ಭಾರತದ ಸ್ಪಿನ್ ದಾಳಿಗೆ ನ್ಯೂಜಿಲ್ಯಾಂಡ್ ತತ್ತರ, 62 ರನ್‍ಗಳಿಗೆ ಆಲ್‌ಔಟ್‌

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಡಿ.4- ಇಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲ್ಯಾಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ತೀವ್ರ ಕುತೂಹಲ ಘಟ್ಟ ತಲುಪಿದ್ದು, ಸ್ಪಿನ್ನರ್‍ಗಳ ಬೌಲಿಂಗ್‍ಗೆ ಬ್ಯಾಟ್ಸಮನ್‍ಗಳು ತತ್ತರಿಸಿ ಹೋಗಿದ್ದಾರೆ. ಮೊದಲ ಇನ್ನಿಂಗ್ಸ್‍ನ್ನು ಭಾರತ 325 ರನ್‍ಗಳಿಗೆ ಆಲೌಟ್ ಆಯಿತು. ನ್ಯೂಜಿಲೆಂಡ್‍ನ ಅಜಾಜ್ ಪಟೇಲ್ ಅದ್ಭುತ ಹಾಗೂ ದಾಖಲೆಯ ಬೌಲಿಂಗ್ ದಾಳಿಯು ಎಲ್ಲರ ಹುಬ್ಬೇರಿಸುವಂತೆ ಮಾಡಿತು.

ಭಾರತ ತಂಡದ ಹತ್ತು ವಿಕೆಟ್‍ಗಳನ್ನು ಕಬಳಿಸಿ ಹೊಸ ದಾಖಲೆ ಬರೆದು ನ್ಯೂಜಿಲೆಂಡ್ ಪಾಳೆಯದಲ್ಲಿ ಹಿರಿ ಹಿರಿ ಹಿಗ್ಗುವಂತೆ ಮಾಡಿದ್ದರು. ಆದರೆ ಇದು ಬಹಳ ಹೊತ್ತು ಉಳಿಯಲಿಲ್ಲ. ಪ್ರಥಮ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲ್ಯಾಂಡ್ ಬ್ಯಾಟ್ಸ್‍ಮನ್‍ಗಳು ಭಾರತದ ಶಿಸ್ತುಬದ್ದ ಬೌಲಿಂಗ್ ದಾಳಿಗೆ ತತ್ತರಿಸಿದರು. ವೇಗಿ ಸಿರಾಜ್ ಅವರ ಯಾಕರ್ ದಾಳಿಗೆ ಆರಂಭಿಕ ಬಾಟ್ಸಮನ್‍ಗಳಾದ ಲ್ಯಾಥನ್ ಮತ್ತು ಯಂಗ್ ಯಾವುದೇ ಪ್ರತ್ಯುತ್ತರ ನೀಡದೇ ಪೆವಿಲಿಯನ್‍ಗೆ ಮರಳಿದರು.

ನಂತರ ಸ್ಪಿನ್ ದಾಳಿ ಶುರುವಾಗಿ ಅಕ್ಷರ್ ಪಟೇಲ್ ಮಿಚಿಲ್ ವಿಕೆಟ್ ಉರುಳಿಸಿದರೆ, ಹೆನ್ರಿ ಅವರನ್ನು ಕ್ಲೀನ್ ಬೋಲ್ಡ್ ಮಾಡುವ ಮೂಲಕ ಅಶ್ವಿನ್ ಮಿಂಚಿದರು. ನಂತರ ಜಯಂತ್ ಯಾದವ್ ಕೂಡ ಲಯ ಕಂಡುಕೊಂಡು ರಿಚನ್ ರವೀಂದ್ರ ಅವರ ವಿಕೆಟ್ ಪಡೆದರು. ಉಳಿದಂತೆ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಇಂಗ್ಲೆಂಡ್ ಪಾಳೆಯವನ್ನು ಕೆಡವಿ ಹಾಕಿದರು.

ಕೇವಲ 62 ರನ್‍ಗಳಿಗೆ ನ್ಯೂಜಿಲ್ಯಾಂಡ್ ಸರ್ವಪತನ ಕಂಡಿತು. ಅಶ್ವಿನ್ ಭಾರತದ ಪರ 4 ವಿಕೆಟ್ ಪಡೆದರೆ ಅಕ್ಷರ್ ಪಟೇಲ್ 2 ಮೊಹಮ್ಮದ್ ಸಿರಾಜ್ 3 ವಿಕೆಟ್ ಹಾಗೂ ಜಯಂತ್ ಯಾದವ್ ಒಂದು ವಿಕೆಟ್ ಪಡೆದರು. ನಾಯಕ ವಿರಾಟ್ ಕೊಹ್ಲಿ ಅವರ ಸಮಯೋಜಿತ ಆಟ ಮತ್ತು ಪಿಚ್‍ನ ಬಗ್ಗೆ ತಿಳಿದುಕೊಂಡು ಮೂರು ಸ್ಪಿನರ್‍ಗಳನ್ನು ತಂಡಕ್ಕೆ ಸೇರಿಸಿಕೊಂಡಿದ್ದರು.

ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್‍ನಲ್ಲಿ 295 ರನ್‍ಗಳ ಹಿನ್ನಡೆ ಅನುಭವಿಸಿ ಫಾಲೋ ಆನ್ ಭೀತಿ ಇತ್ತು. ಆದರೆ ವಿರಾಟ್ ಕೊಹ್ಲಿ ಅವರು ದೃಢ ನಿರ್ಧಾರ ಮಾಡಿ ದ್ವಿತಿಯ ಇನ್ನಿಂಗ್ಸ್‍ನಲ್ಲಿ ದೊಡ ಮೊತ್ತ ಕಲೆ ಹಾಕಲು ಬ್ಯಾಟಿಂಗ್ ಆಯ್ದುಕೊಂಡರು.
ಅಂತಿಮವಾಗಿ ಭಾರತ ದ್ವಿತೀಯ ಇನ್ನಿಂಗ್ಸ್‍ನಲ್ಲಿ ಎಚ್ಚರಿಕೆಯ ಆಟ ಪ್ರದರ್ಶಿಸಿ ಮುನ್ನುಗಿದೆ.

Facebook Comments