳಿಸುವ ಉದ್ದೇಶವನ್ನು ಇದು ಹೊಂದಿದೆ.

ಆರೋಗ್ಯಕರ ಪ್ರಜೆಗಳಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಆರೋಗ್ಯಕರ ಸಮಾಜ ಸದೃಢ ದೇಶಕ್ಕೆ ಭದ್ರ ಬುನಾದಿ ಎಂಬ ತತ್ವದಲ್ಲಿ ನಂಬಿಕೆ ಹೊಂದಿರುವ ಪ್ರಧಾನಿ ಡಿಜಿಟಲ್ ಆರೋಗ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯ ಈಯೋಜನೆಯನ್ನು ಸಿದ್ದಪಡಿಸಿದ್ದು, ಸರ್ಕಾರ ಸಮ್ಮತಿ ನೀಡಿದೆ. ಈ ವಾರಾಂತ್ಯದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಎನ್‍ಡಿಎಚ್‍ಎಂ ಯೋಜನೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ.

Facebook Comments

Sri Raghav

Admin