ಸರಣಿ ಸ್ವೀಪ್ ಮಾಡಿದ ಕಿವೀಸ್

ಈ ಸುದ್ದಿಯನ್ನು ಶೇರ್ ಮಾಡಿ

ವೆಲ್ಲಿಂಗ್ಟನ್, ಮಾ. 26- ಬಾಂಗ್ಲಾ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಅತಿಥೇಯ ನ್ಯೂಜಿಲ್ಯಾಂಡ್ ತಂಡವು ಕ್ಲೀನ್‍ಸ್ವೀಪ್ ಸಾಧಿಸಿದೆ. ಸರಣಿಯ ಆರಂಭಿಕ ಎರಡು ಪಂದ್ಯಗಳನ್ನು ಗೆದ್ದು ಕ್ಲೀನ್ ಸ್ವೀಪ್‍ನ ಹೊಸ್ತಿಲಲ್ಲಿದ್ದ ಕಿವೀಸ್‍ಗೆ ಡೇವನ್ ಕೊನ್ವೆ (126 ರನ್, 17 ಬೌಂಡರಿ) ಹಾಗೂ ಜೇಮ್ಸ್ ನಿಶೀಮ್ ಅವg (5 ವಿಕೆಟ್) ಬೌಲಿಂಗ್ ದಾಳಿಯು ಮತ್ತೊಂದು ಗೆಲುವು ತಂದುಕೊಟ್ಟರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ಡೇವನ್ ಕೊನ್ವೆ (126ರನ್, 17 ಬೌಂಡರಿ), ಡೇರೆಲ್ ಮಿಚ್ಚಲ್ (100 ರನ್ ಅಜೇಯ, 9 ಬೌಂಡರಿ, 2 ಸಿಕ್ಸರ್) ನೆರವಿನಿಂದ ನಿಗಧಿತ 50 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 318 ರನ್ ಗಳಿಸಿತು.

ಕೊನ್ವೆ ಹಾಗೂ ಮಿಚ್ಚಲ್ 5ನೆ ವಿಕೆಟ್‍ಗೆ 159 ರನ್‍ಗಳ ಜೊತೆಯಾಟ ನೀಡಿದರೆ, ಬಾಂಗ್ಲಾ ಪರ ರುಬೆಲ್ ಹುಸೇನ್ 3 ವಿಕೆಟ್, ಮುಷ್ತಾಫಿಜುರ್ ರೆಹಮಾನ್, ಟಸ್ಕಿನ್ ಅಹಮದ್ ಹಾಗೂ ಸೌಮ್ಯ ಸರ್ಕಾರ್ ತಲಾ 1 ವಿಕೆಟ್ ಕಬಳಿಸಿದರು.

ಬಾಂಗ್ಲಾಗೆ ಆರಂಭಿಕ ಆಘಾತ:
ಕಿವೀಸ್ ನೀಡಿದ 319 ರನ್‍ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡದ ಮೊತ್ತ 50 ರನ್‍ಗಳಾಗುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ನಂತರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್ ಮಹಮದುಲ್ಲಾರ ಅಜೇಯ 76 ರನ್‍ಗಳಿಂದ 42.4 ಓವರ್‍ಗಳಲ್ಲಿ 154 ರನ್ ಗಳಿಸಿ ಅಲೌಟ್ ಆಗುವ ಮೂಲಕ 164 ಬೃಹತ್ ರನ್‍ಗಳ ಹೀನಾಯ ಸೋಲು ಕಾಣುವ ಮೂಲಕ ಸರಣಿಯನ್ನು 3-0ಯಿಂದ ಕೈಚೆಲ್ಲಿದರು.

ನ್ಯೂಜಿಲ್ಯಾಂಡ್ ಪರ ಜೇಮ್ಸ್ ನಿಸ್ಸೀಮ್ 5 ವಿಕೆಟ್ ಕಬಳಿಸಿದರೆ, ಮ್ಯಾಟ್ ಹೆನ್ರಿ 4 ಹಾಗೂ ಕೇಲ್ ಜೆಮ್ಮಿಸನ್ 1 ವಿಕೆಟ್ ಕೆಡವಿದರು. ಪಂದ್ಯ ಪುರುಷೋತ್ತಮ ಹಾಗೂ ಸರಣಿ ಪುರುಷೋತ್ತಮ ಪ್ರಶಸ್ತಿಗೆ ಡೇವನ್ ಕೊನ್ವೆ ಪಾತ್ರರಾದರು.

Facebook Comments