24 ಗಂಟೆ ಅವಧಿಯಲ್ಲಿ ಒಂದೇ ಆಸ್ಪತ್ರೆಯಲ್ಲಿ 9 ಶಿಶುಗಳ ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ,ಡಿ.11- ಕಳೆದ 24 ಗಂಟೆಗಳ ಅವಧಿಯಲ್ಲಿ 9 ಶಿಶುಗಳು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಕೋಟಾದ ಜೆಕೆ ಲೋನ್ ಆಸ್ಪತ್ರೆಯಲ್ಲಿ ನಡೆದಿದೆ. ಒಂಭತ್ತು ಮಕ್ಕಳ ಪೈಕಿ ಐದು ಮಕ್ಕಳು ನಿನ್ನೆ ರಾತ್ರಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.  ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಮಕ್ಕಳು ಮೃತಪಟ್ಟಿವೆ ಎಂದು ಪೋಷಕರು ದೂರಿದ್ದಾರೆ.

ನಾವು ಆಸ್ಪತ್ರೆಗೆ ಬಂದಾಗ ಯಾವ ಸಿಬ್ಬಂದಿಗಳು ನಮ್ಮನ್ನು ವಿಚಾರಿಸಲು ಇರಲಿಲ್ಲ. ಕೆಲವು ಸ್ಟಾಫ್‍ಗಳು ವೈದ್ಯರು ಬಂದು ನೋಡುತ್ತಾರೆ ಎಂದು ಹೇಳಿ ಸುಮಾರು ಹೊತ್ತು ಕಾಯಿಸಿದರು ಎಂದು ದೂರಿದ್ದಾರೆ. ಘಟನೆಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ರಘು ಶರ್ಮ, ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ.

ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರು ಮತ್ತು ಸೂಪರಿಡಿಟೆಂಡ್ ಅವರಿಂದ ಮಾಹಿತಿ ಪಡೆದುಕೊಂಡಿದ್ದೇನೆ. 9 ಮಕ್ಕಳ ಪೈಕಿ ಮೂರು ಮಕ್ಕಳು ಆಸ್ಪತ್ರೆಗೆ ಬರುವ ಮುಂಚೆಯೇ ಸಾವನ್ನಪ್ಪಿದ್ದಾರೆ. ಇನ್ನು ಮೂರು ಮಕ್ಕಳು ಹುಟ್ಟತ್ತಲೇ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದವೆಂದು ವೈದ್ಯರು ವಿವರ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಶಿಶುಗಳ ಮರಣ ಕೋಟಾದ ಜೆಕೆ ಲೋನ್ ಆಸ್ಪತ್ರೆಯಲ್ಲಿ ಇದೆ ಮೊದಲೇನಲ್ಲ. ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಕಳೆದ ವರ್ಷ 100 ನವಜಾತ ಶಿಶುಗಳು ಸಾವನ್ನಪ್ಪಿದ್ದವು.

Facebook Comments