ಸೋಲು ತಪ್ಪಿಸಿಕೊಂಡ ನ್ಯೂಜಿಲ್ಯಾಂಡ್, ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಕಾನ್ಪುರ, ನ.29- ತೀವ್ರ ಕುತೂಹಲ ಕೆರಳಿಸಿದ್ದ ಪ್ರಥಮ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಸೋಲಿನ ಸುಳಿಯಲ್ಲಿ ಸಿಲುಕಿದ್ದ ನ್ಯೂಜಿಲ್ಯಾಂಡ್ ಕೊನೆಗೂ ಅದರಿಂದ ತಪ್ಪಿಸಿಕೊಂಡು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಪಂದ್ಯದ ಕೊನೆಯ ದಿನದಾಟದಲ್ಲಿ ಇಂದು 14 ರನ್‍ಗಳಿಂದ ದಿನದಾಟ ಆರಂಭಿಸಿದ ನ್ಯೂಜಿಲ್ಯಾಂಡ್‍ನ ಲಾಥಮ್ ಮತ್ತು ನಾಯಕ ವಿಲಿಯಮ್ಸ್ ಜೋಡಿ ಭೋಜನ ವಿರಾಮದವರೆಗೂ ಉತ್ತಮ ಜತೆಯಾಟ ಪ್ರದರ್ಶಿಸಿದರು.
ಲ್ಯಾಥಮ್ ಅರ್ಧ ಶತಕ ಸಿಡಿಸಿ ನ್ಯೂಜಿಲೆಂಡ್‍ಗೆ ಆಸರೆಯಾದರು. ಭೋಜನ ವಿರಾಮದ ನಂತರ ಸ್ಪಿನ್ ದಾಳಿಗೆ ಇಳಿದ ರವೀಂದ್ರ ಜಡೇಜಾ ಮತ್ತು ಅಶ್ವಿನ್ ಜೋಡಿ ನ್ಯೂಜಿಲೆಂಡ್ ಬ್ಯಾಟ್ಸ್‍ಮೆನ್‍ಗಳನ್ನು ಒಬ್ಬರ ಮೇಲೊಬ್ಬರಂತೆ ಪೆವಿಲಿಯನ್‍ಗೆ ಅಟ್ಟುವಲ್ಲಿ ಯಶಸ್ವಿಯಾದರು.

ಲ್ಯಾಥಮ್(52) ಔಟಾಗುತ್ತಿದ್ದಂತೆಯೇ ವಿಲಿಯಮ್ ಸನ್ ಕೂಡ ಪೆವಿಲಿಯನ್ ಸೇರಿದರು. ನಂತರ ಒಬ್ಬರ ನಂತರ ಒಬ್ಬರು ಔಟಾದಾಗ ಭಾರತ ಗೆಲುವಿನ ಹುಮ್ಮಸ್ಸು ಕಂಡು ಬಂತು.ಕೊನೆಯ 10 ಓವರ್‍ಗಳಲ್ಲಿ 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ರವೀಂದ್ರ ಮತ್ತು ಸೌದಿ ಜೋಡಿ ಸ್ವಲ್ಪ ಪ್ರತಿರೋಧ ವ್ಯಕ್ತಪಡಿಸಿದರು.

ಭಾರತೀಯ ಸ್ಪಿನ್ ದಾಳಿಯನ್ನು ಡಿಫೆಂಡ್ ಮಾಡುವ ಮೂಲಕ ಪಂದ್ಯ ಡ್ರಾ ಮಾಡಿಕೊಳ್ಳುವ ಆಲೋಚನೆಯಲ್ಲಿಯೇ ಇದ್ದರು.ಆದರೆ ಟೀಂ ಸೌದಿ ಔಟಾದಾಗ ಪಂದ್ಯ ಇನ್ನೇನು ಮುಗಿದೇ ಹೋಯಿತು. ಭಾರತ ಗೆಲುವಿನ ಹಾದಿ ಸುಗಮವಾಯಿತು ಅಂದುಕೊಂಡರು.

ಆದರೆ ನಂತರ ಬಂದ ಪಟೇಲ್ ಮತ್ತು ರವೀಂದ್ರ ಜೋಡಿ ಎಚ್ಚರಿಕೆಯ ಆಟ ಪ್ರದರ್ಶಿಸಿ ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಂಡರು. ಪಂದ್ಯ ಮುಗಿಯುವ ಎರಡು ಓವರ್‍ಗಳ ಮುಂಚೆ ಅಕ್ಷರ್ ಪಟೇಲ್ ಬೌಲಿಂಗ್‍ನಲ್ಲಿ ಕೊನೆಯ ಕ್ರಮಾಂಕದ ಪಟೇಲ್ ಎಲ್‍ಬಿಡಬ್ಲ್ಯು ಬಲೆಗೆ ಬೀಳುವುದರಲ್ಲಿ ಸ್ವಲ್ಪದರಲ್ಲೇ ಪಾರಾದರು.

ಅಂತಿಮವಾಗಿ ದಿನದಾಟದ 96 ಓವರ್‍ಗಳ ನಂತರ ಪಂದ್ಯವನ್ನು ಮಂದ ಬೆಳಕಿನ ಕಾರಣ ನಿಲ್ಲಿಸಲಾಯಿತು. ನ್ಯೂಜಿಲೆಂಡ್ ಕೊನೆಗೂ ಪಂದ್ಯವನ್ನು ಉಳಿಸಿಕೊಂಡು ನಿಟ್ಟುಸಿರು ಬಿಟ್ಟರೆ ಭಾರತದ ಆಟಗಾರರು ನಿರಾಸೆಯಿಂದಲೇ ಪೆವಿಲಿಯನ್ ಸೇರಿದರು.
ಮೂರು ಪಂದ್ಯಗಳ ಸರಣಿಯಲ್ಲಿ ಈಗ ಮೊದಲ ಪಂದ್ಯ ಡ್ರಾ ಆಗಿದೆ.
ಸಂಕ್ಷಿಪ್ತ ಸ್ಕೋರು
ಮೊದಲ ಇನ್ನಿಂಗ್ಸ್
ಭಾರತ :111.1 ಓವರ್‍ಗಳಲ್ಲಿ 345.
ನ್ಯೂಜಿಲೆಂಡ್: ಪ್ರಥಮ ಇನ್ನಿಂಗ್ಸ್ 142.5 ಓವರ್‍ಗಳಲ್ಲಿ 396.
ಭಾರತ ದ್ವಿತೀಯ ಇನ್ನಿಂಗ್ಸ್: 7 ವಿಕೆಟ್ ನಷ್ಟಕ್ಕೆ 165 ರನ್ (ಡಿಕ್ಲೇರ್)
ನ್ಯೂಜಿಲೆಂಡ್: 9 ವಿಕೆಟ್ ನಷ್ಟಕ್ಕೆ 161.
ಫಲಿತಾಂಶ: ಡ್ರಾ

Facebook Comments

Sri Raghav

Admin