ನ್ಯೂಜಿಲೆಂಡ್ ಮಸೀದಿ ಹತ್ಯಾಕಾಂಡ ಬಗ್ಗೆ ಉನ್ನತ ತನಿಖೆಗೆ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಜಿಲೆಂಡ್ ,ಮಾ.25- ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ನ್ಯೂಜಿಲೆಂಡ್ ಮಸೀದಿ ಹತ್ಯಾಕಾಂಡದ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು ಎಂದು ಇಲ್ಲಿನ ಪ್ರಧಾನಿಜಸಿಂಡ್ ಆ್ಯಡ್ರಮ್ ಆದೇಶ ನೀಡಿದ್ದಾರೆ.

ಸರ್ಕಾರದಿಂದಲೇ ವಿಶೇಷ ತಂಡವನ್ನು ರಚಿಸಿ ಉನ್ನತಾಧಿಕಾರಿಗಳನ್ನು ನೇಮಕ ಮಾಡಿ ಶೀಘ್ರದಲ್ಲಿ ಮಸೀದಿ ದುರಂತದ ಹಿಂದೆ ಯಾವ ಸಂಘಟನೆಗಳ ಕೈವಾಡವಿದೆ ಎಂಬ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ.

ನ್ಯೂಜಿಲೆಂಡ್‍ನ ಪ್ರಬಲ ನ್ಯಾಯಾಂಗ ತನಿಖೆ ಮೇಲೆ ಓರ್ವ ವ್ಯಕ್ತಿ ಏಕಾಏಕಿ ಮಸೀದಿ ಮೇಲೆ ದಾಳಿ ನಡೆಸಿ ಬರೋಬ್ಬರಿ 50 ಮಂದಿಯನ್ನು ಬಲಿ ಪಡೆಯಲು ಕಾರಣವೇನು? ಆ ನರ ರಾಕ್ಷಸರ ಹಿಂದೆ ಯಾರೆಲ್ಲ ಇದ್ದಾರೆ. ಆತ ಆ ರೀತಿ ದಾಳಿ ಮಾಡಲು ಕಾರಣವೇನು? ಹೀಗೆ ಹಲವು ಆಯಾಮಗಳಡಿ ನ್ಯಾಯಾಲಯ ಸುದೀರ್ಘ ತನಿಖೆ ನಡೆಸುತ್ತಿದೆ.

ಮಸೀದಿಯಲ್ಲಿ ನಡೆದ ಉಗ್ರನ ಅಟ್ಟಹಾಸಕ್ಕೆ ಯಾರು ಹೊಣೆ, ಆತ ಮುಸ್ಲಿಮರನ್ನೇ ಟಾರ್ಗೆಟ್ ಮಾಡಿದ್ದು ಯಾಕೆ, ಇದರ ಹಿಂದೆ ಯಾವ ಉಗ್ರ ಸಂಘಟನೆಗಳ ಕುಮ್ಮಕ್ಕು ಇದೆ ಎಂದು ನ್ಯೂಜಿಲೆಂಡ್‍ನಲ್ಲಿರುವ ಕೆಲವು ಮುಸ್ಲಿಮ್ ವಿಮರ್ಶಕರು ಪ್ರಶ್ನಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಓರ್ವ ವ್ಯಕ್ತಿ ಫೇಸ್‍ಬುಕ್‍ನಲ್ಲಿ ಲೈವ್ ಕೊಟ್ಟು ಏಕಾಏಕಿ ಮಸೀದಿಗೆ ನುಗ್ಗಿ ಅಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಭಕ್ತರನ್ನು ಗುಂಡಿಟ್ಟು50 ಮಂದಿಯನ್ನು ಹತ್ಯೆ ಮಾಡಿ ಅಟ್ಟಹಾಸ ಮೆರೆದಿದ್ದ.

Facebook Comments