ನ್ಯೂಜಿಲೆಂಡ್‍ನ ವೈಟ್ ಐಲ್ಯಾಂಡ್ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ, ಕೆಲವರು ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ವೆಲ್ಲಿಂಗ್ಟನ್,ಡಿ.9- ನ್ಯೂಜಿಲೆಂಡ್‍ನ ಉತ್ತರ ಭಾಗದ ವೈಟ್ ಐಲ್ಯಾಂಡ್ ದ್ವೀಪದಲ್ಲಿ ಜ್ವಾಲ್ವಾಮುಖಿ ಸ್ಫೋಟಗೊಂಡಿದ್ದು ಅನೇಕರಿಗೆ ಗಾಯಗಳಾಗಿವೆ. ಈ ದುರ್ಘಟನೆಯಲ್ಲಿ ಕೆಲವರು ನಾಪತ್ತೆಯಾಗಿದ್ದಾರೆ. ನ್ಯೂಜಿಲೆಂಡ್ ಪ್ರಧಾನಮಂತ್ರಿ ಜಸಿಂಡಾ ಅಡ್ರೆನ್ ಈ ವಿಷಯ ಖಚಿತಪಡಿಸಿದ್ದಾರೆ.

ವೈಟ್ ಐಲ್ಯಾಂಡ್ ಅಗ್ನಿಪರ್ವತ ಸಕ್ರಿಯವಾಗಿದ್ದ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಪ್ರವಾಸಿಗರು ಆ ಪ್ರದೇಶದಲ್ಲಿದ್ದರು. ಜ್ವಾಲ್ವಾಮುಖಿ ಲಾವಾರಸ ಹೊರಹೊಮ್ಮಿಸುತ್ತಿದ್ದು, ಅನೇಕರಿಗೆ ಸುಟ್ಟ ಗಾಯಗಳಾಗಿವೆ. ಜ್ವಾಲಾಮುಖಿಗೆ ತೀರಾ ಸಮೀಪದಲ್ಲಿದ್ದ ಕೆಲವು ಪ್ರವಾಸಿಗರು ನಾಪತ್ರೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ನಾಪತ್ತೆಯಾದವರಿಗಾಗಿ ರಕ್ಷಣಾ ಕಾರ್ಯಕರ್ತರು ತೀವ್ರ ಶೋಧ ಮುಂದುವರೆಸಿದ್ದಾರೆ. ಜ್ವಾಲಾಮುಖಿ ಬಳಿ ಅಪಾಯಕ್ಕೆ ಸಿಲುಕಿದ್ದ ಅನೇಕ ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.

Facebook Comments

Sri Raghav

Admin