ನ್ಯೂಜಿಲ್ಯಾಂಡ್‍ನ ಆಕ್ಲಾಂಡ್‍ನಲ್ಲಿ ಮತ್ತೆ 3 ದಿನ ಲಾಕ್‍ಡೌನ್

ಈ ಸುದ್ದಿಯನ್ನು ಶೇರ್ ಮಾಡಿ

ವೆಲ್ಲಿಂಗ್ಟನ್, ಫೆ.14- ನ್ಯೂಜಿಲ್ಯಾಂಡ್‍ನ ಅತಿ ದೊಡ್ಡ ನಗರ ಆಕ್ಲಾಂಡ್‍ನಲ್ಲಿ ಕೊರೊನಾ ಸೋಂಕು ವ್ಯಾಪಿಸುವ ಭೀತಿಯಿಂದ ಮೂರು ದಿನ ಲಾಕ್‍ಡೌನ್ ಘೋಷಿಸಲಾಗಿದೆ. ಸಂಪೂರ್ಣ ನಗರ ಇಂದು ಮಧ್ಯರಾತ್ರಿಯಿಂದ ಬುಧವಾರದವರೆಗೆ ಸ್ತಬ್ಧಗೊಳ್ಳಲಿದೆ. ಈಗಾಗಲೇ ಕೊರೊನಾದಿಂದಾಗಿ ದೇಶದಲ್ಲಿ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

ಆಕ್ಲಾಂಡ್‍ನಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ತುರ್ತು ಸಭೆ ಸೇರಿದ ನ್ಯೂಜಿಲ್ಯಾಂಡ್ ಸರ್ಕಾರದ ಸಂಪುಟ ಸಚಿವರು ಲಾಕ್‍ಡೌನ್ ನಿರ್ಧಾರವನ್ನು ಘೋಷಿಸಿದ್ದಾರೆ.

Facebook Comments

Sri Raghav

Admin