ಗುಪ್ಟಿಲ್, ಫಿಲಿಪ್ಸ್ ಅಬ್ಬರ, ಸರಣಿ ವಶಪಡಿಸಿಕೊಂಡ ಕಿವೀಸ್

ಈ ಸುದ್ದಿಯನ್ನು ಶೇರ್ ಮಾಡಿ

ವೆಲ್ಲಿಂಗ್ಟನ್,ಮಾ.7-ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ ನ್ಯೂಜಿಲ್ಯಾಂಡ್ ತಂಡವು 7 ವಿಕೆಟ್‍ಗಳ ಮೂಲಕ ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದ್ದಾರೆ. 5 ಪಂದ್ಯಗಳ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಜಯಗಳಿಸಿದ್ದ ಕೇನ್‍ವಿಲಿಯಮ್ಸ್ ನಾಯಕತ್ವದ ನ್ಯೂಜಿಲ್ಯಾಂಡ್ ನಂತರ ಎರಡು ಪಂದ್ಯಗಳನ್ನು ಸೋಲುವ ಮೂಲಕ ಸರಣಿಯನ್ನು 2-2 ರಿಂದ ಸಮಬಲಗೊಳಿಸಿಕೊಂಡಿತು. ಇಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಆಟಗಾರರ ಸಂಘಟಿತ ಹೋರಾಟದಿಂದ ಸರಣಿಯನ್ನು ವಶಪಡಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 8 ರನ್‍ಗಳಾಗುವಷ್ಟರಲ್ಲಿ ಆರಂಭಿಕ ಆಟಗಾರ ಜೋಸ್ ಫಿಲಿಪ್ (2)ರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

# ಪಿಂಚ್- ವೇಡ್ ಆಸರೆ:
ಎರಡಂಕಿ ದಾಟುವ ಮುನ್ನವೇ ಫಿಲಿಪ್ಸ್ ವಿಕೆಟ್ ಕಳೆದುಕೊಂಡರು 2 ನೆ ವಿಕೆಟ್‍ಗೆ ಜೊತೆಗೂಡಿದ ನಾಯಕ ಆ್ಯರನ್ ಫಿಂಚ್ ಹಾಗೂ ವಿಕೆಟ್ ಕೀಪರ್ ಮ್ಯಾಥ್ಯೂವೇಡ್ ಅವರು ಕಿವೀಸ್ ಬೌಲರ್‍ಗಳನ್ನು ದಿಟ್ಟವಾಗಿ ಎದುರಿಸಿ 66 ರನ್‍ಗಳ ಜೊತೆಯಾಟ ನೀಡಿ ಬೃಹತ್ ಮೊತ್ತ ಕಲೆ ಹಾಕುವ ಸೂಚನೆ ನೀಡಿದರು.

ಆದರೆ ಸ್ಪಿನ್ನರ್ ಇಶ್‍ಸೋಯ ಬೌಲಿಂಗ್ ಜಾದೂಗೆ ಸಿಲುಕಿದ ಫಿಂಚ್ (36 ರನ್, 5 ಬೌಂಡರಿ, 1 ಸಿಕ್ಸರ್) ಪೆವಿಲಿಯನ್‍ನತ್ತ ಹೆಜ್ಜೆ ಹಾಕಿದರೆ ಅರ್ಧಶತಕದ ಅಂಚನಲ್ಲಿದ್ದ ಮ್ಯಾಥ್ಯೂ ವೇಡ್ (44ರನ್, 3 ಬೌಂಡರಿ, 2 ಸಿಕ್ಸರ್) ಬೌಲ್ಟ್‍ಗೆ ವಿಕೆಟ್ ಒಪ್ಪಿಸಿದರು.

ಫಿಂಚ್ ಹಾಗೂ ವೇಡ್ ಔಟಾದ ನಂತರ ಆಸ್ಟ್ರೇಲಿಯಾದ ಬ್ಯಾಟ್ಸ್‍ಮನ್‍ಗಳು ಮೈದಾನದಲ್ಲಿ ಪೆರೇಡ್ ನಡೆಸಿದರು. ಸೋಟಕ ಆಟಗಾರ ಮ್ಯಾಕ್ಸ್‍ವೆಲ್ (1ರನ್), ಸ್ಟೋನಿಸ್ (10ರನ್) ಬಲು ಬೇಗ ಔಟಾಗಿದ್ದರಿಂದ ನಿಗತ 20 ಓವರ್‍ಗಳಲ್ಲಿ 8 ವಿಕೆಟ್ ಕಳೆದುಕೊಂಡು ಪಿಂಚ್ ಪಡೆ 142 ರನ್ ಗಳಿಸಿತು.  ನ್ಯೂಜಿಲ್ಯಾಂಡ್ ಪರ ಸ್ಪಿನ್ನರ್ ಇಶ್ ಸೋ 3 ವಿಕೆಟ್ ಕಬಳಿಸಿದರೆ, ಟ್ರೆಂಟ್ ಬೋಲ್ಟ್ , ಟೀಮ್ ಸೌಥಿ ತಲಾ 2, ಮಾರ್ಕ್ ಕ್ಯಾಂಪ್‍ಮನ್ 1 ವಿಕೆಟ್ ಕೆಡವಿದರು.

# ನ್ಯೂಜಿಲ್ಯಾಂಡ್ ಉತ್ತಮ ಆರಂಭ:
ಆಸೀಸ್ ನೀಡಿದ 143 ರನ್‍ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್‍ನ ಆರಂಭಿಕ ಆಟಗಾರರಾದ ಡೇವೋನ್ ಕೋನ್‍ವೇ (36ರನ್, 3 ಬೌಂಡರಿ, 1 ಸಿಕ್ಸರ್) ಹಾಗೂ ಮಾರ್ಟಿನ್ ಗುಪ್ಟಿಲ್ (71 ರನ್, 7 ಬೌಂಡರಿ, 4 ಸಿಕ್ಸರ್) ಮೊದಲ ವಿಕೆಟ್‍ಗೆ 106 ರನ್‍ಗಳ ಕಾಣಿಕೆ ನೀಡುವ ಮೂಲಕ ಗೆಲುವಿನ ಸೂಚನೆ ನೀಡಿದರು.

ಗುಪ್ಟಿಲ್, ಕೋನ್‍ವೇ ಔಟಾದ ನಂತರ ಆರ್ಭಟಿಸಿದ ಗ್ಲೇನ್ ಫಿಲಿಪ್ಸ್ (34 ರನ್, 5 ಬೌಂಡರಿ, 2 ಸಿಕ್ಸರ್) ಕೇವಲ 15.3 ಓವರ್‍ಗಳಲ್ಲೇ 143 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಆಸ್ಟ್ರೇಲಿಯಾ ಪರ ರಿಲೈ ಮಿಂಡರ್ತ್ 2, ಜೇ ರಿಚರ್ಡ್‍ಸನ್ 1 ವಿಕೆಟ್ ಕಬಳಿಸಿದರು.

ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ಮಾರ್ಟಿನ್ ಗುಪ್ಟಿಲ್ ಪಂದ್ಯ ಪುರುಷೋತ್ತಮರಾದರೆ, ಸರಣಿಯುದ್ದಕ್ಕೂ ತಮ್ಮ ಸ್ಪಿನ್ ಪ್ರದರ್ಶನ ತೋರಿದ್ದ ಇಶ್ ಸೋ ಸರಣಿ ಪುರುಷೋತ್ತಮರಾದರು.

Facebook Comments

Sri Raghav

Admin